ಬೆಂಗಳೂರು : ಪದ ಪ್ರಸ್ತುತ ಪಡಿಸುವ ‘ಕರ್ನಾಟಕ ಜಾನಪದ ಉತ್ಸವ’ ಜಾನಪದ ನಾಟಕ, ನೃತ್ಯ, ಗಾಯನ ಮತ್ತು ರಂಗ ಗೌರವ ಕಾರ್ಯಕ್ರಮಗಳು ದಿನಾಂಕ 19-02-2024ರಿಂದ 21-02-2024ರವರೆಗೆ ಬೆಂಗಳೂರಿನ ಮಲತ್ತಹಳ್ಳಿಯ ಕಲಾ ಗ್ರಾಮ ಸಮುಚ್ಚಯ ಭವನದಲ್ಲಿ ನಡೆಯಲಿದೆ.
ದಿನಾಂಕ 19-02-2024ರಂದು ಸಂಜೆ 6.30ಕ್ಕೆ ರಂಗ ತಜ್ಞರಾದ ನರೇಂದ್ರ ಬಾಬು ಇವರ ಅಧ್ಯಕ್ಷತೆಯಲ್ಲಿ ಜಾನಪದ ವಿದ್ವಾಂಸರಾದ ಡಾ. ಹಿ.ಚಿ. ಬೋರಲಿಂಗಯ್ಯ ಇವರು ಈ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಗೊ.ರು. ಚನ್ನಬಸಪ್ಪ ರಚನೆಯ ರಾಮಮೂರ್ತಿಯವರ ಸಂಗೀತ ಮತ್ತು ನಿರ್ದೇಶನದಲ್ಲಿ ಕರ್ನಾಟಕ ಜಾನಪದ ನಾಟಕ ‘ಸಾಕ್ಷಿ ಕಲ್ಲು’ ಪ್ರದರ್ಶನಗೊಳ್ಳಲಿದೆ.
ದಿನಾಂಕ 20-02-2024ರಂದು ಸುಮಾ ಆರ್. ಕಂಠಿ ಇವರ ನೃತ್ಯ ನಿರ್ದೇಶನದಲ್ಲಿ ‘ಕರ್ನಾಟಕ ಜಾನಪದ ನೃತ್ಯ ವೈಭವ’ ಪ್ರಸ್ತುತಿಗೊಳ್ಳಲಿದೆ. ಈ ಸಂದರ್ಭದಲ್ಲಿ ಖ್ಯಾತ ಆಯುರ್ವೇದ ತಜ್ಞರಾದ ಡಾ. ಅಬ್ದುಲ್ ಖಾದರ್, ಹಿರಿಯ ರಂಗತಜ್ಞರು ಹಾಗೂ ಕವಿಗಳಾದ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ, ಹಿರಿಯ ಸಾಹಿತಿ ಮತ್ತು ಪ್ರಕಾಶಕರಾದ ಅವಿರತ ಹರೀಶ್ ಮತ್ತು ಅಂತರಾಷ್ಟ್ರೀಯ ಚಿತ್ರ ಕಲಾವಿದರಾದ ಓ. ವೆಂಕಟೇಶ್ ಇವರುಗಳು ವೇದಿಕೆ ಹಂಚಿಕೊಳ್ಳಲಿದ್ದಾರೆ.
ದಿನಾಂಕ 21-02-2024ರಂದು ‘ಕರ್ನಾಟಕ ಜಾನಪದ ಗಾಯನ’ವನ್ನು ಗಾಯಕರಾದ ಡಿ. ದೇವರಾಜ್, ಅತಿಥಿ ಗಾಯಕರಾದ ಮಂಜುನಾಥ್ ಕೆ.ಎಸ್. ಮತ್ತು ತಂಡ ಹಾಗೂ ಶಂಕರ ಭಾರತಿಪುರ ಮತ್ತು ತಂಡದವರು ನಡೆಸಿಕೊಡಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಗಾಯಕರಾದ ಡಾ. ಅಪ್ಪಗೆರೆ ತಿಮ್ಮರಾಜು ಇವರು ಸಮಾರೋಪ ನುಡಿಗಳನ್ನಾಡಲಿದ್ದಾರೆ. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡಮಿ ನಿಕಟಪೂರ್ವ ಸದಸ್ಯರಾದ ಆನಂದ ಮಾದಲಗೆರೆ ಅಧ್ಯಕ್ಷತೆ ವಹಿಸಲಿದ್ದು, ರವೀಂದ್ರ ಕಲಾಕ್ಷೇತ್ರ ಮತ್ತು ಕಲಾಗ್ರಾಮದ ವ್ಯವಸ್ಥಾಪಕರಾದ ನರೇಂದ್ರಬಾಬು ಎಸ್. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.