ಮಂಗಳೂರು : ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಇತಿಹಾಸದಲ್ಲಿ ಮರೆಯಲಾಗದ ಮಾಣಿಕ್ಯಗಳಲ್ಲಿ ಒಬ್ಬರಾದ ಪಂಡಿತ್ ರಾಜನ್ ಮಿಶ್ರಾ ಅವರ ಸ್ಮರಣಾರ್ಥ ಮಂಗಳೂರಿನ ಸ್ವರಾನಂದ ಪ್ರತಿಷ್ಠಾನ ವತಿಯಿಂದ ದಿನಾಂಕ 30-03-2024 ಮತ್ತು 31-03-2024ರಂದು ನಗರದ ಬಿ.ಇ.ಎಂ. ಹೈಸ್ಕೂಲ್ ಸಭಾಂಗಣದಲ್ಲಿ ಬೈಠಕ್ ಶೈಲಿಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾಜನ್ ಮಿಶ್ರಾ ಅವರ ಶಿಷ್ಯ ಪರಂಪರೆಯ ಗಾಯಕರಾದ, ಯುಗಳ ಗಾಯನ ಪ್ರಸ್ತುತಿಯಲ್ಲಿ ಜನಪ್ರಿಯರಾಗಿರುವ ಡಾ. ಪ್ರಭಾಕರ ಕಶ್ಯಪ್, ಡಾ. ದಿವಾಕರ್ ಕಶ್ಯಪ್ (ಕಶ್ಯಪ್ ಬಂಧು) ಕಛೇರಿಯನ್ನು ನಡೆಸಿಕೊಡಲಿದ್ದಾರೆ.
ದಿನಾಂಕ 30-03-2024ರಂದು ಸಂಜೆ 5.30ಕ್ಕೆ ಸಂದೀಪನ್ ಮುಖರ್ಜಿ ಮತ್ತು ಸೌರಬ್ ಗುಲವಾನಿ ಅವರ ತಬಲಾವಾದನ ಕಛೇರಿ ಬಳಿಕ ನಿಶಾದ್ ವ್ಯಾಸ್ ಅವರಿಂದ ಗಾಯನ. ಬಳಿಕ ಕಶ್ಯಪ್ ಬಂಧು ಅವರಿಂದ ಗಾಯನ ಪ್ರಸ್ತುತಿ ಹೆಗ್ಡೆ ನಡೆಯಲಿದ್ದು, ಪಂಡಿತ್ ಅರವಿಂದ್ ಕುಮಾರ್ ಆಜಾದ್, ಗುರುಪ್ರಸಾದ್ ಹೆಗಡೆ, ಪ್ರಸಾದ್ ಕಾಮತ್, ಶಶಿಕಿರಣ್ ಮಣಿಪಾಲ ಅವರು ಸಾತ್ ಸಂಗತ್ ನೀಡಲಿದ್ದಾರೆ.
ದಿನಾಂಕ 31-03-2024ರಂದು ಮುಂಜಾನೆ ಗಂಟೆ 6.30ರಿಂದ ಕಶ್ಯಪ್ ಬಂಧುಗಳಿಂದ ಮುಂಜಾನೆಯ ರಾಗಗಳ ಪ್ರಸ್ತುತಿಯ ವಿಶೇಷ ಕಾರ್ಯಕ್ರಮ ನಡೆಯಲಿದೆ.