ಕುಂದಾಪುರ : ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಶ್ವೇತಯಾನ-1999 ಇದರ 24ನೆಯ ಕಾರ್ಯಕ್ರಮದಲ್ಲಿ ‘ನವರಸ ಯಕ್ಷಗಾಯನ’ವು ದಿನಾಂಕ 27-04-2024ರಂದು ‘ಗೌರೀಶ’ ಕೊಡ್ಲಬೈಲು ಶಿರಿಯಾರದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಪ್ರಾಯೋಜಕರಾದ ಶಿರಿಯಾರದ ಕೊಡ್ಲಬೈಲಿನ ರಾಘವೇಂದ್ರ ಭಟ್ ಇವರು ರಜತ್ ಭಟ್ ಹಾಗೂ ಸ್ತುತಿಯವರಿಗೆ ಅಭಿನಂದನೆಯನ್ನು ಸಲ್ಲಿಸಿ ಮಾತನಾಡಿ “ಕಲಾ ಚಟುವಟಿಕೆಗಳನ್ನು ಕರಾವಳಿ ಭಾಗದಲ್ಲಿ ನಿರಂತರವಾಗಿ ನೆರವೇರಿಸಿಕೊಂಡು ಬಂದ ಸಂಸ್ಥೆ. 25ನೇ ವರ್ಷದ ಸಂದರ್ಭದಲ್ಲಿ ವಾರಕ್ಕೆರಡೆಂಬಂತೆ ವರ್ಷಪೂರ್ತಿ ಕಾರ್ಯಕ್ರಮ ಮಾಡುವುದು ಸಾಹಸವೇ ಅಹುದು. 24ನೇ ಶ್ವೇತಯಾನದ ಕಾರ್ಯಕ್ರಮವಾಗಿ ಇಂದು ‘ನವರಸ ಯಕ್ಷಗಾಯನ’ ಯಶಸ್ವೀ ಕಲಾವೃಂದ ನಮ್ಮೂರಿನಲ್ಲಿ ನೆರವೇರಿಸಿಕೊಂಡಿದೆ. ಯಶಸ್ಸನ್ನೇ ಕಾಣುತ್ತಿರುವ ಸಂಸ್ಥೆಯ ವಿದ್ಯಾರ್ಥಿ ನಮ್ಮ ಮಗ ರಜತ್ ಎಂದು ಹೇಳುವಲ್ಲಿ ಹೆಮ್ಮೆಯಾಗುತ್ತಿದೆ” ಎಂದು ಅಭಿಪ್ರಾಯಪಟ್ಟರು.
“ಪ್ರತಿಭೆಗಳಿಗೆ ಅವಕಾಶ ಕೊಡುವ ಕಾಯಕದಲ್ಲಿ ಸಾರ್ವಜನಿಕರೂ ಭಾಗಿಯಾಗಬೇಕಾದರೆ ಅವಕಾಶ ಕಲ್ಪಿಸಿಕೊಡಬೇಕು. ಸಂಸ್ಥೆಯ ರಜತ ಸಂಭ್ರಮವನ್ನು ಸಮಾಜವೂ ಆಚರಿಸಿಕೊಂಡ ಹೆಮ್ಮೆ ನಮಗೆ” ಎಂದು ಶಕುಂತಲಾ ಮಾತನ್ನಾಡಿದರು. ವಿಷ್ಣುಮೂರ್ತಿ, ಮಂಜುಳಾ, ಭಾಗವತ ಚಂದ್ರಯ್ಯ ಆಚಾರ್, ದರ್ಶನ್ ಗೌಡ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಬಳಿಕ ‘ನವರಸ ಯಕ್ಷಗಾಯನ’ ರಂಗದಲ್ಲಿ ಪ್ರಸ್ತುತಿಗೊಂಡಿತು.