ಮಂಗಳೂರು : ಮಾಂಡ್ ಸೊಭಾಣ್ ಪ್ರಕಾಶನದ 22ನೇ ಪುಸ್ತಕ ಲೇಖಕ ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ದಿನಾಂಕ 09-05-2024 ರಂದು ಉಳ್ಳಾಲ ಸೋಮೇಶ್ವರದಲ್ಲಿರುವ ಪಶ್ಚಿಮ್ ಟ್ರಸ್ಟ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು.
ಹಿರಿಯ ಲೇಖಕಿ ಮತ್ತು ಪ್ರಕಾಶಕಿ ಗ್ಲೇಡಿಸ್ ರೇಗೊ ಪುಸ್ತಕ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಪಶ್ಚಿಮ್ ಟ್ರಸ್ಟ್ ಇದರ ನಿರ್ದೇಶಕರಾದ ರೋಹಿತ್ ಸಾಂಕ್ತುಸ್ ಶುಭ ಹಾರೈಸಿದರು. ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ, ತೆಲೊಕಾ ಸಂಸ್ಥೆಯ ನಿರ್ದೇಶಕಿ ಕ್ಲಾರಾ ಡಿಕುನ್ಹಾ ಉಪಸ್ಥಿತರಿದ್ದರು. ಲೇಖಕ ರೊನಿ ಅರುಣ್ ಪ್ರಸ್ತಾವನೆಗೈದು ವಿತೊರಿ ಕಾರ್ಕಳ ನಿರೂಪಿಸಿದರು.
ರಿಕ್ಷಾ ಡೈರಿ ‘ದಿರ್ವೆಂ’ ಕೊಂಕಣಿ ಮಾಸಿಕದಲ್ಲಿ ಪ್ರಕಟವಾದ 44 ಲೇಖನಗಳ ಸಂಗ್ರಹ. ಕಲಾವಿದ ವಿಲ್ಸನ್ ಕಯ್ಯಾರ್ ಮುಖಪುಟ ರಚಿಸಿದ್ದಾರೆ. ಈ ಮೊದಲು ʻಬಿಡಾರ್ʼ ಕಥಾಸಂಕಲನ ಹಾಗೂ ʻಥಕಾನಾತ್ಲೋ ಝುಜಾರಿʼ (ಜೀವನ ಚರಿತ್ರೆ) ಪುಸ್ತಕಗಳನ್ನು ರೊನಿ ಅರುಣ್ ಬರೆದಿದ್ದು ʻಥಕಾನಾತ್ಲೋ ಝುಜಾರಿʼ ಪುಸ್ತಕಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಲಭಿಸಿದೆ.
ರಿಕ್ಷಾ ಡೈರಿ ಪುಸ್ತಕದ ರಿಯಾಯಿತಿ ಬೆಲೆ ರೂಪಾಯಿ 100/- ಮಾತ್ರ ಆಗಿದ್ದು, ಪುಸ್ತಕಕ್ಕಾಗಿ ಮಾಂಡ್ ಸೊಭಾಣ್ ಕಛೇರಿ – 8105226626 ಅಥವಾ ಲೇಖಕರನ್ನು ಸಂಪರ್ಕಿಸಬಹುದು.