ಪುತ್ತೂರು : ಸಂಘಟನೆ, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸಾರ ಜೋಡುಮಾರ್ಗ ಸಂಸ್ಥೆಯ ನೇತೃತ್ವದಲ್ಲಿ ನಾಲ್ಕು ದಿನಗಳ ‘ಅಟ್ಟಾಮುಟ್ಟಾ’ ಮಕ್ಕಳ ಬೇಸಿಗೆ ಶಿಬಿರವು ದಿನಾಂಕ 11-05-2024ರಿಂದ 14-05-2024ರವರೆಗೆ ಪುತ್ತೂರಿನ ಲಯನ್ಸ್ ಹಾಲ್ ನಲ್ಲಿ ನಡೆಯಲಿದೆ.
ಬೆಳಿಗ್ಗೆ 9.30ರಿಂದ ಸಂಜೆ 4ಗಂಟೆಯವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಯೋಗ, ರಂಗಾಟಗಳು, ಕರಕುಶಲ ಕಲೆ, ಚಿತ್ರಕಲೆ, ವಿಜ್ಞಾನ ಲೋಕ, ಹೊರಸಂಚಾರ, ಕಥೆಗಳ ಪ್ರಪಂಚ, ಶಿಶುಗೀತೆ, ಜಾಗೃತಿ ಗೀತೆ ಹಾಗೂ ರಂಗ ಚಟುವಟಿಕೆಗಳನ್ನು ನಡೆಸಲಾಗುವುದು. ಶಿಬಿರದ ಭಾಗವಾಗಿ ಮಕ್ಕಳಿಂದ ಪುತ್ತೂರು ನಗರ ಪೊಲೀಸ್ ಠಾಣೆ ಹಾಗೂ ಪುತ್ತೂರು ಸಂಚಾರ ಪೊಲೀಸ್ ಠಾಣೆಗಳ ಭೇಟಿ ನಡೆಸಲಾಗುವುದು, ದಿನಾಂಕ 13-05-2024ರ ಸೋಮವಾರ ಅಪರಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ಕಿಲ್ಲೆ ಮೈದಾನ ಸಮೀಪ ‘ಮಕ್ಕಳ ಸಂತೆ’ಯನ್ನೂ ಆಯೋಜಿಸಲಾಗಿದೆ.
ಜ್ಞಾನ ಬೆಳಕು ಬಳಗ, ಲಯನ್ಸ್ ಕ್ಲಬ್ ಪುತ್ತೂರು ಹಾಗೂ ರೋಟರಿ ಪುತ್ತೂರು ಎಲೈಟ್ ಶಿಬಿರದ ಆಯೋಜನೆಗೆ ನೆರವು ನೀಡಲಿದೆ. 8ರಿಂದ 14 ವರ್ಷದೊಳಗಿನ ಆಸಕ್ತ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಬಹುದಾಗಿದೆ ಎಂದು ಸಂಸಾರ ಜೋಡುಮಾರ್ಗ ತಂಡದ ನಿರ್ದೇಶಕ ಮೌನೇಶ ವಿಶ್ವಕರ್ಮ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರು ನೋಂದಾಯಿಸಲು 7899161098 ಸಂಖ್ಯೆಯನ್ನು ಸಂಪರ್ಕಿಸಿರಿ.