ಸುರತ್ಕಲ್ : ಚಿರಂತನ ಚಾರಿಟೇಬಲ್ ಟ್ರಸ್ಟ್ ಹಾಗೂ ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, ಲಲಿತಕಲಾ ಸಂಘಗಳ ಸಹಭಾಗಿತ್ವದಲ್ಲಿ ಮಂಗಳೂರಿನ ಯುವ ಬಾನ್ಸುರಿ ಕಲಾವಿದ ಕಾರ್ತಿಕ್ ಭಟ್ ಇವರಿಂದ ಬಾನ್ಸುರಿ ವಾದನ ಕಾರ್ಯಕ್ರಮವು ಗೋವಿಂದ ದಾಸ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಧಾರವಾಡದ ಹೇಮಂತ್ ಜೋಷಿ ತಬಲಾದಲ್ಲಿ ಸಾಥ್ ನೀಡಿದರು.
ಆರಂಭದಲ್ಲಿ ಸಾಯಂಕಾಲದ ರಾಗ ಯಮನ್‌ನಲ್ಲಿ ಆಲಾಪ್, ಮಧ್ಯಲಯ್ ಝಪ್ ತಾಲ್ ಹಾಗೂ ದೃತ್‌ತೀನ್ ತಾಳದ ಗತ್‌ಗಳನ್ನು ನುಡಿಸಿದರು. ನಂತರ ರಾಗ್‌ದೇಸ್‌ನ್ನು ದೃತ್‌ಏಕ್‌ತಾಳ್ ಹಾಗೂ ಅತಿದೃತ್‌ತೀನ್ ತಾಳದಲ್ಲಿ ಪ್ರಸ್ತುತ ಪಡಿಸಿದರು. ಕೊನೆಯಲ್ಲಿ ಭಜನ್‌ನೊಂದಿಗೆ ಕಛೇರಿಯನ್ನು ಸಂಪನ್ನಗೊಳಿಸಿದರು. ಚಿರಂತನ ಚಾರಿಟೇಬಲ್ ಟ್ರಸ್ಟಿನ ಭಾರವಿ ದೇರಾಜೆ ಕಲಾವಿದರನ್ನು ಪರಿಚಯಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯದರ್ಶಿ ಹಿತಾ ಉಮೇಶ್ ಸ್ವಾಗತಿಸಿ, ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ಕಲಾವಿದರನ್ನು ಗೌರವಿಸಿದರು.