ಧಾರವಾಡ : ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ನಡೆಸಿದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಶ್ರೀ ರೇವಣ ಸಿದ್ಧಪ್ಪ ಜಿ.ಆರ್. ದಾವಣಗೆರೆ ಪ್ರಥಮ ಬಹುಮಾನ, ಶ್ರೀಮತಿ ಸೀಮಾ ಕುಲಕರ್ಣಿ ಕೌಲಾಲಂಪುರ (ಮಲೇಶಿಯಾ) ದ್ವಿತೀಯ ಬಹುಮಾನ ಮತ್ತು ಶ್ರೀಮತಿ ಸೌಮ್ಯ ಪ್ರವೀಣ್ ಮಂಗಳೂರು ತೃತೀಯ ಬಹುಮಾನವನ್ನು ಪಡೆದಿದ್ದಾರೆ. ಕುಮಾರಿ ನೀನಾ ಡಿಸೋಜಾ ಬೆಂಗಳೂರು ಮತ್ತು ಕುಮಾರಿ ಶಾಹೀನಾ ರಹಮಾನ್ ಹುಬ್ಬಳ್ಳಿ ಅವರಿಗೆ ಮೆಚ್ಚುಗೆಯ ಬಹುಮಾನವು ದೊರೆತಿದೆ.
ಈ ಕವನ ಸ್ಪರ್ಧೆಗೆ ಒಟ್ಟು 105 ಕವಿತೆಗಳು ಬಂದಿದ್ದು ಅದರಲ್ಲಿ ಅತಿ ಹೆಚ್ಚು ಅಂಕ ಪಡೆದ ಮೊದಲ ಐದು ಕವಿತೆಗಳಿಗೆ ಬಹುಮಾನವನ್ನು ನೀಡಲಾಗಿದೆ. ವಸ್ತು, ಭಾಷೆ, ಶೈಲಿ ಮತ್ತು ಅಭಿವ್ಯಕ್ತಿಯ ದೃಷ್ಟಿಯಿಂದ ಉತ್ತಮ ಮತ್ತು ಪ್ರಯೋಗಾತ್ಮಕ ಪ್ರಯತ್ನಗಳೆನಿಸಿದ ಬಹುಮಾನಿತ ಕವಿತೆಗಳು ಭರವಸೆಯನ್ನು ಮೂಡಿಸುವಂತಿವೆ ಎಂದು ತೀರ್ಪುಗಾರರಾದ ಭವ್ಯ ಭಟ್ ಅಭಿಪ್ರಾಯಪಟ್ಟಿದ್ದಾರೆ.
ಸಾಹಿತ್ಯ ಗಂಗಾ ಸಂಸ್ಥೆಯ ಮುಖ್ಯಸ್ಥ ವಿಕಾಸ ಹೊಸಮನಿ ಮತ್ತು ಸಂಚಾಲಕ ಡಾ. ಸುಭಾಷ್ ಪಟ್ಟಾಜೆ ಬಹುಮಾನ ವಿಜೇತರಿಗೆ ಮತ್ತು ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಶ್ರೀ ರೇವಣ ಸಿದ್ಧಪ್ಪ ಜಿ.ಆರ್. ದಾವಣಗೆರೆ
ಶ್ರೀಮತಿ ಸೀಮಾ ಕುಲಕರ್ಣಿ ಕೌಲಾಲಂಪುರ (ಮಲೇಶಿಯಾ)
ಶ್ರೀಮತಿ ಸೌಮ್ಯ ಪ್ರವೀಣ್ ಮಂಗಳೂರು
ಕುಮಾರಿ ನೀನಾ ಡಿಸೋಜಾ ಬೆಂಗಳೂರು
ಕುಮಾರಿ ಶಾಹೀನಾ ರಹಮಾನ್ ಹುಬ್ಬಳ್ಳಿ