ಕೋಟ : ಮಿತ್ರ ಮಂಡಳಿ ಕೋಟ, ಡಾ. ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಸಾಲಿಗ್ರಾಮ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ತಾಲೂಕು ಘಟಕ ಇದರ ಜಂಟಿ ಆಶ್ರಯದಲ್ಲಿ ‘ಯುಗಾದಿ ಸಾಹಿತ್ಯೋತ್ಸವ’ವನ್ನು ದಿನಾಂಕ 11-04-2024ರಂದು ಕೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾರಂತ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ ಗಂಟೆ 9.30ರಿಂದ ಶ್ರೀಮತಿ ಪಲ್ಲವಿ ತುಂಗ ಇವರಿಂದ ಅಡಿಗ ಕಾವ್ಯ ರಸಧಾರೆ. 10-00 ಗಂಟೆಗೆ ಕೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ಇವರ ಉಪಸ್ಥಿತಿಯಲ್ಲಿ ಕುಂದಾಪುರದ ಸಾಹಿತಿ ಹಿರಿಯ ನ್ಯಾಯವಾದಿಯಾದ ಶ್ರೀ ಎ.ಎಸ್.ಎನ್. ಹೆಬ್ಬಾರ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಗಂಟೆ 10-45ಕ್ಕೆ ‘ಸಾಹಿತ್ಯ ಸಲ್ಲಾಪ’ದಲ್ಲಿ ಉಪನ್ಯಾಸ -1ರಲ್ಲಿ ‘ಶ್ರೀ ನೀಲಾವರ ಸುರೇಂದ್ರ ಅಡಿಗರ ಶೈಕ್ಷಣಿಕ ಕೃತಿಗಳು’ ಎಂಬ ವಿಷಯದ ಬಗ್ಗೆ ಉಪಪ್ರಾಂಶುಪಾಲರಾದ ಡಾ. ಕೆ. ಅಶೋಕ ಕಾಮತ್ ಇವರು, ಉಪನ್ಯಾಸ -2ರಲ್ಲಿ ‘ಅಡಿಗ, ಇತ್ತೀಚಿನ ಸಾಹಿತ್ಯಾನುಸಂಧಾನ’ ಎಂಬ ವಿಷಯದ ಬಗ್ಗೆ ಸಾಹಿತಿ ಮತ್ತು ಶಿಕ್ಷಕರಾದ ಶ್ರೀ ಅರವಿಂದ ಚೊಕ್ಕಾಡಿ ಇವರು ಮತ್ತು ಉಪನ್ಯಾಸ -3ರಲ್ಲಿ ‘ನನ್ನ ಇತ್ತೀಚಿನ ಆತ್ಮಚರಿತೆಗಳ ಓದು’ ಎಂಬ ವಿಷಯದ ಬಗ್ಗೆ ಉಡುಪಿಯ ಕತೆಗಾರ ಮತ್ತು ವಿಮರ್ಶಕ ಶ್ರೀ ಬೆಳಗೋಡು ರಮೇಶ್ ಭಟ್ ಇವರು ಉಪನ್ಯಾಸ ನೀಡಲಿರುವರು.
ಗಂಟೆ 1.30 ಕ್ಕೆ ಶ್ರೀಮತಿ ಸುಕನ್ಯಾ ಎಸ್. ಸೋಮಯಾಜಿ ಕಾರ್ಡಡ ಮತ್ತು ಬಳಗದವರಿಂದ ‘ಭಾವ ಗೀತ ರಸಾಯನ’ ಕಾರ್ಯಕ್ರಮ ನಡೆಯಲಿದೆ. ನಂತರ ನಡೆಯಲಿರುವ ‘ಯುಗಾದಿ ಕವಿಗೋಷ್ಠಿ’ (ಕ್ವಾಟ ಕನ್ನಡದಲ್ಲಿ)ಯ ಅಧ್ಯಕ್ಷತೆಯನ್ನು ಶಿಕ್ಷಕ-ಸಾಹಿತಿ ಶ್ರೀ ನರೇಂದ್ರ ಕುಮಾರ್ ಕೋಟ ಇವರು ವಹಿಸಲಿದ್ದು, ಶ್ರೀ ಕೃಷ್ಣ ಸಿದ್ಧಾಪುರ, ಶ್ರೀಮತಿ ಪೂರ್ಣಿಮ ಕಮಲಶಿಲೆ, ಶ್ರೀ ಪಿ.ವಿ. ಆನಂದ ಸಾಲಿಗ್ರಾಮ, ಶ್ರೀ ಮಂಜುನಾಥ ಸಾಸ್ತಾನ, ಶ್ರೀಮತಿ ತನುಜ ಕೋಟೇಶ್ವರ ಮತ್ತು ಶ್ರೀಮತಿ ಸಂಪ್ರೀತ ಪುರಾಣಿಕ ಕುಂದಾಪುರ ಮುಂತಾದ ಕವಿಗಳು ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಉಡುಪಿಯ ಡಾ. ಮಹಾಬಲೇಶ್ವರ ರಾವ್ ಮತ್ತು ಶ್ರೀ ನೀಲಾವರ ಸುರೇಂದ್ರ ಅಡಿಗ ಇವರುಗಳಿಗೆ ಪ್ರಶಸ್ತಿ ಪ್ರದಾನ ಹಾಗೂ ಕೊರವಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕುಮಾರ ಪ್ರಣವ ಇವರಿಗೆ ನಿ. ಅಣ್ಣಾಜಿ ಬಲ್ಲಾಳ ಬಾಲ ಪುರಸ್ಕಾರ ನೀಡಿ ಗೌರವಿಸಲಾಗುವುದು.