ಸುಬ್ರಹ್ಮಣ್ಯ : ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಕಲಾವಿದರ ಒಕ್ಕೂಟ ಕರ್ನಾಟಕ ಇವರ ವತಿಯಿಂದ ಪುರಂದರದಾಸ ಹಾಗೂ ಸಂತ ತ್ಯಾಗರಾಜರ ‘ಆರಾಧನಾ ಮಹೋತ್ಸವ’ವು ಕುಕ್ಕೇ ಶ್ರೀ ಸುಬ್ರಹ್ಮಣ್ಯದ ಧರ್ಮ ಸಮ್ಮೇಳನ ಮಂಟಪದಲ್ಲಿ ದಿನಾಂಕ 03-03-2024ರಂದು ನಡೆಯಲಿದೆ.
ಮುಂಜಾನೆ 6-00 ಗಂಟೆಗೆ ನಗರ ಸಂಕೀರ್ತನೆ, 8:00 ಗಂಟೆಗೆ ದೀಪೋಜ್ವಲನ, ಗಂಟೆ 8-15ಕ್ಕೆ ವಿದ್ವಾನ್ ಚಿಂತನ್ಪಲ್ಲಿ ಶ್ರೀನಿವಾಸ್ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ, 9-00 ಗಂಟೆಗೆ ವಿದ್ವಾನ್ ಕೃಷ್ಣಗೋಪಾಲ್ ಪುಂಜಾಲುಕಟ್ಟೆ ಇವರಿಂದ ಕರ್ನಾಟಕ ಶಾಸ್ತ್ರೀಯ ವೇಣುವಾದನ, 9:35ಕ್ಕೆ ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಕಲಾವಿದರ ಒಕ್ಕೂಟದ ಸರ್ವ ಸದಸ್ಯರಿಂದ ಪಂಚರತ್ನ ಗೋಷ್ಠಿ ಗಾಯನ, ಗಂಟೆ 10-25ಕ್ಕೆ ವಿಶ್ವಮೋಹನ ನೃತ್ಯ ಕಲಾಶಾಲೆ ಕಡಬ ವಿದುಷಿ ಮಾನಸ ಪುನೀಶ್ ರೈ ಬಳಗದವರಿಂದ ಭರತನಾಟ್ಯ, 11 ಗಂಟೆಗೆ ವಿದ್ವಾನ್ ಮೈಸೂರು ಸಂಜೀವ್ ಕುಮಾರ್ ಬೆಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಪಿಟೀಲು ವಾದನ, 11.30ಕ್ಕೆ ಶ್ರೀಮತಿ ವಿದುಷಿ ಡಾ. ಜಲಜಾ ಪ್ರಸಾದ್ ಇವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ, 12ಕ್ಕೆ ವಿದುಷಿ ಶ್ರೀಮತಿ ರಶ್ಮಿ ಚಿದಾನಂದ್ ಬಳಗದಿಂದ ಭರತನಾಟ್ಯ, ಗಂಟೆ 12.30ಕ್ಕೆ ಗಾನ ನೃತ್ಯ ಅಕಾಡೆಮಿ (ರಿ.) ಮಂಗಳೂರು ವಿದುಷಿ ಶ್ರೀಮತಿ ವಿದ್ಯಾಶ್ರೀ ರಾಧಕೃಷ್ಣ ಮತ್ತು ಬಳಗದವರಿಂದ ಭರತನಾಟ್ಯ, 1-00 ಗಂಟೆಗೆ ಶ್ರೀ ರಘು ಬಿಜೂರು ಇವರಿಂದ ಹಿಂದೂಸ್ತಾನಿ ಸಂಗೀತ, 2.05ಕ್ಕೆ ವಿದ್ವಾನ್ ಶ್ರೀ ಕೋದಂಡ ರಾಮಯ್ಯ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆ, 2.30ಕ್ಕೆ ವಿದುಷಿ ಶ್ರೀಮತಿ ಸಾಗರಿಕಾ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ, 3.20ಕ್ಕೆ ನೃತ್ಯ ಕೃಪಾ ಕಲಾಕೇಂದ್ರ ಮಂಡ್ಯ ವಿದುಷಿ ಶ್ರೀಮತಿ ಚಂದನಾ ಮತ್ತು ಬಳಗದವರಿಂದ ಭರತನಾಟ್ಯ, 4.05ಕ್ಕೆ ಶ್ರೀಮತಿ ಸರ್ವಮಂಗಳಾ ಇವರಿಂದ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆ, ಗಂಟೆ 4.40ಕ್ಕೆ ಕು. ಮೇಧಾ ಉಡುಪ ಮಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ, 5-15ಕ್ಕೆ ಕಲಾಶ್ರೀ ವಿದ್ವಾನ್ ಕೆ.ಎಸ್. ಮೋಹನ್ ಕುಮಾರ್ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಮತ್ತು 6.30ಕ್ಕೆ ಸುಬ್ರಹ್ಮಣ್ಯದ ವಿದ್ಯಾಸಾಗರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮಗಳು ನಡೆಯಲಿದೆ.