ಕಟೀಲು : ಕಟೀಲು ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಭ್ರಾಮರೀ ಯಕ್ಷ ಝೇಂಕಾರ-2024 ಆಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ಸಮಾರೋಪ ಸಮಾರಂಭ ದಿನಾಂಕ 5-04-2024 ರಂದು ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ “ಭಾರತದಲ್ಲಿನ ಕೆಲವು ಜಾನಪದ ಕಲೆಗಳು ನಶಸಿ ಹೋಗುವತ್ತಿದ್ದು 500 ವರ್ಷಕ್ಕೂ ಮಿಕ್ಕಿ ಇತಿಹಾಸವಿರುವ ಯಕ್ಷಗಾನ ಕಲೆಯು ಹೊಸ ಹೊಸ ಕಲ್ಪನೆಯೊಂದಿಗೆ ಮೂಲ ಚೌಕಟ್ಟಿಗೆ ದಕ್ಕೆಯಾಗದಂತೆ ಬೆಳೆದಿದೆ.” ಎಂದು ಹೇಳಿದರು.
ಹರಿನಾರಾಯಣ ದಾಸ ಆಸ್ರಣ್ಣ ಸಮಾರೋಪ ಭಾಷಣಗೈದರು. ದೇವಸ್ಥಾನದ ಆಡಳಿತ ಮಂಡಳಿಯ ಪ್ರತಿನಿಧಿ ಬಿಪಿನ್ ಚಂದ್ರ ಶೆಟ್ಟಿ ಕೊಡೆತ್ತೂರು ಗುತ್ತು, ಉದ್ಯಮಿ ಯಾದವ ಕೋಟ್ಯಾನ್ ಪೆರ್ಮುದೆ, ಪ್ರವೀಣ್ ಭಂಡಾರಿ ಕೊಡೆತ್ತೂರು ಗುತ್ತು, ಕಾಲೇಜಿನ ಹಿರಿಯ ಹಳೆ ವಿದ್ಯಾರ್ಥಿ ಗಂಗಾಧರ ದೇವಾಡಿಗ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ದೀಪಕ್, ಕಾರ್ಯದರ್ಶಿ ಬಿ. ನಿಶಾ, ಪುಷ್ಪರಾಜ ಜೆ. ಶೆಟ್ಟಿ, ಎಲ್. ಕೃಷ್ಣ ರಾಜ್ ಐತಾಳ್ ಮತ್ತಿತರು ಉಪಸ್ಥಿರಿದ್ದರು.
ಇದೇ ಸಂದರ್ಭದಲ್ಲಿ ತೀರ್ಪುಗಾರರಾದ ತಾರಾನಾಥ ಬಲ್ಯಾಯ, ಮುರಳೀಧರ ಭಟ್ ಕಟೀಲು, ಅಂಡಾಳ ದೇವಿಪ್ರಸಾದ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಡಾ. ವಿಜಯ್ ವಿ. ಸ್ವಾಗತಿಸಿ, ಸಂಘಟಕಿ ಆಶಾಲತಾ ಕೀರ್ತಿ ಶೆಟ್ಟಿ ವಿಜೇತರ ವಿವರ ನೀಡಿದರು.
ಸ್ಪರ್ಧೆಯಲ್ಲಿ ‘ಗಿರಿಜಾ ಕಲ್ಯಾಣ’ ಪ್ರಸಂಗ ಪ್ರದರ್ಶಿಸಿದ ಡಾ. ಎನ್. ಎಸ್. ಎ. ಎಂ ಪ್ರಥಮ ದರ್ಜೆ ಕಾಲೇಜಿಗೆ ಪ್ರಥಮ ತಂಡ ಪ್ರಶಸ್ತಿ, ‘ಚೂಡಾಮಣಿ’ ಪ್ರಸಂಗ ಪ್ರದರ್ಶಿಸಿದ ಮೂಡಬಿದಿರೆಯ ಆಳ್ವಾಸ್ ಕಾಲೇಜು ದ್ವಿತೀಯ ಪ್ರಶಸ್ತಿ ಹಾಗೂ ‘ವರಾಹಾವತಾರ’ ಪ್ರಸಂಗ ಪ್ರದರ್ಶಿಸಿದ ವಿ. ವಿ. ಕಾಲೇಜು ಮಂಗಳೂರು ತೃತೀಯ ಪ್ರಶಸ್ತಿ ಪಡೆದುಕೊಂಡಿದೆ.
ವಿಭಾಗ ವೈಯಕ್ತಿಕ ಪ್ರಶಸ್ತಿಗಳಲ್ಲಿ ‘ರಾಜ ವೇಷ’ ಪ್ರಥಮ ಪ್ರಶಸ್ತಿಯನ್ನು ನಿಟ್ಟೆ ಕಾಲೇಜಿನ ಅನ್ವೇಷ್ ಆರ್. ಶೆಟ್ಟಿ, ದ್ವಿತೀಯ ಪ್ರಶಸ್ತಿಯನ್ನು ಕಾರ್‌ಸ್ಟ್ರೀಟ್ ಸರಕಾರಿ ಕಾಲೇಜಿನ ಸನತ್ ಕುಮಾರ್, ಪುಂಡುವೇಷ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಆಳ್ವಾಸ್ ಕಾಲೇಜಿನ ಪ್ರಜ್ವಲ್ ಶೆಟ್ಟಿ ಹಾಗೂ ದ್ವಿತೀಯ ಪ್ರಶಸ್ತಿಯನ್ನು ನಿಟ್ಟೆ ಕಾಲೇಜಿನ ಪ್ರಶಾಂತ್ ಐತಾಳ್, ಸ್ತ್ರೀ ವೇಷ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಎ. ಜೆ. ಕಾಲೇಜಿನ ಶರಧಿ ಹಾಗೂ ದ್ವಿತೀಯ ಬಹುಮಾನವನ್ನು ಆಳ್ವಾಸ್ ಕಾಲೇಜಿನ ಈಶ್ವರೀ ಆರ್. ಶೆಟ್ಟಿ, ಹಾಸ್ಯ ವೇಷ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ನಿಟ್ಟೆ ಕಾಲೇಜಿನ ರಜತ್ ಬೋಳ ಹಾಗೂ ದ್ವಿತೀಯ ಬಹುಮಾನವನ್ನು ಆಳ್ವಾಸ್‌ನ ಮಂಥನ್, ಬಣ್ಣದ ವೇಷ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ನಿಟ್ಟೆ ಕಾಲೇಜಿನ ಕೆ. ಎಸ್. ಶ್ರೀಕೃಷ್ಣರಾವ್ ಹಾಗೂ ದ್ವಿತೀಯ ಬಹುಮಾನವನ್ನು ಆಳ್ವಾಸ್‌ನ ಜೀವನ್ ಪಡೆದುಕೊಂಡರು.
ತಂಡ ವೈಯಕ್ತಿಕ ಪ್ರಶಸ್ತಿಗಳನ್ನು ಮಂಗಳೂರಿನ ಎಸ್. ಡಿ. ಎಮ್ ಬ್ಯುಸಿನೆಸ್ ಮೆನೇಜ್ ಮೆಂಟ್ ಸಂಸ್ಥೆಯ ಲಾವಣ್ಯ, ಕೊಟ್ಟಾರ ಎ.ಜೆ. ಕಾಲೇಜಿನ ಶರಧಿ, ಮಂಗಳೂರು ವಿವಿ ಕಾಲೇಜಿನ ಕೌಶಿಕ್ ಕತ್ತಲ್‌ಸಾರ್, ವಾಮದಪದವು ಕಾಲೇಜಿನ ಮನೋಜ್, ನಿಟ್ಟೆ ಕಾಲೇಜಿನ ಪ್ರಶಾಂತ್ ಐತಾಳ್, ಐಕಳ ಪಾಂಪೆ ಕಾಲೇಜಿನ ಕೃತ್ತಿಕಾ, ಕಾರ್‌ಸ್ಟ್ರೀಟ್ ಕಾಲೇಜಿನ ಸನತ್ ಕುಮಾರ್ ಹಾಗೂ ಆಳ್ವಾಸ್ ಕಾಲೇಜಿನ ಪ್ರಜ್ವಲ್ ಶೆಟ್ಟಿ ಪಡೆದುಕೊಂಡರು.