ಕಾಸರಗೋಡು : ವಿಶ್ವದಲ್ಲೇ ಅತ್ಯಂತ ಶ್ರೀಮಂತ ದೇವಸ್ಥಾನವಾದ ತಿರುವನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮೂಲ ಸ್ಥಾನವಾದ, ಕಾಸರಗೋಡಿನ ಅನಂತಪುರ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯ ಸದಸ್ಯರಿಂದ ‘ಸಾಹಿತ್ಯ ಗಾನ ನೃತ್ಯ ವೈಭವ’ ಕಾರ್ಯಕ್ರಮ ದಿನಾಂಕ 27-02-2024 ರಂದು ನಡೆಯಿತು.
ತಂಡದ ಗುರುರಾಜ್ ಕಾಸರಗೋಡು, ಜ್ಞಾನ ರೈ ಪುತ್ತೂರು, ಕೌಶಿಕಾ, ಸ್ವೀಕೃತಿ, ಅಹನಾ ಎಸ್. ರಾವ್, ಆಜ್ಞಾ ರೈ ಪುತ್ತೂರು, ಅನನ್ಯ ಎನ್. ಶೆಟ್ಟಿ, ದೇವಿಶಾ, ಹಿತಾಶ್ರೀ, ಇನಿಶಾ, ಆರಾಧ್ಯ ಆರ್., ಅಕ್ಷರ, ಸಾನ್ವಿ ಆರ್. ಚೌಟಾ, ಅನನ್ಯ, ಹರೀಶ್ ಪಂಜಿಕಲ್ಲು, ದೀಪ್ತಿ ಅಡ್ಡoತ್ತಡ್ಕ, ನವ್ಯಶ್ರೀ, ದಿಯಾ, ಶೈಲಜಾ, ಭವ್ಯ, ಜಯಾ, ಮಧುಮತಿ, ರಾಜಿ, ಪ್ರಮೀಳಾ, ಅಶ್ವತಿ, ಯಾಮಿನಿ ಕಾರ್ತಿಕ್, ಲತಾ ನಾಗೇಶ್, ಸಾಹಿತ್ಯ, ಜಿಶಾನ್ವಿ, ರಿತ್ವಿ, ಪೂಜಶ್ರೀ, ಸನುಷಾ ಸುನಿಲ್, ಉಷಾ ಸುಧಾಕರನ್, ಸಮಿತಾ ಭಟ್, ತೇಜಸ್ವಿನಿ, ವರ್ಷ ಎಂ ಆರ್, ಭವಿಷ್ಯ, ಚುಹಾನ ಎ ವಿ, ತೃಪ್ತಿ ಕೆ ಎಸ್, ಆಧ್ಯ, ರಿತಿಕಾ, ಕೌಶಿಕಾ, ಇಶಾನ್, ಕೀರ್ತಿಪ್ರಭಾ, ಕೃಪೇಶ್ ಎಂ ಆರ್, ವರ್ಷಾ ಶೆಟ್ಟಿ, ವೈಷ್ಣವಿ, ಧನ್ವಿ, ಪ್ರಿಯಾಂಕ, ಧನ್ವಿ ಎಂ, ಪೃಥ್ವಿ ಎಂ, ರಕ್ಷಿತಾ ಕೆ ರಾವ್ ಮುಂತಾದ ಸುಮಾರು 55 ಕ್ಕೂ ಅಧಿಕ ಸಂಸ್ಥೆಯ ಕಲಾವಿದರು ಅವರವರ ಪ್ರತಿಭೆಯಿಂದ ನೆರೆದಿರುವ ಜನಸ್ತೋಮವನ್ನು ರಂಜಿಸುವಲ್ಲಿ ಯಶಸ್ವೀಯಾದರು. ಕಾರ್ಯಕ್ರಮವನ್ನು ಡಾ. ವಾಣಿಶ್ರೀ ಕಾಸರಗೋಡು ಇವರು ನಿರೂಪಿಸಿದರು.
ಈ ಪುಣ್ಯ ವೇದಿಕೆಯಲ್ಲಿ ಸಂಸ್ಥೆಗೆ ತನ್ನ ಕಲಾವಿದರನ್ನು ಪರಿಚಯಿಸಿ ಅತ್ಯಂತ ಪ್ರೋತ್ಸಾಹ ನೀಡುತ್ತಿರುವ ನೃತ್ಯ ಗುರುಗಳಾದ ಶ್ರೀಮತಿ ರೇಖಾ ದಿನೇಶ್ ಮಂಜೇಶ್ವರ ಇವರನ್ನು ಶ್ರೀ ಕುಶಾಲಪ್ಪ ಕಣ್ಣೂರು, ಶ್ರೀ ರಾಮಚಂದ್ರ ಭಟ್, ಶ್ರೀ ಜನಾರ್ದನ ಕಣ್ಣೂರು, ಶ್ರೀ ಹರೀಶ್ ಮೇಲಾರು, ಶ್ರೀ ಗೋಪಾಲ ಪೆರ್ನೆ ಹಾಗೂ ಶ್ರೀ ಕೃಷ್ಣ ಆಳ್ವ ಈ ಎಲ್ಲಾ ಗಣ್ಯ ಮಾನ್ಯರ ಉಪಸ್ಥಿತಿಯಲ್ಲಿ ಸಂಸ್ಥೆಯ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀ ಕ್ಷೇತ್ರದ ವತಿಯಿಂದ ಸಂಸ್ಥೆಯ ಅಧ್ಯಕ್ಷರಾದ ಡಾ. ವಾಣಿಶ್ರೀ ಕಾಸರಗೋಡು ಮತ್ತು ಕಾರ್ಯದರ್ಶಿ ಗುರುರಾಜ್ ಕಾಸರಗೋಡು ಇವರನ್ನು ಶ್ರೀ ದೇವರ ಪ್ರಸಾದ ನೀಡಿ ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನಿಸಿ ಗೌರವಿಸಿದರು. ಭಾಗಹಿಸಿದ ಪ್ರತಿಯೊಬ್ಬ ಕಲಾವಿದರನ್ನು ಸಂಸ್ಥೆಯ ಕಡೆಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.