ಕುಂದಾಪುರ: ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದವು ಧಮನಿ ಹಾಗೂ ಧಿಮ್ಸಾಲ್ ಸಹಕಾರದೊಂದಿಗೆ ಆಯೋಜಿಸಿದ ‘ಯಕ್ಷ ಗಾನ ವೈಭವ’ ಕಾರ್ಯಕ್ರಮವು ದಿನಾಂಕ 12-04-2024 ರಂದು ಕುಂದಾಪುರ ವಿಶ್ವಕರ್ಮ ಸಭಾಂಗಣದಲ್ಲಿ ನಡೆಯಿತು.
ಪವನ್ ಆಚಾರ್ಯ ಇವರ ಉಪನಯನ ಕಾರ್ಯಕ್ರಮದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ವಟುವಿಗೆ ಗೌರವಿಸಿ ಮಾತನಾಡಿದ ಪ್ರಸಿದ್ಧ ಹಿರಿಯ ಭಾಗವತ ಹೆಮ್ಮಾಡಿ ಪ್ರಭಾಕರ ಆಚಾರ್ “ಶ್ವೇತಯಾನವು ಅದ್ಭುತವಾಗಿ ನೆರವೇರುತ್ತಿದೆ. ಇದು ವಿಶ್ವವ್ಯಾಪಿಯಾಗಿ ಬೆಳಗಲಿ. ಪುಟಾಣಿಗಳ ತಂಡವೊಂದು ತೆಕ್ಕಟ್ಟೆ ಭಾಗದಲ್ಲಿ ಕೆ. ಪಿ. ಹೆಗಡೆ, ಕೂಡ್ಲಿ ದೇವದಾಸ್ ರಾವ್, ಲಂಬೋದರ ಹೆಗಡೆಯವರ ಗರಡಿಯಲ್ಲಿ ಸಿದ್ಧಗೊಂಡು ಸಮಾಜದ ಮಾನ್ಯತೆ ಪಡೆದಿದೆ. 25ರ ಬೆಳ್ಳಿ ಹಬ್ಬದ ಈ ಯಾನವು ನಿರ್ವಿಘ್ನವಾಗಿ ನೆರವೇರಲಿ. ಹೆಚ್ಚು ಹೆಚ್ಚು ಕಲಾ ಪೋಷಕರ ಬಳಗ ಸಂಸ್ಥೆಗೆ ಲಭಿಸಲಿ.” ಎಂದು ಹಾರೈಸಿದರು.
ಗುರುಗಳಾದ ಸೀತಾರಾಮ ಶೆಟ್ಟಿ ಕೊಯಿಕೂರು, ಶ್ರೀಮತಿ ಪೂರ್ಣಿಮಾ ಹಾಗು ಶ್ರೀ ಸುರೇಶ್ ಆಚಾರ್ಯ, ಭರತ್ ಚಂದನ್ ಕೋಟೇಶ್ವರ, ರಾಹುಲ್ ಕುಂದರ್ ಕೋಡಿ, ರಾಹುಲ್ ಕೊಮೆ, ಪೂಜಾ ಆಚಾರ್, ಹರ್ಷಿತಾ ಅಮೀನ್, ಕಿಶನ್ ಪೂಜಾರಿ, ರಚಿತ್ ಶೆಟ್ಟಿ, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ‘ಗಾನ ವೈಭವ’ ಕಾರ್ಯಕ್ರಮ ರಂಗದಲ್ಲಿ ಪ್ರಸ್ತುತಿಗೊಂಡಿತು.