Subscribe to Updates

    Get the latest creative news from FooBar about art, design and business.

    What's Hot

    ‘ಡಾ. ಜೀ.ಶಂ. ಪರಮಶಿವಯ್ಯ ಪ್ರಶಸ್ತಿ’ಗೆ ಜಾನಪದ ವಿದ್ವಾಂಸ ಪ್ರೊ. ಕೆ. ಚಿನ್ನಪ್ಪ ಗೌಡ ಆಯ್ಕೆ

    February 5, 2026

    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಿಂಗಳ ಸರಣಿ ತಾಳಮದ್ದಲೆ

    February 5, 2026

    ಉದ್ಯಾವರದ ಸರಕಾರಿ ಕಾಲೇಜಿನಲ್ಲಿ ಬಹುಭಾಷಾ ನಿರಂತರ್ ನಾಟಕೋತ್ಸವ | ಫೆಬ್ರವರಿ 05ರಿಂದ 08

    February 4, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ತುಲುವೆರೆ ಕಲ ವರ್ಸೊಚ್ಚಯ’ ಕಾರ್ಯಕ್ರಮ
    Literature

    ‘ತುಲುವೆರೆ ಕಲ ವರ್ಸೊಚ್ಚಯ’ ಕಾರ್ಯಕ್ರಮ

    May 3, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದಲ್ಲಿ ‘ತುಲುವೆರೆ ಕಲ ವರ್ಸೊಚ್ಚಯ’ ಕಾರ್ಯಕ್ರಮವು ದಿನಾಂಕ 01-05-2024ರಂದು ನಡೆಯಿತು.

    ಈ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಹಿರಿಯ ಸಾಹಿತಿ ಸದಾನಂದ ನಾರಾವಿ “ಇಂದು ವ್ಯಾವಹಾರಿಕ ಅಗತ್ಯಕ್ಕೆ ಇತರ ಭಾಷೆಗಳ ಕಲಿಕೆ ಅನಿವಾರ್ಯವಾದರೂ, ಮಾತೃಭಾಷೆ ಮೇಲಿನ ಅಭಿಮಾನ ಎಂದಿಗೂ ಮರೆಯಾಗಬಾರದು. ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಮಾತೃಭಾಷೆಯಲ್ಲಿದೆ. ಶೈಕ್ಷಣಿಕ ದೃಷ್ಟಿಯಿಂದಲೂ ಭಾಷೆಯ ಕಲಿಕೆ ಹೆಚ್ಚಿದಷ್ಟೂ ಜ್ಞಾನದ ಮಟ್ಟ ವೃದ್ಧಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ಸಕಾರಾತ್ಮಕ ಚಿಂತನೆ ಸೃಷ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಬಹುಭಾಷಾ ಕಲಿಕೆ ಮಹತ್ವದ ಪಾತ್ರ ವಹಿಸುತ್ತದೆ. ಭಾಷೆಯನ್ನು ದ್ವೇಷಿಸುವ ಮನೋಭಾವ ಸಲ್ಲದು. ವರ್ಷದ ಅವಧಿಯಲ್ಲಿ ಸಂಘಟನೆ ಸದಸ್ಯರ ಕವನ, ಬರಹಗಳ ಸಂಗ್ರಹದ ಆರು ಪುಸ್ತಕಗಳನ್ನು ಹೊರತರುವ ಕೆಲಸ ಸುಲಭಸಾಧ್ಯವಾಗಿಸಿದ ಸಂಘಟನೆಯ ಪದಾಧಿಕಾರಿಗಳು ಅಭಿನಂದನಾರ್ಹರು, ಸಾಹಿತಿ, ಕವಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಸಂಘಟನೆ ಕಾರ್ಯ ನಿರಂತರವಾಗಿರಲಿ, ಇನ್ನಷ್ಟು ಕೃತಿಗಳು ಹೊರಬರಲಿ” ಎಂದು ಆಶಿಸಿದರು.

    ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ಅಕ್ಷಯಾ ಆರ್.ಶೆಟ್ಟಿ ಮಾತನಾಡಿ “ಕೃತಿ ರೂಪದಲ್ಲಿ ಸಾಹಿತ್ಯದ ದಾಖಲೀಕರಣ ಸಂಘಟನೆಯ ಅಪೂರ್ವ ಹಾಗೂ ಶ್ಲಾಘನೀಯ ಕಾರ್ಯ. ಪ್ರಾದೇಶಿಕ ಭಾಷಾ ವೈವಿಧ್ಯದೊಂದಿಗೆ ಶಬ್ದಭಂಡಾರ ಹಾಗೂ ಅಧ್ಯಯನ ಪೂರಕ ಮಾಹಿತಿ ಸಂಗ್ರಹದಲ್ಲಿ ಈ ಕೃತಿಗಳು ಮಹತ್ವದ ಪಾತ್ರ ವಹಿಸುತ್ತವೆ” ಎಂದು ಹೇಳಿದರು.

    ಶಾರದಾ ವಿದ್ಯಾಲಯದ ಪ್ರಾಂಶುಪಾಲ ಶ್ರೀ ದಯಾನಂದ ಕಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಘಟನೆ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ಯೂಟ್ಯೂಬ್ ಚಾನೆಲ್ ಅನ್ನು ನಿರೂಪಕ ಕದ್ರಿ ನವನೀತ ಶೆಟ್ಟಿ ಲೋಕಾರ್ಪಣೆಗೊಳಿಸಿದರು. ಸಾಹಿತಿ, ಸಂಘಟಕ ಕಾ.ವೀ. ಕೃಷ್ಣದಾಸ್, ದಯಾನಂದ ಕಟೀಲ್, ರಾಜೇಂದ್ರ ಪ್ರಸಾದ್‌ ಮತ್ತಿತರರು ಉಪಸ್ಥಿತರಿದ್ದರು.

    ಇದೇ ಸಂದರ್ಭದಲ್ಲಿ ಸಂಘಟನೆ ಸದಸ್ಯರ ಬರಹಗಳ ಸಂಗ್ರಹ ‘ಬೊಲ್ಲಿದಾರಗೆ’, ‘ಉದಿಪು’, ‘ಉಪ್ಪರಿಗೆ’, ‘ತುಡರ್’, ಕೇಪುಲ’ ಮತ್ತು ‘ಪುಂಡಿಕಾಣಿಕೆ’ ಕೃತಿಗಳನ್ನು ವಿಜಯಲಕ್ಷ್ಮೀ ಕಟೀಲ್, ಡಾ. ಮೀನಾಕ್ಷಿ ರಾಮಚಂದ್ರ, ರಾಜಶ್ರೀ ಟಿ. ರೈ ಪೆರ್ಲ, ವೀಣಾ ಟಿ. ಶೆಟ್ಟಿ, ರಘು ಇಡ್ಕಿದು, ಅಕ್ಷಯಾ ಆರ್. ಶೆಟ್ಟಿ ಇವರುಗಳು ಅನಾವರಣಗೊಳಿಸಿ ಕೃತಿ ಪರಿಚಯಿಸಿದರು. ಕೃತಿ ರಚನೆಗೆ ನೆರವು ನೀಡಿದವರನ್ನು ಈ ಸಂದರ್ಭ ಗೌರವಿಸಲಾಯಿತು.

    ‘ತುಳು ಸಾಹಿತ್ಯದ ಬುಲೆಚ್ಚಿಲ್‌ದ ತಾದಿ ಆನಿ-ಇನಿ-ನನ’ ವಿಚಾರದ ಕುರಿತು ಹಿರಿಯ ಸಾಹಿತಿ, ಸಂಶೋಧಕ ಮುದ್ದು ಮೂಡುಬೆಳ್ಳಿ ಉಪನ್ಯಾಸ ನೀಡಿದರು. ಹರಿಣಿ ಎಂ.ಶೆಟ್ಟಿ, ದಿವ್ಯಾ ಅಂಚನ್ ಪಕ್ಷಿಕೆರೆ, ಪದ್ಮನಾಭ ಪೂಜಾರಿ ನೇರಂಬೋಳು ಅವರಿಗೆ ‘ಕಲತ ಬೊಲ್ಲಿ’ ಸನ್ಮಾನ ನೀಡಲಾಯಿತು. ವಿನಮ್ರ ಇಡ್ಕಿದು ಪ್ರಾರ್ಥಿಸಿದರು. ಸಾಹಿತಿ ರೇಣುಕಾ ಕಣಿಯೂರು ಬೀಳು ಕಾರ್ಯಕ್ರಮ ನಿರೂಪಿಸಿದರು. ಸಂಘಟನೆ ಸದಸ್ಯರಿಂದ ‘ಅಮೃತ ತುಲು ಚಿಟ್ಕ’ ಕವಿಗೋಷ್ಠಿ, ಪದರಂಗಿತ ಮಿನದನ, ಚಾತುರ್ಪು ತೂಪರಿಕೆ ಕಲಾ ಪ್ರದರ್ಶನ ಜರುಗಿತು.

    Share. Facebook Twitter Pinterest LinkedIn Tumblr WhatsApp Email
    Previous Articleಬೊಟ್ಟಿಕೆರೆ ಪುರುಷೋತ್ತಮ ಪೂಂಜ ವೇದಿಕೆಯಲ್ಲಿ ತಾಳಮದ್ದಳೆ ಸಪ್ತಾಹ 2024
    Next Article ಹೀಗೂ ಒಂದು ವಿಶಿಷ್ಟ ಕನ್ನಡ ಭವನ, ಅದೂ ಕೇರಳದಲ್ಲಿ – ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ
    roovari

    Add Comment Cancel Reply


    Related Posts

    ‘ಡಾ. ಜೀ.ಶಂ. ಪರಮಶಿವಯ್ಯ ಪ್ರಶಸ್ತಿ’ಗೆ ಜಾನಪದ ವಿದ್ವಾಂಸ ಪ್ರೊ. ಕೆ. ಚಿನ್ನಪ್ಪ ಗೌಡ ಆಯ್ಕೆ

    February 5, 2026

    ಕನ್ನಡ ಸಾಹಿತ್ಯ ಪರಂಪರೆ ಮತ್ತು ಸಮಕಾಲೀನತೆ ಉಪನ್ಯಾಸ ಮಾಲಿಕೆ | ಫೆಬ್ರವರಿ 05

    February 4, 2026

    ಮಂಗಳೂರಿನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಾಟಕ ಮಹೋತ್ಸವ ಮತ್ತು ಪ್ರಶಸ್ತಿ ಪ್ರದಾನ

    February 4, 2026

    ಬಳ್ಳಾರಿಯ ಕನ್ನಡ ಭವನದಲ್ಲಿ ಪುಸ್ತಕ ಲೋಕಾರ್ಪಣೆ | ಫೆಬ್ರುವರಿ 08

    February 4, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.