ಮಂಗಳೂರು : ನಾಚ್ ಸೊಭಾಣ್ ವತಿಯಿಂದ ಶಕ್ತಿನಗರದ ಕಲಾಂಗಣದಲ್ಲಿ ತಿಂಗಳ ವೇದಿಕೆ ಸರಣಿಯ 268ನೇ ಕಾರ್ಯಕ್ರಮ ʻನವಿಂ ವಜ್ರಾಂʼ (ಹೊಸ ವಜ್ರಗಳು) ದಿನಾಂಕ 07-04-2024ರಂದು ನಡೆಯಿತು. ನೃತ್ಯ-ಗಾಯನ-ಸಂಗೀತ-ನಿರೂಪಣೆ ಹೀಗೆ ಸಾದರಕಲೆಯ ಸುಂದರ ಅನುಭೂತಿ ದೊರೆಯಿತು. ಮೊದಲಿಗೆ ಉದ್ಯಮಿ ಸಂತೋಷ್ ರೊಡ್ರಿಗಸ್ ಘಂಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಹಾಗೂ ಅಧ್ಯಕ್ಷ ಲುವಿ ಪಿಂಟೊ ಉಪಸ್ಥಿತರಿದ್ದರು.
ನೃತ್ಯಕ್ಕೆ ಪೂರಕ ಹಾಡುಗಳ ಕೊರತೆ ತುಂಬಿಸಲು ಮಾಂಡ್ ಸೊಭಾಣ್ ಲಘುತಾಳದ ಹೊಸ ಹಾಡುಗಳ ರಚನೆಗೆ ಅವಕಾಶ ಕಲ್ಪಿಸಿತ್ತು. ಬಂದ 25 ಹಾಡುಗಳಲ್ಲಿ 10 ಆಯ್ದ ಹಾಡುಗಳಿಗೆ ರಾಗ ಸಂಯೋಜಿಸಿ, ಸಂಗೀತ ನೀಡಿ, ನಾಚ್ ಸೊಭಾಣ್ ತಂಡವು ನರ್ತಿಸಿತು. ಬಾಯ್ಲಾ, ಬಾಯ್ಲಾ ಮಸಾಲಾ, ವೆಸ್ಟರ್ನ್ ಹಿಪ್ಹೊಪ್, ಬೊಲ್ರೂಮ್, ಲಿರಿಕಲ್ ಪ್ರಕಾರದ ಹಾಡುಗಳು ಪ್ರೇಕ್ಷಕರ ಮನ ಗೆದ್ದವು.
ರೊನಿ ಕ್ರಾಸ್ತಾ ಕೆಲರಾಯ್, ಐರಿನ್ ರೆಬೆಲ್ಲೊ, ಲುಸಿಫೆರ್, ಜೊಯೆಲ್ ಪಿಂಟೊ ಇಜಯ್, ಆಲ್ಬನ್ ಡಿಸಿಲ್ವಾ, ಹೊನ್ನಾವರ, ಲೊಯ್ಡ್ ರೇಗೊ ತಾಕೊಡೆ, ಮತ್ತು ಸಪ್ನಾ ಸಲ್ಡಾನ್ಹಾ, ವಾಮಂಜೂರು ಇವರ ಬರೆದ ಹೊಸ ಹಾಡುಗಳಿಗೆ ಜೊಯೆಲ್ ಪಿರೇರಾ, ಐರಿನ್ ರೆಬೆಲ್ಲೊ, ಕ್ರೀಥನ್ ಡಿಸೋಜ, ಎರಿಕ್ ಒಝೇರಿಯೊ, ಜೀವನ್ ಸಿದ್ದಿ ಮುಂಡಗೋಡ, ಲೊಯ್ಡ್ ರೇಗೊ, ಸ್ಟೀವನ್ ಕುಟಿನ್ಹಾ , ಸಪ್ನಾ ಸಲ್ದಾನ್ಹಾ, ವಾಮಂಜೂರ್ ಮತ್ತು ರೋಶನ್ ಕ್ರಾಸ್ತಾ, ಬೇಳ ಸ್ವರ ಸಂಯೋಜಿಸಿದ್ದರು. ರೈನಲ್ ಸಿಕ್ವೇರಾ, ಕೇತನ್ ಕ್ಯಾಸ್ತೆಲಿನೊ, ಆರ್ವಿನ್ ಕ್ರಿಸ್ ಡಿಕುನ್ಹಾ, ಕ್ರೀಥನ್ ಡಿಸೋಜ, ಜೀವನ್ ಸಿದ್ದಿ ಮುಂಡಗೋಡ್, ಶಿಲ್ಪಾ ಕುಟಿನ್ಹಾ ಮತ್ತು ರೋಶನ್ ರೊಕ್ಕೊ ವಾಮಂಜೂರು ಇವರು ಸುಮಧುರವಾಗಿ ಹಾಡಿದರು.
ರಾಹುಲ್ ಪಿಂಟೊ ಇವರ ನೃತ್ಯ ನಿರ್ದೇಶನದಲ್ಲಿ ಗ್ಲೆನಿನಾ, ಪ್ರಿನ್ಸಿಟಾ, ವೆನಿಯಾ, ಮೆಲೊಡಿಯಾ, ವರ್ಲಿ್ನ್, ವೆಲೆನಿ, ಕ್ರಿಶೆಲ್, ಇಲೆಯ್ನ್, ಸಾನಿಯಾ, ಲಿಯಾನಾ, ರೆನಿಶಾ, ಸೂಜಲ್, ಜೊಯ್ಸನ್, ಮನೀಶ್, ಶೊನ್, ರೋಹನ್ ಇವರು ನರ್ತಿಸಿ ಪ್ರೇಕ್ಷಕರ ಮನ ರಂಜಿಸಿದರು. ರೋಶನ್ ಕ್ರಾಸ್ತಾ, (ಲೀಡ್ ಗಿಟಾರ್), ಸಂಜಯ್ ರೊಡ್ರಿಗಸ್ (ಕೀ ಬೋರ್ಡ್), ಸಂಜೀತ್ ರೊಡ್ರಿಗಸ್ (ಡ್ರಮ್ಸ್) ಆನಿ ಸ್ಟಾಲಿನ್ ಡಿಸೊಜಾ (ಬೇಜ್ ಗಿಟಾರ್) ಸಂಗೀತ ನೀಡಿದರು.
ಸಂಜನಾ ರಿವಾ ಮತಾಯಸ್, ಜಾಸ್ಮಿನ್ ಲೋಬೊ ಆಗ್ರಾರ್, ಯೋಗಿತಾ ಬೆಳ್ಳಾರೆ, ಸವಿತಾ ಸಲ್ಡಾನ್ಹಾ ವಾಮಂಜೂರ್, ಆನ್ವಿಟಾ ಡಿಕುನ್ಹಾ, ಸಂದೀಪ್ ಮಸ್ಕರೇನ್ಹಸ್, ನೇಹಾ ಕ್ಯಾಸ್ತೆಲಿನೊ, ವೆನಿಶಾ ಸಲ್ಡಾನ್ಹಾ ಗುರ್ಪುರ್, ವಿನ್ಸನ್ ಮತಾಯಸ್ ಕಿರೆಂ, ಡೆಲಿಶಿಯಾ ಪಿರೇರಾ ಹತ್ತು ಹಾಡುಗಳನ್ನು ವಿಭಿನ್ನವಾಗಿ ಪರಿಚಯಿಸಿದರು. ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರನ್ನು ಲುವಿ ಪಿಂಟೊ, ರಿತೇಶ್ ಒಝೇರಿಯೊ, ಅರುಣ್ ರಾಜ್ ರೊಡ್ರಿಗಸ್ ಮತ್ತು ಎಲ್ರೊನ್ ರೊಡ್ರಿಗಸ್ ಗೌರವಿಸಿದರು. ಕೇರನ್ ಮಾಡ್ತಾ ಇದನ್ನು ನಡೆಸಿಕೊಟ್ಟರು.