ಮಂಗಳೂರು : ‘ನಿರ್ದಿಗಂತ’ವು ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಕಾಲೇಜಿನ ಆವರಣದಲ್ಲಿ ದಿನಾಂಕ 20-03-2024ರಿಂದ 25-03-2024ರ ತನಕ ‘ನೇಹದ ನೆಯ್ಗೆ’ ಎಂಬ ಆರು ದಿನಗಳ ರಂಗೋತ್ಸವವನ್ನು ನಡೆಸಲಿದೆ. ನಾಟಕಗಳು, ವಿಚಾರ ಸಂಕಿರಣಗಳು, ಕವನ, ಸಂಗೀತ, ಚಿತ್ರ, ಚಲನಚಿತ್ರ ಮೊದಲಾದ ಹಲವು ಬಗೆಯ ಸೌಂದರ್ಯ ವಿಜ್ಞಾನ ಶಾಖೆಗಳ ಸಂವಾದಗಳು ಇಲ್ಲಿ ನಡೆಯಲಿವೆ.
ಈ ಆರು ದಿನಗಳೂ ನಮ್ಮೊಡನಿದ್ದು ಉತ್ಸವದಲ್ಲಿ ಕ್ರಿಯಾತ್ಮಕವಾಗಿ ತೊಡಗಿಕೊಳ್ಳಲಿಚ್ಚಿಸುವ ರಂಗಭೂಮಿಯ ಆಸಕ್ತ 50 ಪ್ರತಿನಿಧಿಗಳಿಗೆ ನಿರ್ದಿಗಂತವು ಆಹಾರ ಹಾಗೂ ವಸತಿಯ ವ್ಯವಸ್ಥೆಯನ್ನು ಕಲ್ಪಿಸಲಿದೆ. ಈ ಆರೂ ದಿನಗಳ ಕಾಲ ಉತ್ಸವದಲ್ಲಿ ಪೂರ್ಣಾವಧಿ ತೊಡಗಿಕೊಳ್ಳಲಿಚ್ಛಿಸುವ ರಂಗಾಸಕ್ತರು ತಮ್ಮ ಪರಿಚಯ ಪತ್ರದೊಂದಿಗೆ ಈ ಕೆಳಕಂಡ ವಿಳಾಸದಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಆಹ್ವಾನಿಸುತ್ತಿದೆ.
ಸಂಪರ್ಕ ವಿಳಾಸ : ಕ್ರಿಸ್ಟೋಫರ್ ಡಿ’ಸೋಜ, ರಂಗ ಅಧ್ಯಯನ ಕೇಂದ್ರದ ನಿರ್ದೇಶಕರು
ಸಂತ ಅಲೋಶಿಯಸ್ ಕಾಲೇಜು,
ಸಂತ ಅಲೋಶಿಯಸ್ ಕಾಲೇಜ್ ರಸ್ತೆ, ಕೊಡಿಯಾಲ್ ಬೈಲ್ ಪಿ.ಬಿ. ನಂ.720,
ಮಂಗಳೂರು -575003, ಕರ್ನಾಟಕ ಮೊ. ನಂ. 9113226234
ಇ-ಮೇಲ್ [email protected]