ಉಡುಪಿ : ರಾಗ ಧನ ಉಡುಪಿ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸುತ್ತಿರುವ ‘ರಾಗರತ್ನ ಮಾಲಿಕೆ’ -24 ಸಂಗೀತ ಕಾರ್ಯಕ್ರಮವು ದಿನಾಂಕ 21-05-2024 ಮತ್ತು 22-05-2204ರಂದು ಮಣಿಪಾಲ ಅಲೆವೂರು ರಸ್ತೆ, ಮಣಿಪಾಲ ಡಾಟ್ ನೆಟ್ ಇಲ್ಲಿ ನಡೆಯಲಿದೆ.
ದಿನಾಂಕ 21-05-2024 ಮತ್ತು 22-05-2204ರಂದು ಗುರುಗುಹಾಮೃತ ಸಂಸ್ಥೆಯ ವತಿಯಿಂದ ಮುತ್ತುಸ್ವಾಮಿ ದೀಕ್ಷಿತರ ಅಪರೂಪದ ಕೀರ್ತನೆಗಳ ‘ಸಂಗೀತ ಕಾರ್ಯಾಗಾರ’ವನ್ನು ಸಂಪನ್ಮೂಲ ವ್ಯಕ್ತಿಯಾಗಿ ಚೆನ್ನೈಯ ಶ್ರೀ ಜಿ. ರವಿಕಿರಣ್ ಇವರು ನಡೆಸಿಕೊಡಲಿದ್ದಾರೆ.
ದಿನಾಂಕ 21-05-2024ರಂದು ಅಪರಾಹ್ನ ಗಂಟೆ 2-30ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇದರ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಇವರು ಸಂಗೀತ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ದಿನಾಂಕ 22-05-2204ರಂದು ಅಪರಾಹ್ನ ಗಂಟೆ 2-00ರಿಂದ ಶಿಬಿರಾರ್ಥಿಗಳಿಂದ ಅಭ್ಯಾಸಕ್ರಮ, ಗಂಟೆ 2-55ರಿಂದ ಕರ್ನಾಟಕ ಸಂಗೀತ ಕಛೇರಿಯಲ್ಲಿ ಉಡುಪಿಯ ಪ್ರಣತಿ ಎಸ್. ಭಟ್ ಮತ್ತು ಧೃತಿ ಎಸ್. ಭಟ್ ಇವರಿಂದ ದ್ವಂದ್ವ ಹಾಡುಗಾರಿಕೆ ನಡೆಯಲಿದೆ. ತನ್ಮಯೀ ಉಪ್ಪಂಗಳ ವಯೊಲಿನ್ ಮತ್ತು ನಾರಾಯಣ ಬಳ್ಳಕ್ಕೂರಾಯ ಕುಬಣೂರು ಮೃದಂಗದಲ್ಲಿ ಸಹಕರಿಸಲಿದ್ದಾರೆ. ಸಂಜೆ ಗಂಟೆ 5-00ರಿಂದ ನಡೆಯಲಿರುವ ಕರ್ನಾಟಕ ಸಂಗೀತ ಕಛೇರಿಯಲ್ಲಿ ಚೆನ್ನೈಯ ಶ್ರೀ ಜಿ. ರವಿಕಿರಣ್ ಇವರ ಹಾಡುಗಾರಿಕೆಗೆ ಶ್ರೀ ಎಡಪಳ್ಳಿ ಅಜಿತ್ ಕುಮಾರ್ ವಯೊಲಿನ್ ಮತ್ತು ಪುತ್ತೂರಿನ ಶ್ರೀ ನಿಕ್ಷಿತ್ ಟಿ. ಮೃದಂಗದಲ್ಲಿ ಸಹಕರಿಸಲಿದ್ದಾರೆ.
‘ಸಂಗೀತ ಕಾರ್ಯಾಗಾರ’ದ ನೋಂದಾವಣೆಗೆ 19-05-2024 ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 9964140601 ಇವರನ್ನು ಸಂಪರ್ಕಸಿರಿ ಎಂದು ರಾಗ ಧನ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಉಮಾಶಂಕರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.