ಮಂಗಳೂರು : ನಾಟ್ಯಾಲಯ ಉರ್ವ (ರಿ.) ಮಂಗಳೂರು ಇದರ ವತಿಯಿಂದ ಕರ್ನಾಟಕ ಸರಕಾರ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಭರತನಾಟ್ಯ ವಿದ್ವತ್ ಪಠ್ಯ ಪದ್ಧತಿಯಲ್ಲಿ ಪ್ರಧಾನವಾಗಿ ಬರುವ ನಾಯಕಾ – ನಾಯಿಕಾ ಭಾವ ಹಾಗೂ ರಸಭಾವ ವಿಷಯದ ಎರಡು ದಿನಗಳ ಕಾರ್ಯಾಗಾರವು ನಾಟ್ಯಾಲಯ ಸಭಾಂಗಣದಲ್ಲಿ ದಿನಾಂಕ 18-05-2024 ಮತ್ತು 19-05-2024ರಂದು ನಡೆಯಿತು.
ಈ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕಿಯಾಗಿರುವ ಹುಬ್ಬಳ್ಳಿಯ ಡಾ. ಸಹನಾ ಪ್ರದೀಪ ಭಟ್ ಇವರು ಉದ್ಘಾಟಿಸಿದರು. ಸಂಯೋಜಕಿ ಕಲಾಶ್ರೀ ಗುರು ವಿದುಷಿ ಕಮಲಾ ಭಟ್, ವಿದುಷಿ ಪ್ರತಿಮಾ ಶ್ರೀಧರ್, ವಿದುಷಿ ವಿನಯ ರಾವ್, ಸುನೀತಾ ಉಪಾಧ್ಯಾಯ ಬಪ್ಪನಾಡು, ಕಲಾ ಸಂಘಟಕ ಶ್ರೀಧರ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು. ನಗರದ ಸುಮಾರು 35 ವಿದ್ಯಾರ್ಥಿಗಳು ಈ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಂಡರು.