ಬೆಂಗಳೂರು: 2023ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ‘ಚಾವುಂಡ ರಾಯ ದತ್ತಿ` ಪ್ರಶಸ್ತಿಗೆ ಹಿರಿಯ ಲೇಖಕಿ ಡಾ. ಪ್ರೀತಿ ಶುಭಚಂದ್ರ ಆಯ್ಕೆಯಾಗಿದ್ದಾರೆ. ಶ್ರವಣ ಬೆಳಗೊಳದ ಜಗದ್ಗುರು ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈ ದತ್ತಿಯನ್ನು ಸ್ಥಾಪಿಸಿದ್ದು, ಪ್ರಾಚೀನ ಜೈನ ಸಾಹಿತ್ಯವನ್ನು ಆಧರಿಸಿ ಆಧುನಿಕ ಕನ್ನಡ ಭಾಷೆಯಲ್ಲಿ ರಚಿಸಿದ ಪ್ರಬಂಧ, ಸಂಶೋಧನೆ, ವಿಮರ್ಶೆ, ಕಾದಂಬರಿ, ನಾಟಕ, ಕಥಾ ಸಾಹಿತ್ಯ ಪ್ರಕಾರಗಳ ಲೇಖಕರಿಗೆ ಅಥವಾ ಗ್ರಂಥ ಸಂಪಾದಕರಿಗೆ ಈ ಪ್ರಶಸ್ತಿಯನ್ನು ನೀಡಬೇಕು ಎನ್ನುವುದು ದತ್ತಿಯ ಆಶಯವಾಗಿದೆ.
ವಿಮರ್ಶಕಿಯಾಗಿ, ಲೇಖಕಿಯಾಗಿ, ಮಹಿಳಾವಾದಿಯಾಗಿ ಹೆಸರನ್ನು ಮಾಡಿರುವ ಡಾ. ಪ್ರೀತಿ ಶುಭಚಂದ್ರ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದವರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಮೊತ್ತ ಮೊದಲ ಮಹಿಳಾ ನಿರ್ದೇಶಕಿಯಾದ ಹೆಗ್ಗಳಿಕೆ ಇವರದು. ವಚನ ಸಾಹಿತ್ಯ ಮತ್ತು ಜೈನ ಸಾಹಿತ್ಯ ಇವರ ಪ್ರಧಾನ ಆಸಕ್ತಿಯ ವಿಷಯಗಳು. ‘ಇಪ್ಪತ್ತನೆಯ ಶತಮಾನದ ವಚನ ಸಾಹಿತ್ಯ: ಒಂದು ಅಧ್ಯಯನ’ ಅವರ ಪಿ. ಎಚ್.ಡಿ. ಮಹಾ ಪ್ರಬಂಧ. ಸ್ತ್ರೀವಾದದ ಕುರಿತೂ ಅವರು ಸಾಕಷ್ಟು ಅಧ್ಯಯನವನ್ನು ನಡೆಸಿದ್ದಾರೆ.
ನಾಡೋಜ ಡಾ. ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿಯ ಆಯ್ಕೆ ಸಮಿತಿ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ನೇ. ಭ. ರಾಮಲಿಂಗ ಶೆಟ್ಟಿ ಮತ್ತು ದತ್ತಿದಾನಿಗಳ ಪರವಾಗಿ ಡಾ. ಪದ್ಮರಾಜ ದಂಡಾವತಿಯವರು ಭಾಗವಹಿಸಿದ್ದರು.
ದತ್ತಿ ಪ್ರಶಸ್ತಿ ಪುರಸ್ಕೃತರಾದ ಡಾ.ಪ್ರೀತಿ ಶುಭಚಂದ್ರ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ವಿಶೇಷವಾಗಿ ಅಭಿನಂದಿಸುತ್ತದೆ ಮತ್ತು ಅವರ ಸಾಧನೆಯ ಹಾದಿ ಇನ್ನಷ್ಟು ಉಜ್ವಲವಾಗಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಕನ್ನಡ ಸಾಹಿತ್ಯ ಪರಿಷತ್ತಿನ ‘ಚಾವುಂಡ ರಾಯ ದತ್ತಿ’ಪ್ರಶಸ್ತಿಗೆ ಹಿರಿಯ ಲೇಖಕಿ ಡಾ. ಪ್ರೀತಿ ಶುಭಚಂದ್ರ ಆಯ್ಕೆ
No Comments1 Min Read
Previous Articleಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಶ್ರೇಷ್ಠ ಸಾಧಕ ಪಂಡಿತ್ ಉಪೇಂದ್ರ ಭಟ್ ಅವರ 75 ನೇ ಜನ್ಮ ಸಂವತ್ಸರದ ಸನ್ಮಾನ ಪಂಚಸಪ್ತತಿ ಸಂಪನ್ನ
Next Article ಭರವಸೆಯ ಕಲಾವಿದೆ ತುಷಾರಳ ರಂಗಪ್ರವೇಶ