ಬೆಳ್ತಂಗಡಿ : ಪ್ರೊ. ಮಧೂರು ಮೋಹನ ಕಲ್ಲೂರಾಯ ಮತ್ತು ಬಳಗದವರಿಂದ ಶ್ರೀ ಕ್ಷೇತ್ರ ಪುತ್ರಬೈಲಿನ ಶ್ರೀ ಮಹಮ್ಮಾಯಿ ಅಮ್ಮನವರ ದೇವಸ್ಥಾನದಲ್ಲಿ ಮಾರಿಪೂಜೋತ್ಸವದ ಪ್ರಯುಕ್ತ ‘ಕದಂಬ ಕೌಶಿಕೆ’ ಎಂಬ ಯಕ್ಷಗಾನ ತಾಳಮದ್ದಳೆಯು ದಿನಾಂಕ 25-02-2024ರಂದು ನಡೆಯಿತು.
ಮೇಳದಲ್ಲಿ ಭಾಗವತರಾಗಿ ಕುಮಾರಿ ಶ್ರೀ ವಿದ್ಯಾ ಐತಾಳ್, ಶ್ರೀ ಜನಾರ್ದನ ತೋಳ್ಪಾಡಿತ್ತಾಯ, ಶ್ರೀ ಮುರಳೀಧರ ಆಚಾರ್ಯ ಪಾಲ್ಗೊಂಡಿದ್ದರು. ಮುಮ್ಮೇಳದಲ್ಲಿ ಮಧೂರು ಮೋಹನ ಕಲ್ಲೂರಾಯ, ಮಧೂರು ಸುಂದರ ಕೃಷ್ಣ, ಉದಯಶಂಕರ ಭಟ್, ಶ್ರೀ ರಾಮಕೃಷ್ಣ ನಿನ್ನಿಕಲ್ಲು, ದಿನೇಶ್ ಭಟ್ ಬಳಂಜ, ಶ್ರೀಮತಿ ಕೆ.ಆರ್. ಸುವರ್ಣ ಕುಮಾರಿ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಶ್ರೀ ಮೋಹನದಾಸರು ಕಲಾವಿದರನ್ನು ಗೌರವಿಸಿದರು.