ಮಂಗಳೂರು : ಸಂಗೀತ ಪರಿಷತ್ ಮಂಗಳೂರು ಇದರ ವತಿಯಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣಮಠ ಇವುಗಳ ಸಹಯೋಗದೊಂದಿಗೆ ‘ಯುವ ಸಂಗೀತೋತ್ಸವ 2024’ವನ್ನು ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ದಿನಾಂಕ 05-05-2024ರಂದು ಹಮ್ಮಿಕೊಂಡಿರುತ್ತದೆ.
ಬೆಳಗ್ಗೆ ಗಂಟೆ 10-00ರಿಂದ ಕುಮಾರಿ ಚಿನ್ಮಯಿ ವಿ. ಭಟ್ ಇವರ ಹಾಡುಗಾರಿಕೆಗೆ ಶ್ರೀ ಗೌತಮ್ ಭಟ್ ಪಿ.ಜಿ. ವಯೋಲಿನ್ ಮತ್ತು ಶ್ರೀ ಅವಿನಾಶ್ ಬೆಳ್ಳಾರೆ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಗಂಟೆ 11-30ಕ್ಕೆ ಶ್ರೀ ವೆಂಕಟ ಯಶಸ್ವಿ ಮತ್ತು ಶ್ರೀ ವಿಜೇತ ಸುಬ್ರಹ್ಮಣ್ಯ ಇವರ ಹಾಡುಗಾರಿಕೆಗೆ ಕುಮಾರಿ ಧನಶ್ರೀ ಶಬರಾಯ ವಯೋಲಿನ್ ಮತ್ತು ಶ್ರೀ ಪ್ರಣವ್ ಸುಬ್ರಹ್ಮಣ್ಯ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಗಂಟೆ 1-30ರಿಂದ ಕುಮಾರಿ ಮೇಧಾ ಉಡುಪ ಇವರ ಕೊಳಲು ವಾದನಕ್ಕೆ ಶ್ರೀ ಗೌತಮ್ ಭಟ್ ಪಿ.ಜಿ. ವಯೋಲಿನ್ ಮತ್ತು ಶ್ರೀ ಅವಿನಾಶ್ ಬೆಳ್ಳಾರೆ ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. ಗಂಟೆ 3-00ರಿಂದ ಕುಮಾರಿ ತನ್ಮಯೀ ಹಸನಡ್ಕ ಇವರ ಹಾಡುಗಾರಿಕೆಗೆ ಕುಮಾರಿ ಧನಶ್ರೀ ಶಬರಾಯ ವಯೋಲಿನ್ ಮತ್ತು ಶ್ರೀ ಪ್ರಣವ್ ಸುಬ್ರಹ್ಮಣ್ಯ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಸಂಜೆ 5-00 ಗಂಟೆಗೆ ಅಂತರಾಷ್ಟ್ರೀಯ ಮಟ್ಟದ ಯುವ ಕಲಾವಿದೆ ಕೇರಳದ ಕುಮಾರಿ ಸೂರ್ಯ ಗಾಯತ್ರಿಯವರ ಹಾಡುಗಾರಿಕೆಗೆ ಶ್ರೀ ಗಣರಾಜ್ ಕಾರ್ಲೆ ವಯೋಲಿನ್, ಶ್ರೀ ಅನಿಲ್ ಕುಮಾರ್ ವಾದಗಾರ ಮೃದಂಗದಲ್ಲಿ ಮತ್ತು ಶ್ರೀ ಮಂಜೂರ್ ಉಣ್ಣಿ ಕೃಷ್ಣನ್ ಘಟಂನಲ್ಲಿ ಸಾಥ್ ನೀಡಲಿದ್ದಾರೆ.