ಉಡುಪಿ : ಖ್ಯಾತ ವಿಮರ್ಶಕ ಪ್ರೊ. ವಿ.ಎಂ. ಇನಾಂದಾರ್ ಇವರ ನೆನಪಿನಲ್ಲಿ ನೀಡುವ ‘ಇನಾಂದಾರ್ ಪ್ರಶಸ್ತಿ’ಗೆ ಖ್ಯಾತ ವಿಮರ್ಶಕ ಡಾ. ಎ. ಮೋಹನ್ ಕುಂಟಾರ್ ಅವರ ‘ಸ್ವಗತ ಮತ್ತು ಸಂವಾದ ವಿಮರ್ಶಾಕೃತಿಯು 2023ರ ಸಾಲಿಗೆ ಆಯ್ಕೆಯಾಗಿದೆಯೆಂದು ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಪ್ರಶಸ್ತಿಯನ್ನು ದಿನಾಂಕ 27-05-2024ರಂದು ಎಂ.ಜಿ.ಎಂ ಕಾಲೇಜಿನಲ್ಲಿ ನಡೆಯಲಿರುವ ವಾರ್ಷಿಕ ಮುದ್ದಣ ಸಾಹಿತ್ಯೋತ್ಸವದ ಸಂದರ್ಭದಲ್ಲಿ ನೀಡಿ ಗೌರವಿಸಲಾಗುವುದು.
ಕನ್ನಡದಲ್ಲಿ ಎಂ. ಎ., ಎಂ. ಫಿಲ್, ಪಿ. ಎಚ್. ಡಿ. ಪದವಿಯನ್ನು ಹೊಂದಿರುವ ಡಾ. ಎ. ಮೋಹನ್ ಕುಂಟಾರ್ ಮಲೆಯಾಳಂ ಮತ್ತು ತಮಿಳು ಭಾಷೆಯಲ್ಲಿ ಸರ್ಟಿಫಿಕೇಟ್ ಹಾಗೂ ತೆಲುಗಿನಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಇಲ್ಲಿನ ಭಾಷಾಂತರ ವಿಭಾಗದಲ್ಲಿ ಸಂಶೋಧನಾ ಸಹಾಯಕರಾಗಿ ಉದ್ಯೋಗಕ್ಕೆ ಸೇರಿ ಉಪನ್ಯಾಸಕರಾಗಿ, ಪ್ರವಾಚಕರಾಗಿ ಪ್ರಸ್ತುತ ಭಾಷಾಂತರ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಯುತರು ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ. 15 ಮಂದಿ ವಿದ್ಯಾರ್ಥಿಗಳಿಗೆ ಪಿ. ಎಚ್. ಡಿ. ಮಾರ್ಗದರ್ಶನ ಮಾಡಿದ್ದಾರೆ. ಇವರು 20ಕ್ಕೂ ಹೆಚ್ಚು ಕೃತಿಗಳು, 6ಕ್ಕೂ ಹೆಚ್ಚು ಅನುವಾದ ಅಧ್ಯಯನಗಳು ಹಾಗೂ ಅನುವಾದ ಸಿದ್ಧಾಂತ ಸಂಬಂಧಿ ಕೃತಿಗಳು, 14 ಅನುವಾದ ಕೃತಿಗಳು, 6 ಅನುವಾದ ಸಂಬಂಧಿ ಸಂಪಾದಿತ ಕೃತಿಗಳನ್ನು ರಚಿಸಿದ್ದಾರೆ ಹಾಗೂ 6 ಕೃತಿಗಳನ್ನು ಸಂಪಾದಿಸಿದ್ದಾರೆ. ಇವರಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’,’ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ’, ಮಂಗಳೂರು ವಿವಿಯಿಂದ ‘ಯಕ್ಷಮಂಗಳ ಕೃತಿ ಪ್ರಶಸ್ತಿ’, ಬಿ. ಎಂ. ಶ್ರೀ ಪ್ರತಿಷ್ಟಾನದಿಂದ ‘ಅನಗ ವಿಮರ್ಶಾ ಪ್ರಶಸ್ತಿ’ ಸೇರಿದಂತೆ 10ಕ್ಕೂ ಹೆಚ್ಚಿನ ಪ್ರಶಸ್ತಿಗಳು ಲಭಿಸಿವೆ.
Subscribe to Updates
Get the latest creative news from FooBar about art, design and business.
Previous Articleಎಚ್. ಜಿ. ಗಣೇಶ್ ಉರಾಳರಿಗೆ ಕಲಾ ಡಾಕ್ಟರೇಟ್ ಪದವಿ
Next Article ಪುರಭವನದಲ್ಲಿ ‘ಭರತನಾಟ್ಯ ರಂಗಪ್ರವೇಶ’ | ಮೇ 12