ಮಂಗಳೂರು : ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ.) ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಅನುದಾನಿತ ಭೋವಿ ಹಿರಿಯ ಪ್ರಾಥಮಿಕ ಶಾಲೆ ಉಚ್ಚಿಲ ಸೋಮೇಶ್ವರ ಇವರ ಆಶ್ರಯದಲ್ಲಿ ‘ಭಾವೈಕ್ಯ ಸಂಗೀತ ಸ್ನೇಹ ಸಮ್ಮಿಲನ’ ಕಾರ್ಯಕ್ರಮವು ದಿನಾಂಕ 22-02-2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೋಮೇಶ್ವರ ಉಚ್ಚಿಲ ಮೂರೂರ ಭೋವಿ ಮಹಾಸಭಾ ಅಧ್ಯಕ್ಷ ಹರೀಶ್ ಉಚ್ಚಿಲ “ಶಾಲೆಗಳಲ್ಲಿ ವಿದ್ಯಾರ್ಜನೆ ಮಾಡುವ ಹೊತ್ತಿನಲ್ಲಿ ಭಾವೈಕ್ಯ ಸಂಗೀತದಂತಹ ಕಲಾ ಪ್ರಕಾರಗಳು ನಡೆದರೆ ಮಕ್ಕಳ ಮನೋವಿಕಾಸಕ್ಕೆ ಉತ್ತಮ ಪರಿಣಾಮ ಬೀರುತ್ತವೆ” ಎಂದು ಅಭಿಪ್ರಾಯಪಟ್ಟರು.
ಭೋವಿ ಶಿಕ್ಷಣ ಸಂಸ್ಥೆಯ ಸಂಚಾಲಕ ರೋಹಿತಾಶ್ವ ಉಚ್ಚಿಲ, ಮುಂಬಯಿ ಸಮಿತಿ ಸಂಚಾಲಕ ಚಂದ್ರಕಾಂತ್ ಉಚ್ಚಿಲ, ನಿರಂಜನ ಸ್ವಾಮಿ ಎಜುಕೇಶನ್ ಟ್ರಸ್ಟಿ ದೀಪಕ್ ಕೋಟ್ಯಾನ್ ಗುರುಪುರ, ಸೋಮೇಶ್ವರ ಪುರಸಭೆ ಸದಸ್ಯ ರವಿಶಂಕರ್, ರಂಗೋಲಿ ಕ್ಯಾಟರರ್ಸ್ ಮಾಲಕ ಹರೀಶ್ ಕುಮಾರ್, ಎಸ್.ಆರ್. ಕ್ಯಾಟರಿಂಗ್ ಮಾಲಕ ವಿಜಯ್, ಶಾಲಾ ಮುಖ್ಯ ಶಿಕ್ಷಕಿ ಮೇಘಲತಾ ಶುಭ ಕೋರಿದರು.
ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಸದಾಶಿವ ದಾಸ್ ಪಾಂಡೇಶ್ವರ್, ಪ್ರಧಾನ ಕಾರ್ಯದರ್ಶಿ ಕೇಶವ ಕನಿಲ, ಮಾಜಿ ಅಧ್ಯಕ್ಷರಾದ ಮಹಮ್ಮದ್ ಇಕ್ಬಾಲ್, ಮಲ್ಲಿಕಾ ಶೆಟ್ಟಿ, ಖಜಾಂಚಿ ಸತೀಶ್ ಮತ್ತಿತರರು ಉಪಸ್ಥಿತರಿದ್ದರು. ಇತ್ತೀಚೆಗೆ ಅಗಲಿದ ಖ್ಯಾತ ಸಾಹಿತಿ ಡಾ. ಅಮೃತ ಸೋಮೇಶ್ವರ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಒಕ್ಕೂಟದ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಟೇಷನರಿ ಸಲಕರಣೆ ವಿತರಿಸಿಲಾಯಿತು. ಒಕ್ಕೂಟದ ಗೌರವ ಸಲಹೆಗಾರ ತೋನ್ಸೆ ಪುಷ್ಕಳ ಕುಮಾರ್ ಪ್ರಸ್ತಾವಿಸಿದರು. ಅಧ್ಯಕ್ಷ ದೀಪಕ್ ರಾಜ್ ಉಳ್ಳಾಲ್ ಸ್ವಾಗತಿಸಿ, ರಮೇಶ್ ಸಾಲ್ಯಾನ್ ನಿರೂಪಿಸಿ, ಆರ್.ಜೆ. ಮೋಹಿತ್ ವಂದಿಸಿದರು.