ಮಂಗಳೂರು : ಗೌಡ ಸಾರಸ್ವತ ಬ್ರಾಹ್ಮಣ ಮಹಿಳಾ ವೃಂದ ಮಂಗಳೂರು ವತಿಯಿಂದ ‘ಕೊಂಕಣಿ ದಿವಸ ಆಚರಣೆ’ಯು ದಿನಾಂಕ 21-01-2024ರಂದು ಮಂಗಳೂರಿನ ಗೋಕರ್ಣಮಠದ ದ್ವಾರಕಾನಾಥ ಭವನ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಶ್ರೀ ನಂದಗೋಪಾಲ ಶೆಣೈ ಮಾತನಾಡಿ “ಜಿ.ಎಸ್.ಬಿ. ಮಹಿಳಾ ವೃಂದ ತಮ್ಮ ಸಮುದಾಯದ ಮಹಿಳೆಯರನ್ನು ಸಂಘಟನೆ ಮಾಡಿ ನಡೆಸಿಕೊಂಡು ಹೋಗುವ ಕಾರ್ಯ ಶ್ಲಾಘನೀಯ.” ಎಂದರು. ಇದೇ ಸಂದರ್ಭದಲ್ಲಿ ಕೊಂಕಣಿ ಸಮಾಜ ಸೇವಕ ಗಜಾನನ ಪೈ ತೋನ್ಸೆ ಹಾಗೂ ಕೊಂಕಣಿ ಸಾಹಿತಿ ಗೌರಿ ಮೌಲ್ಯ ಇವರನ್ನು ಸಮ್ಮಾನಿಸಲಾಯಿತು. ದಿ. ಸುಧಾ ಆರ್. ಶೆಣೈ ಸ್ಮರಣಾರ್ಥ ಪ್ರಶಸ್ತಿಯನ್ನು ತಾರಾ ಶೆಣೈ ಅವರ ಪರವಾಗಿ ಅವರ ಮಕ್ಕಳು ಸಮ್ಮಾನವನ್ನು ಸ್ವೀಕರಿಸಿದರು.
ಕಾರ್ಯಕ್ರಮದ ಪೂರ್ವಭಾವಿಯಾಗಿ ನಡೆದ ಕೊಂಕಣಿ ಭಕ್ತಿಗೀತೆ ಹಾಗೂ ಭಾವಗೀತೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ವಸುಧಾ ಬಾಳಿಗಾ ನಡೆಸಿಕೊಟ್ಟರು. ಅಧ್ಯಕ್ಷೆ ನಯನಾ ರಾವ್ ಸ್ವಾಗತಿಸಿ, ಚಂದ್ರಿಕಾ ಮಲ್ಯ ನಿರೂಪಿಸಿ, ಕಾರ್ಯದರ್ಶಿ ವಿಜಯಲಕ್ಷ್ಮೀ ಕಾಮತ್ ವಂದಿಸಿದರು. ಮರೋಳಿ ಸಬಿತಾ ಕಾಮತ್ ಉಪಸ್ಥಿತರಿದ್ದರು.