ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ‘ಚಾಂದ್ರ ಮಧ್ವನವಮಿ’ ಕಾರ್ಯಕ್ರಮವು ದಿನಾಂಕ 18-02-2024ರಂದು ಉಡುಪಿಯ ಮಧ್ವ ಮಂಟಪ ಹಾಗೂ ರಾಜಾಂಗಣದಲ್ಲಿ ನಡೆಯಿತು. ಮಧ್ವ ಮಂಟಪದಲ್ಲಿ ನಡೆದ ಕಾರ್ಯಕ್ರಮದ ಆರಂಭದಲ್ಲಿ ಪೂರ್ವಾಹ್ನ ಘಂಟೆ 11.00ರಿಂದ ತೌಳವ ಮಾಧ್ವ ಒಕ್ಕೂಟದ ಸದಸ್ಯರಿಂದ ‘ಮಧ್ವನಾಮಾವಳಿ ಪಾರಾಯಣ’ ನಡೆಯಿತು. ಬಳಿಕ ವಿದ್ವಾನ್ ವಾಗೀಶ್ ಭಟ್ ಇವರಿಂದ ‘ಆಚಾರ್ಯ ಮಧ್ವ’ ಎಂಬ ವಿಷಯದಲ್ಲಿ ಉಪನ್ಯಾಸ ನಡೆಯಿತು. ಮಕ್ಕಳಿಗಾಗಿ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ರಸಪ್ರಶ್ನೆ ಆಯೋಜಿಸಲಾಗಿತ್ತು.
ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಭಾಜನಾ ಮಂಡಳಿಗಳಿಂದ ಮಧ್ವಾಚಾರ್ಯರ ಚರಿತ್ರೆಯ ಹಿನ್ನೆಲೆಯ ಸಾಮೂಹಿಕ ಮಧ್ವಗಾಯನ ಹಾಗೂ ಪರ್ಯಾಯ ಶ್ರೀ ಪಾದದ್ವಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ, ಆಶೀರ್ವಚನ ಹಾಗೂ ವಿದ್ವಾಂಸರಿಗೆ ಅನುಗ್ರಹ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಪ್ರಿಯಾಂಜಲಿ ರಾವ್ ಹಾಗೂ ಶ್ರೀಸ್ವರಂ ಮುಂಬೈ ಇವರಿಂದ ಭರತನಾಟ್ಯ ಕಾರ್ಯಕ್ರಮ ಪ್ರಸ್ತುತಗೊಂಡಿತು.