ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ (ರಿ.) ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ಕರ್ನಾಟಕ ಶಾಸ್ತ್ರೀಯ ಸಂಗೀತ’ವು ದಿನಾಂಕ 06-04-2024ರಂದು ಸಂಜೆ 5.45 ಗಂಟೆಗೆ ಸುರತ್ಕಲ್ಲಿನ ಕೆನರಾ ಬ್ಯಾಂಕ್ ಕ್ರಾಸ್ ರೋಡಿನಲ್ಲಿರುವ ‘ಅನುಪಲ್ಲವಿ’ಯಲ್ಲಿ ಹಾಗೂ ‘ಉದಯರಾಗ – 52’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ಸುರತ್ಕಲ್ಲಿನ ಫ್ಲೈ ಓವರಿನ ಕೆಳಗಡೆ ದಿನಾಂಕ 07-04-2024 ಭಾನುವಾರ ಪೂರ್ವಾಹ್ನ 6-00 ಗಂಟೆಗೆ ನಡೆಯಲಿದೆ.
ದಿನಾಂಕ 06-04-2024ರಂದು ಚಿನ್ಮಯೀ ಮನೀಷ್ ಇವರ ಹಾಡುಗಾರಿಕೆಗೆ ಸುನಂದ ಪಿ.ಎಸ್. ಮಾವೆ ವಯೋಲಿನ್, ಯುವಕಲಾಮಣಿ ನಿಕ್ಷಿತ್ ಪುತ್ತೂರು ಮೃದಂಗ ಹಾಗೂ ಕಾರ್ತಿಕ್ ಭಟ್ ಇನ್ನಂಜೆ ಖಂಜೀರದಲ್ಲಿ ಸಾಥ್ ನೀಡಲಿದ್ದಾರೆ. ಸುರತ್ಕಲ್ಲಿನ ಸಂಗೀತ ಗುರು ವಿದುಷಿ ಸುಮಾ ಸತೀಶ್ ರಾವ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಸಂಗೀತ ಶಾಲೆಯ ವಿದ್ಯಾರ್ಥಿಗಳು ‘ನಾಮಸನಕೀರ್ಥಂ’ ಪ್ರಸ್ತುತ ಪಡಿಸಲಿದ್ದಾರೆ.
ದಿನಾಂಕ 07-04-2024ರಂದು ‘ಉದಯರಾಗ’ದಲ್ಲಿ ಮಾಸ್ಟರ್ ಆಕಾಶ್ ಕೃಷ್ಣ ಇವರ ಹಾಡುಗಾರಿಕೆಗೆ ಸುನಂದ ಪಿ.ಎಸ್. ಮಾವೆ ವಯೋಲಿನ್, ಯುವಕಲಾಮಣಿ ನಿಕ್ಷಿತ್ ಪುತ್ತೂರು ಮೃದಂಗ ಹಾಗೂ ಕಾರ್ತಿಕ್ ಭಟ್ ಇನ್ನಂಜೆ ಖಂಜೀರದಲ್ಲಿ ಸಾಥ್ ನೀಡಲಿದ್ದಾರೆ. ಸುರತ್ಕಲ್ಲಿನ ರೋಟರಿ ಕ್ಲಬ್ ಇದರ ಅಧ್ಯಕ್ಷರಾದ ಶ್ರೀ ಯೋಗೀಶ್ ಕುಲಾಯಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು.
ಮಣಿ ಕೃಷ್ಣಸ್ವಾಮಿ, ಆಕಾಡಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್ ರಾವ್ ತಮಗೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.