ಕಯ್ಯಾರು : ಮಹಿಳಾ ಯಕ್ಷಕೂಟ (ರಿ.) ಪೊನ್ನೆತ್ತೋಡು ಕಯ್ಯಾರು ಹಾಗೂ ಶ್ರೀ ಭಗವತೀ ಕೃಪಾ ವೀರಾಂಜನೇಯ ವ್ಯಾಯಾಮ ಶಾಲೆ (ರಿ.) ಭಗವತೀ ನಗರ ಅಡ್ಕ ಇವರ ಸಹಯೋಗದೊಂದಿಗೆ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವೇದಿಕೆಯಲ್ಲಿ ನಾಲ್ಕನೆಯ ವರ್ಷದ ತಾಳಮದ್ದಳೆ ಸಪ್ತಾಹವು ದಿನಾಂಕ 15-04-2024ರಿಂದ 21-04-204ರವರೆಗೆ ಅಡ್ಕ ಶ್ರೀ ಭಗವತೀ ಕೃಪಾ ವೀರಾಂಜನೇಯ ವ್ಯಾಯಾಮ ಶಾಲಾ ಸಭಾಂಗಣದಲ್ಲಿ ಜರಗಿತು. ಪ್ರತೀ ದಿನ ಮಧ್ಯಾಹ್ನ 3ರಿಂದ 4ರವರೆಗೆ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು 4ರಿಂದ 4.45ರವರೆಗೆ ಸಭಾ ಕಾರ್ಯಕ್ರಮ ಹಾಗೂ 5ರಿಂದ 7.30ರವರೆಗೆ ವಿವಿಧ ಮಹಿಳಾ ತಂಡಗಳಿಂದ ತಾಳಮದ್ದಳೆ ಕಾರ್ಯಕ್ರಮ ನೆರವೇರಿತು.
ದಿನಾಂಕ 15-04-2024ನೇ ಸೋಮವಾರ ಸಪ್ತಾಹದ ಉದ್ಘಾಟನೆಯನ್ನು ಶ್ರೀ ಗೋಪಾಲ ಕೃಷ್ಣ ಮಾಸ್ಟರ್ ಪಂಜತ್ತೊಟ್ಟಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಶ್ರೀ ಚಂದ್ರಹಾಸ ಭಗವತೀ ನಗರ ವಹಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ಶಂಕರ ಕಾಮತ್ ಚೇವಾರು ಪಾಲ್ಗೊಂಡರು. ಬಳಿಕ ಮಹಿಳಾ ಯಕ್ಷಕೂಟ ಪೊನ್ನೆತ್ತೋಡು ಕಯ್ಯಾರು ಇವರಿಂದ ‘ದೇವಯಾನಿ ಕಲ್ಯಾಣ’ ಎಂಬ ತಾಳಮದ್ದಳೆ ಪ್ರಸ್ತುತಿಗೊಂಡಿತು.
ದಿನಾಂಕ 16-04-2024ನೇ ಮಂಗಳವಾರ ಸಭಾ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಶ್ರೀ ಸುಬ್ಬಣ್ಣ ಶೆಟ್ಟಿ ತಿಂಬರ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಸುರೇಶ್ ಶೆಟ್ಟಿ ಹೇರೂರು, ಶ್ರೀ ಪ್ರಕಾಶನ್ ಆರ್., ಶ್ರೀಮತಿ ಅಮಿತ ಆನಂದ ವೀರನಗರ ಪಾಲ್ಗೊಂಡರು. ಬಳಿಕ ಮಹಿಳಾ ಯಕ್ಷಕೂಟ ಕದ್ರಿ (ಮಹಿಳಾ ತಾಳಮದ್ದಳೆ ಬಳಗ) ಇವರಿಂದ ‘ಸೀತಾ ಕಲ್ಯಾಣ’ ತಾಳಮದ್ದಳೆಯು ಪ್ರಸ್ತುತಿಗೊಂಡಿತು.
ದಿನಾಂಕ 17-04-2024ನೇ ಬುಧವಾರ ಸಭಾ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಭಗವತೀ ನಗರದ ಶ್ರೀ ಜಯರಾಮ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಭಗವತೀ ನಗರದ ಶ್ರೀ ಜನಾರ್ದನ ಪಾಲ್ಗೊಂಡರು. ಬಳಿಕ ಮಹಿಳಾ ಯಕ್ಷಕೂಟ ಪೊನ್ನೆತ್ತೋಡು ಕಯ್ಯಾರು ಇವರಿಂದ ‘ಮೀನಾಕ್ಷಿ ಕಲ್ಯಾಣ’ ಎಂಬ ತಾಳಮದ್ದಳೆಯು ಪ್ರಸ್ತುತಿಗೊಂಡಿತು.
ದಿನಾಂಕ 18-04-2024ನೇ ಗುರುವಾರ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಶ್ರೀ ಮನು ಭಟ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಮೃತ್ಯುಂಜಯ ಐಲ, ಶ್ರೀ ಚಂದ್ರಶೇಖರ ಬಂದ್ಯೋಡು, ಶ್ರೀಮತಿ ಮೋಹಿನಿ ಹರೀಶ್ ಹಾಗೂ ಶ್ರೀ ಕಿಶೋರ್ ಕುಮಾರ್ ಪಾಲ್ಗೊಂಡರು. ಬಳಿಕ ಅಶೋಕ ನಗರದ ಶ್ರೀ ಭ್ರಾಮರಿ ಕಲಾ ವೃಂದದವರಿಂದ ‘ರುಕ್ಮಿಣಿ ಕಲ್ಯಾಣ’ ಎಂಬ ತಾಳಮದ್ದಳೆಯು ಪ್ರಸ್ತುತಿಗೊಂಡಿತು.
ದಿನಾಂಕ 19-04-2024ನೇ ಶುಕ್ರವಾರ ಸಭಾ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಬಜ್ಪೆ ಶ್ರೀ ಹರಿನಾರಾಯಣ ಮಯ್ಯ ಕುಂಬಳೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಶಾರದಾ ತನಯ ಬಾಯಾರು, ಶ್ರೀ ಶಿವಪ್ರಸಾದ್ ಶೆಟ್ಟಿ ಕುಡಾಲೂ, ಶ್ರೀಮತಿ ಹೇಮಲತಾ ಬಾಲಕೃಷ್ಣ ಬಂದ್ಯೋಡು, ಶ್ರೀಮತಿ ಜಯಂತಿ ಶೆಟ್ಟಿ ಕರವೂರು ಪಾಲ್ಗೊಂಡರು. ಬಳಿಕ ಮಹಿಳಾ ಯಕ್ಷಕೂಟ ಕದ್ರಿ ಪೊನ್ನೆತ್ತೋಡು ಕಯ್ಯಾರು ಇವರಿಂದ ‘ಜಾಂಬವತಿ ಕಲ್ಯಾಣ’ ತಾಳಮದ್ದಳೆ ಪ್ರಸ್ತುತಿಗೊಂಡಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಸೆಮಿ ಕ್ಲಾಸಿಕಲ್ ನೃತ್ಯ ಸ್ಪರ್ಧೆಯಲ್ಲಿ ಹನ್ನೆರಡು ಮಂದಿ ಭಾಗವಹಿಸಿದರು.
ದಿನಾಂಕ 20-04-2024ನೇ ಶನಿವಾರ ಸಭಾ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಶ್ರೀ ಶಶಿ ಆರ್.ಕೆ. ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ವಿಶ್ವನಾಥ ವಳಚ್ಚಲ್, ಶ್ರೀಮತಿ ಜಯಂತಿ ಮಟ್ಟ ಪಾಲ್ಗೊಂಡರು. ಬಳಿಕ ಬಂಟ ಮಹಿಳಾ ಸಂಘ ಬೆಳ್ಳೂರು ಕಾಸರಗೋಡು ಇವರಿಂದ ‘ಸುಭದ್ರಾ ಕಲ್ಯಾಣ’ ಎಂಬ ತಾಳಮದ್ದಳೆಯು ಪ್ರಸ್ತುತಿಗೊಂಡಿತು.
ದಿನಾಂಕ 21-04-2024ನೇ ಆದಿತ್ಯವಾರ ಮಧ್ಯಾಹ್ನ 2-30ರಿಂದ ಪ್ರಸಿದ್ಧ ಯುವ ಭಾಗವತರುಗಳಿಂದ ಯಕ್ಷ-ಗಾನ ವೈಭವ ನಡೆಯಿತು. ಶ್ರೀ ವಾಸುದೇವ ಕಲ್ಲೂರಾಯ, ಶ್ರೀ ಹರೀಶ್ ಪಂಜತೊಟ್ಟಿ, ಶ್ರೀ ಪ್ರಸಾದ್ ಶಿರಂತಡ್ಕ ಭಾಗವತರಾಗಿ, ಅದೇ ರೀತಿ ಹಿಮ್ಮೇಳವಾದಕ ರಾಗಿ ಚೇವಾರು ಶ್ರೀ ಶಂಕರ ಕಾಮತ್, ಶ್ರೀ ಶಿವರಾಮ ಆಚಾರ್ಯ ಧರ್ಮತ್ತಡ್ಕ, ಶ್ರೀ ರಾಜರಾಮ ಬಲ್ಲಾಳ್ ಚಿಪ್ಪಾರು, ಹಾಗೆಯೇ ಚಕ್ರತಾಳದಲ್ಲಿ ಶ್ರೀ ಸತೀಶ್ ಶೆಟ್ಟಿ ಬಾಯಾರು ಭಾಗವಹಿಸಿದರು. ಸಾಯಂಕಾಲ 4-00 ಗಂಟೆಗೆ ಕೊಂಡೆವೂರು ಮಠದ ಯತಿವರ್ಯರಾದ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮಿಗಳನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡು ಸಮಾರೋಪ ಸಮಾರಂಭದಲ್ಲಿ ಅವರಿಂದ ಆಶೀರ್ವಚನ, ಶ್ರೀ ಉಮೇಶ್ ಎಂ. ಸಾಲಿಯಾನ್ ಇವರಿಂದ ಉದ್ಘಾಟನೆಗೊಂಡ ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಕೆ. ನರಸಿಂಹ ಬಲ್ಲಾಳ್ ಭಾಗವಹಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ರಾಮ ಮೋಹನ್ ಚೆಕ್ಕೆ, ಡಾ. ಶ್ರೀ ರಾಜರಾಮ ಭಟ್ ದೇವಕಾರ, ಶ್ರೀ ವಾಸು ಬಾಯಾರ್, ಶ್ರೀ ಅಜಿತ್ ಕುಮಾರ್ ಭಗವತೀ ನಗರ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಹಿರಿಯ ಮದ್ದಳೆಗಾರರಾದ ಪದ್ಯಾಣ ಶ್ರೀ ಶಂಕರ ನಾರಾಯಣ ಭಟ್ ಇವರಿಗೆ ‘ಯಕ್ಷ ಕಯ್ಯಾರು ಪ್ರಶಸ್ತಿ’ ನೀಡಲಾಯಿತು.ಇದರೊಂದಿಗೆ ಹಿರಿಯ ಪ್ರಸಾದನ ಕಲಾವಿದರಾದ ಶ್ರೀ ಜಯಂತ ಜೋಗಿ ಸಜಂಕಿಲ ಇವರಿಗೆ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು. ಶ್ರೀ ರಾಜರಾಮ ಬಲ್ಲಾಳ್ ಚಿಪ್ಪಾರು ಅಭಿನಂದನಾ ಭಾಷಣ ಗೈದರು. ಶ್ರೀಮತಿ ಸುನೀತಾ ಟೀಚರ್ ಶಿರಿಯ ಸನ್ಮಾನ ಪತ್ರವನ್ನು ವಾಚಿಸಿದರು. ಮಹಿಳಾ ಯಕ್ಷಕೂಟ ಪೊನ್ನೆತ್ತೋಡು ಕಯ್ಯಾರು ಇದರ ನಿರ್ದೇಶಕರಾದ ಶ್ರೀ ಚಂದ್ರಹಾಸ ಕಯ್ಯಾರು ಅತಿಥಿಗಳನ್ನು ಸ್ವಾಗತಿಸಿ, ಶ್ರೀ ಕೃಷ್ಣ ಪೊನ್ನೆತ್ತೋಡು ಕಾರ್ಯಕ್ರಮವನ್ನು ನಿರೂಪಿಸಿದರು. ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಬಳಿಕ ಮಹಿಳಾ ಯಕ್ಷಕೂಟ ಪೊನ್ನೆತ್ತೋಡು ಕಯ್ಯಾರು ಇವರಿಂದ ‘ರತಿ ಕಲ್ಯಾಣ’ ತಾಳಮದ್ದಳೆ ಪ್ರಸ್ತುತಿಗೊಂಡಿತು.