ಮಡಿಕೇರಿ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಇವರು ಶ್ರೀ ರಾಮೋತ್ಸವ ಸಮಿತಿ ಮಡಿಕೇರಿ ಇವರಿಂದ ನಡೆಸಲ್ಪಡುವ 130ನೇ ವರ್ಷದ ರಾಮೋತ್ಸವದ ಅಂಗವಾಗಿ ಹಟ್ಟಿಯಂಗಡಿ ರಾಮಭಟ್ಟ ವಿರಚಿತ (ಶ್ರೀ ರಾಮ ದರ್ಶನ) ಎಂಬ ತಾಳಮದ್ದಳೆ ದಿನಾಂಕ 18-04-2024 ರಂದು ಮಡಿಕೇರಿಯಲ್ಲಿ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಾಯ ಸಂಪಾಜೆ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಜಯರಾಮ ಭಟ್ , ಮುರಳೀಧರ ಕಲ್ಲೂರಾಯ ಸಹಕರಿಸಿದರು. ಹಿಮ್ಮೇಳದಲ್ಲಿ ಹನೂಮಂತನಾಗಿ ಶುಭಾ .ಜೆ.ಸಿ.ಅಡಿಗ, ಅರ್ಜುನನಾಗಿ ಕಿಶೋರಿ ದುಗ್ಗಪ್ಪ ನಡುಗಲ್ಲು, ವೃದ್ಧ ಬ್ರಾಹ್ಮಣ ಮತ್ತು ಶ್ರೀರಾಮನಾಗಿ ಗಾಯತ್ರಿ ಹೆಬ್ಬಾರ್ ಸಹಕರಿಸಿದರು.
ರಾಮೋತ್ಸವ ಸಮಿತಿಯ ಕಾರ್ಯಾಧ್ಯಕ್ಷೆ ಗೀತಾ ಗಿರೀಶ್ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕ ಸುಬ್ರಾಯ ಸಂಪಾಜೆ ವಂದಿಸಿದರು. ರಾಮೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಅನಂತ ಸುಬ್ಬರಾವ್ ಕಲಾವಿದರಿಗೆ ಶುಭ ಹಾರೈಸಿದರು.