ಕಟೀಲು: ಮಂಗಳೂರಿನ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜನಪದ ವಿಚಾರ, ಕಲೆ ಮತ್ತು ಸಂಸ್ಕೃತಿಯ ಮೆಲುಕು ಜನಪದ ನುಡಿತೋರಣ’ ಕಾರ್ಯಕ್ರಮವು ದಿನಾಂಕ 01-03-2024 ರಂದು ಕನ್ನಡ ಸಾಹಿತ್ಯ ಸಂಘದ ವತಿಯಿಂದ ನಡೆಯಿತು.
ಕಟೀಲು ದೇವಳದ ಆನುವಂಶಿಕ ಮುಕ್ತೇಸರರಾದ ಸನತ್ ಕುಮಾರ್ ಕೊಡೆತ್ತೂರು ಗುತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭಹಾರೈಸಿದರು.ಜಾನಪದ ವಿದ್ವಾಂಸರಾದ ಸಾಹಿತಿ ಮುದ್ದು ಮೂಡುಬೆಳ್ಳೆ ಜನಪದ ಮತ್ತು ಜಾನಪದ ನಡುವಿನ ವ್ಯತ್ಯಾಸವನ್ನು ತಿಳಿಸಿ ಜನಪದ ವಿಚಾರ ಕಲೆ ಸಂಸ್ಕೃತಿಯ ಬಗೆಗೆ ಸವಿವರವಾದ ಮಾಹಿತಿ ನೀಡಿದರು.
ಬಿಪಿನ್ ಚಂದ್ರ ಶೆಟ್ಟಿ, ಪ್ರವೀಣ್ ಭಂಡಾರಿ, ವಿದ್ಯಾರ್ಥಿ ನಾಯಕ ಕೆ. ದೀಪಕ್, ಎಲ್. ಕೃಷ್ಣರಾಜ್ ಐತಾಳ್, ಪುಷ್ಪರಾಜ್ ಶೆಟ್ಟಿ, ಕಾರ್ಯದರ್ಶಿ ಬಿ. ನಿಶಾ, ಕನ್ನಡ ಸಾಹಿತ್ಯ ಸಂಘದ ಪ್ರತಿನಿಧಿಗಳಾದ ತ್ರಿಷಾ ಶೆಟ್ಟಿ, ವಿಶಾಖ ಮತ್ತು ವೈಶಾಖ್ ಉಪಸ್ಥಿತರಿದ್ದರು. ವೈಷ್ಣವಿ, ನಾಗರಾಜ್, ವೈಶಾಖ್ ಸಂವಾದದಲ್ಲಿ ಭಾಗಿಯಾದರು.
ವಿದ್ಯಾರ್ಥಿನಿ ಬಿಂದ್ಯಾ ಅವರ ಸ್ವರಚಿತ ಕಥೆಯನ್ನು ಹೇಮಲತಾ ವಾಚಿಸಿದರು. ವಿದ್ಯಾರ್ಥಿಗಳಾದ ಲಕ್ಷ್ಮೀಪತಿ ಮತ್ತು ಮೋಹಿತ್ ಪ್ರಾರ್ಥಿಸಿ, ರಂಜನಾ ಭಟ್ ಪರಿಚಯಿಸಿ, ಪ್ರಾಂಶುಪಾಲ ಡಾ. ವಿಜಯ್ ವಿ. ಸ್ವಾಗತಿಸಿ, ಉಪನ್ಯಾಸಕ ಪ್ರದೀಪ್ ಡಿ.ಎಂ. ಹಾವಂಜೆ ಪ್ರಸ್ತಾವನೆಗೈದು, ದಿಶಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ರಕ್ಷಿತಾ ವಂದಿಸಿದರು.