ಮಂಗಳೂರು : ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದಲ್ಲಿ ಕಾಸರಗೋಡಿನ ಡಾ. ವಾಣಿಶ್ರೀ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಸದಸ್ಯರಿಂದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮವು ದಿನಾಂಕ 31-03-2024ರ ಭಾನುವಾರದಂದು ನಡೆಯಿತು.
ಕಾರ್ಯಕ್ರಮದಲ್ಲಿ ಗುರುರಾಜ್ ಕಾಸರಗೋಡು, ಅಕ್ಷತಾ ಅಡಿಗ, ಸುನೇತ್ರ ಉಡುಪ, ಭೂಮಿಕಾ ಉಡುಪ, ನಿವೇದಿತಾ, ಶ್ರೀಲತಾ ಹೆಬ್ಬಾರ್, ವಿಶ್ರುತಾ ಹೇರ್ಲೆ, ನಾಗರತ್ನ ಹೇರ್ಲೆ, ಸುಮಾಶ್ರೀ ಧನ್ಯ, ಅಮೃತಾ ಉಪಾಧ್ಯ, ಚಿನ್ಮಯಿ ಎಸ್, ಸ್ಮಿತಾ ಮಹಿಷಿ, ವನಿತ ಉಪಾಧ್ಯ, ಶುಭಾ ಅಡಿಗ, ಶಶಿಕಲಾ ಐತಾಳ್, ಹಂಶಿತ್ ಆಳ್ವ ಬಾಕ್ರಂಬೈಲ್, ಸೋನಿಕ ವಿ., ಜೋಶಿಕಾ ಎಸ್., ವಿಶಿಕಾ ಸಾಲ್ಯಾನ್, ಅವನಿ ಎಂ.ಎಸ್. ಸುಳ್ಯ, ಸತ್ಯಾಕಿ ಪಂಜಿಗರ್, ಗೋಪಾಲಕೃಷ್ಣ ಭಟ್, ಕಾರ್ತಿಕೇಯ ಉಡುಪ, ವೈಷ್ಣವಿ, ದೀಪಿಕಾ, ಪಂಚಮಿ, ಅದಿತಿ ಮೆಹೆಂದಲೆ, ದ್ರಿಶ್ಯ ಸಾಲ್ಯಾನ್, ಸೀಯಾ ಜೆ.ಕೆ., ಪಮ್ನಿ ಶೆಟ್ಟಿ, ಪವಿತ್ರ, ವೈಷ್ಣವಿ ಎಸ್. ಶೆಟ್ಟಿ, ಧೃತಿ ಎಸ್. ಕೊಟ್ಟಾರಿ, ಸಾಕ್ಷಿ ಗುರುಪುರ ಮತ್ತು ಸಾನ್ವಿ ಗುರುಪುರ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಜಿ. ರಘುರಾಮ ಉಪಾಧ್ಯಾಯ ಮತ್ತು ಎಸ್. ಹರೀಶ್ ಐತಾಳ್, ಅನುವಂಶಿಕ ಆಡಳಿತ ಮೊಕ್ತೇಸರ ಎಂ. ಅರುಣಕುಮಾರ್ ಐತಾಳ್ ಹಾಗೂ ಎನ್. ವಾಸುದೇವ ಐತಾಳ್, ರಂಜಿತ್, ವಿದುಷಿ ರೇಖಾ ದಿನೇಶ್ ಮಂಜೇಶ್ವರ ಮುಂತಾದ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ಡಾ. ವಾಣಿಶ್ರೀ ಕಾಸರಗೋಡು ಹಾಗೂ ಗುರುರಾಜ್ ಕಾಸರಗೋಡು ಇವರನ್ನು ಗೌರವಿಸಲಾಯಿತು. ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಲಾಯಿತು.