ಸುಳ್ಯ : ಹಿರಿಯ ಸಾಹಿತಿ, ವಿದ್ವಾಂಸ, ಸಂಶೋಧಕ, ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಇವರಿಗೆ ಸುಳ್ಯ ತಾಲೂಕು ಜಾನಪದ ಕೂಡುಕಟ್ಟು ವತಿಯಿಂದ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮವು ದಿನಾಂಕ 09-05-2024ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ. ಪ್ರಭಾಕರ ಶಿಶಿಲ “ತುಳು ಭಾಷೆ ಮತ್ತು ತುಳು ಸಂಸ್ಕೃತಿಯ ಉಳಿವಿಗಾಗಿ ನಿರಂತರ ಕೆಲಸ ಮಾಡಿದ ಪಾಲ್ತಾಡಿ ರಾಮಕೃಷ್ಣ ಆಚಾರ್ ತುಳುವಿಗೆ ಒಂದು ಗೌರವದ ಸ್ಥಾನಮಾನ ದೊರಕಿಸಿಕೊಟ್ಟವರು. ಅಧ್ಯಯನದ ಮೂಲಕ ತನ್ನ ಜ್ಞಾನ ಶಕ್ತಿಯನ್ನು ವೃದ್ಧಿಸಿಕೊಂಡು ಅದನ್ನು ಸಾಹಿತ್ಯ ಲೋಕಕ್ಕೆ ವಿಸ್ತರಿಸಿ ಹಲವರಿಗೆ ಮಾರ್ಗ ದರ್ಶಕರಾಗಿ ಬೆಳೆಸಿದ ಕೀರ್ತಿ ಅವರದು.” ಎಂದು ಹೇಳಿದ್ದಾರೆ.
ಜಾನಪದ ಸಂಶೋಧಕ ಡಾ. ಸುಂದರ್ ಕೇನಾಜೆ ಮಾತನಾಡಿ “ಅಕಾಡೆಮಿಗಳು ಹೇಗೆ ಕೆಲಸ ಮಾಡಬೇಕು ಎಂಬುದನ್ನು ರಾಜ್ಯಕ್ಕೆ ಮಾದರಿಯಾಗಿ ತೋರಿಸಿಕೊಟ್ಟವರು ಪಾಲ್ತಾಡಿಯವರು. ಜಾನಪದ ಉತ್ಸವಗಳನ್ನು ಸಂಘಟಿಸಿ ತಳ ಸಮುದಾಯದ ಜನರಿಗೆ ಅವಕಾಶವನ್ನು ಮಾಡಿ ಕೊಟ್ಟಿದ್ದರು. ಆ ಮೂಲಕ ಸಮಾಜವನ್ನು ಬೌದ್ಧಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಬೆಳೆಸಲು ಪಾಲ್ತಾಡಿಯವರು ಪ್ರಯತ್ನ ನಡೆಸಿದ್ದರು. ತುಳು ಭಾಷೆ ಮತ್ತು ಸಂಸ್ಕೃತಿಯಲ್ಲಿ ಗಟ್ಟಿತನವನ್ನು ತಂದು ಕೊಟ್ಟವರು.” ಎಂದರು.
ಗೂನಡ್ಕದ ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ, ನಿವೃತ್ತ ಪ್ರಾಂಶುಪಾಲರಾದ ಡಾ.ರೇವತಿ ನಂದನ್, ಸುರೇಶ್ ಕಣೆಮರಡ್ಕ, ಡಾ. ರಂಗಯ್ಯ, ಅನಂತ ಕೃಷ್ಣ ಚಾಕೋಟೆ, ಪತ್ರಕರ್ತರಾದ ಜಯಪ್ರಕಾಶ್ ಕುಕ್ಕೆಟ್ಟಿ ದುರ್ಗಾಕುಮಾರ್ ನಾಯರ್‌ಕೆರೆ, ಗಂಗಾಧರ ಕಲ್ಲಪಳ್ಳಿ, ಗಿರೀಶ್ ಅಡ್ಪಂಗಾಯ, ಪದ್ಮನಾಭ ಮುಂಡೋಕಜೆ, ದಯಾನಂದ ಕಲ್ನಾರ್, ಶರೀಫ್ ಜಟ್ಟಿಪಳ್ಳ ನುಡಿ ನಮನ ಸಲ್ಲಿಸಿದರು.
Subscribe to Updates
Get the latest creative news from FooBar about art, design and business.
ಸುಳ್ಯ ತಾಲೂಕು ಜಾನಪದ ಕೂಡುಕಟ್ಟು ವತಿಯಿಂದ ಪಾಲ್ತಾಡಿ ರಾಮಕೃಷ್ಣ ಆಚಾರ್ ಇವರಿಗೆ ನುಡಿನಮನ
No Comments1 Min Read
Previous Article‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿದುಷಿ ಶ್ರೇಯಾ ಬಾಲಾಜಿ ಇವರ ನೃತ್ಯ ಪ್ರದರ್ಶನ | ಮೇ 13
Next Article ‘ರಿಕ್ಷಾ ಡೈರಿ’ ಕೃತಿ ಲೋಕಾರ್ಪಣೆ