ಉಪ್ಪಳ : ಐಲ ದುರ್ಗಾಪರಮೇಶ್ವರಿ ಕ್ಷೇತ್ರದ ಬಿಂಬ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ದಿನಾಂಕ 07-04-2024ರ ಭಾನುವಾರ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಸದಸ್ಯರಿಂದ ‘ಸಾಹಿತ್ಯ ಗಾನ ನೃತ್ಯ’ ವೈಭವ ಕಾರ್ಯಕ್ರಮ ನಡೆಯಿತು. ಕಲಾವಿದರಾದ ಗುರುರಾಜ್ ಕಾಸರಗೋಡು, ಆದ್ಯಂತ್ ಅಡೂರು, ಉಷಾ ಸುಧಾಕರನ್, ಸನುಷಾ ಸುನೀಲ್, ವರ್ಷಾ ಎಂ.ಆರ್., ವೃಕ್ಷಾ ಎಂ.ಆರ್., ಅಹನಾ ಎಸ್. ರಾವ್, ಜ್ಞಾನ ರೈ ಪುತ್ತೂರು, ವರ್ಷಾ ಶೆಟ್ಟಿ, ದೃಶ್ಯ ಸಾಲ್ಯಾನ್, ವಿಶಿಕಾ ಸಾಲ್ಯಾನ್, ಸಿಯಾ ಜೆ.ಕೆ., ವೈಷ್ಣವಿ ಎಸ್. ಶೆಟ್ಟಿ, ಅಜ್ಞಾ ರೈ ಪುತ್ತೂರು, ಪೂಜಾಶ್ರೀ, ತೃಪ್ತಿ ಕೆ.ಎಸ್., ಅವನಿ ಎಂ.ಎಸ್., ಸನುಷಾ ಸುಧಾಕರನ್, ಅರ್ಪಿತಾ ವಿ. ರೈ, ಹಂಶಿತ್ ಆಳ್ವ, ಶ್ರದ್ಧಾ ಎ.ಎಸ್., ಮೇಧಾ ಎ.ಎಸ್., ಆರಾಧ್ಯ ಎನ್.ಆಳ್ಳ, ಆದ್ಯ, ಆರಾಧ್ಯ, ಇಶಾನ್, ಹೃತಿಕ, ಕೌಶಿಕ, ಮಧುಲತಾ ಪುತ್ತೂರು, ರೆಶ್ಮಿ ಪ್ರಭಾ, ಕೀರ್ತಿಪ್ರಭಾ, ಭಾನ್ವಿ ಕುಲಾಲ್, ಕೃಪೇಶ್ ಎಂ.ಆರ್. ಮೊದಲಾದವರು ಭಾಗವಹಿಸಿದ್ದರು.
ಡಾ. ವಾಣಿಶ್ರೀ ಕಾಸರಗೋಡು ಸಾಹಿತ್ಯ ಪ್ರಸ್ತುತಿ ಹಾಗೂ ನಿರೂಪಣೆ ನಿರ್ವಹಿಸಿದ್ದರು. ಪತ್ರಕರ್ತ ವಿರಾಜ್ ಅಡೂರು, ರಂಗಭೂಮಿ ಕಲಾವಿದ ರವಿ ವರ್ಕಾಡಿ, ಪತ್ರಕರ್ತೆ ಹೇಮಾ ಜಯರಾಂ ಹಾಗೂ ಐಲ ಕ್ಷೇತ್ರದ ಆಡಳಿತ ಸಮಿತಿ ಮುಖಂಡರಾದ ಪುರುಷೋತ್ತಮ ಮೊದಲಾದವರು ಉಪಸ್ಥಿತರಿದ್ದರು. ಸಾಹಿತ್ಯ, ಗಾನ, ನೃತ್ಯ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಗೆ ನೀಡಿ ಅಭಿನಂದಿಸಲಾಯಿತು.