ಮಂಗಳೂರು: ನಡೆದಾಡುವ ಜ್ಞಾನ ಭಂಡಾರ, ಪತ್ರಿಕಾ ರಂಗದ ಭೀಷ್ಮ, ಅಪ್ರತಿಮ ವಾಗ್ಮಿಯಾದ ಕಂಚಿನ ಕಂಠದ ಕಾರ್ಯಕ್ರಮ ನಿರೂಪಕ ಸ್ನೇಹ ಜೀವಿ ಮನೋಹರ್ ಪ್ರಸಾದ್(64) ದಿನಾಂಕ 01-03-2024ನೇ ಶುಕ್ರವಾರ ಬೆಳಗಿನಜಾವ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಮೂಲತಃ ಕಾರ್ಕಳ ತಾಲೂಕು ಕರುವಾಲು ಗ್ರಾಮದ ಮನೋಹರ್ ಪ್ರಸಾದ್ ಮಂಗಳೂರಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿ ‘ನವ ಭಾರತ’ ಪತ್ರಿಕೆಯಲ್ಲಿ ವೃತ್ತಿಜೀವನ ಆರಂಭಿಸಿದ್ದರು. ನಂತರ ಮಂಗಳೂರು ಉದಯವಾಣಿ ಪತ್ರಿಕೆಯ ವರದಿಗಾರರಾಗಿದ್ದರು. ಬಳಿಕ ಬ್ಯೂರೋ ಚೀಫ್ ಮತ್ತು ಸಹಾಯಕ ಸಂಪಾದಕರ ಹುದ್ದೆಯವರೆಗೆ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ಎರಡು ವರ್ಷದ ಹಿಂದೆ ನಿವೃತ್ತರಾಗಿದ್ದರು.
ಉತ್ತಮ ಕಥೆಗಾರರು, ಕವಿಯಾಗಿದ್ದ ಮನೋಹರ್ ಪ್ರಸಾದ್ ಅವರು ಕರಾವಳಿ ಇತಿಹಾಸ ಕುರಿತ 600ಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಇವರ ಅಂತಿಮ ದರ್ಶನ ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ಲೋಬೊ ಲೇನ್ ನಲ್ಲಿರುವ ‘ಈಶ ಅಪಾರ್ಟ್ಮೆಂಟ್’ ನಲ್ಲಿ ಅಪರಾಹ್ನ ಘಂಟೆ 2.00ರ ವರೆಗೆ ನಡೆಯಲಿದ್ದು, ಬಳಿಕ ಸಂಜೆ ಘಂಟೆ 4.00ಕ್ಕೆ ಕದ್ರಿ ರುದ್ರಭೂಮಿಯಲ್ಲಿ ಅಂತಿಮ ವಿಧಿವಿಧಾನ ನೆರವೇರಲಿದೆ.ಮಂಗಳೂರು: ನಡೆದಾಡುವ ಜ್ಞಾನ ಭಂಡಾರ, ಪತ್ರಿಕಾ ರಂಗದ ಭೀಷ್ಮ, ಅಪ್ರತಿಮ ವಾಗ್ಮಿಯಾದ ಕಂಚಿನ ಕಂಠದ ಕಾರ್ಯಕ್ರಮ ನಿರೂಪಕ ಸ್ನೇಹ ಜೀವಿ ಮನೋಹರ್ ಪ್ರಸಾದ್(64) ದಿನಾಂಕ 01-03-2024ನೇ ಶುಕ್ರವಾರ ಬೆಳಗಿನಜಾವ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಮೂಲತಃ ಕಾರ್ಕಳ ತಾಲೂಕು ಕರುವಾಲು ಗ್ರಾಮದ ಮನೋಹರ್ ಪ್ರಸಾದ್ ಮಂಗಳೂರಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿ ‘ನವ ಭಾರತ’ ಪತ್ರಿಕೆಯಲ್ಲಿ ವೃತ್ತಿಜೀವನ ಆರಂಭಿಸಿದ್ದರು. ನಂತರ ಮಂಗಳೂರು ಉದಯವಾಣಿ ಪತ್ರಿಕೆಯ ವರದಿಗಾರರಾಗಿದ್ದರು. ಬಳಿಕ ಬ್ಯೂರೋ ಚೀಫ್ ಮತ್ತು ಸಹಾಯಕ ಸಂಪಾದಕರ ಹುದ್ದೆಯವರೆಗೆ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ಎರಡು ವರ್ಷದ ಹಿಂದೆ ನಿವೃತ್ತರಾಗಿದ್ದರು.
ಉತ್ತಮ ಕಥೆಗಾರರು, ಕವಿಯಾಗಿದ್ದ ಮನೋಹರ್ ಪ್ರಸಾದ್ ಅವರು ಕರಾವಳಿ ಇತಿಹಾಸ ಕುರಿತ 600ಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಇವರ ಅಂತಿಮ ದರ್ಶನ ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ಲೋಬೊ ಲೇನ್ ನಲ್ಲಿರುವ ‘ಈಶ ಅಪಾರ್ಟ್ಮೆಂಟ್’ ನಲ್ಲಿ ಅಪರಾಹ್ನ ಘಂಟೆ 2.00ರ ವರೆಗೆ ಬಳಿಕ ಮಂಗಳೂರಿನ ಪತ್ರಿಕಾ ಭವನದಲ್ಲಿ ಸಂಜೆ ಘಂಟೆ 4.00ರಿಂದ ನಡೆಯಲಿದ್ದು, ಬಳಿಕ ಕದ್ರಿ ರುದ್ರಭೂಮಿಯಲ್ಲಿ ಅಂತಿಮ ವಿಧಿವಿಧಾನ ನೆರವೇರಲಿದೆ.
Subscribe to Updates
Get the latest creative news from FooBar about art, design and business.
Previous Articleಧರ್ಮಸ್ಥಳದಲ್ಲಿ ‘ಕೇಳೆ ಸಖಿ ಚಂದ್ರಮುಖಿ’ ಯಕ್ಷನಾಟಕ | ಮಾರ್ಚ್ 02