ಕೊಪ್ಪಳ : ಲಡಾಯಿ ಪ್ರಕಾಶನ ಗದಗ, ಕವಿ ಪ್ರಕಾಶನ ಕವಲಕ್ಕಿ, ಚಿತ್ತಾರ ಕಲಾ ಬಳಗ ಧಾರವಾಡ ಮತ್ತು ಮೇ ಸಾಹಿತ್ಯ ಮೇಳ ಬಳಗ ಕೊಪ್ಪಳ ಇವುಗಳ ಸಂಯುಕ್ತ ಆಶ್ರಯದಲ್ಲಿ 10ನೇ ‘ಮೇ ಸಾಹಿತ್ಯ ಮೇಳ’ವು ದಿನಾಂಕ 25-05-2024 ಮತ್ತು 26-05-2024ರಂದು ಕೊಪ್ಪಳದ ಶಿವಶಾಂತವೀರ ಮಂಗಲ ಭವನದಲ್ಲಿ ನಡೆಯಲಿದೆ.
ದಿನಾಂಕ 25-05-2024ರಂದು ಬೆಳಗ್ಗೆ ಗಂಟೆ 10-00ಕ್ಕೆ ಬಳ್ಳಾರಿ ಸಿ. ಚನ್ನಬಸವಣ್ಣ ಇವರು ಬಿ.ಆರ್. ತುಬಾಕಿ ದೇವೇಂದ್ರಪ್ಪ ಡೊಳ್ಳಿನ ಪುಸ್ತಕ ಮಳಿಗೆ ಹಾಗೂ ಏಕಪ್ಪ ಚಿತ್ರಗಾರ ಇವರು ಕಾಳಪ್ಪ ಪತ್ತಾರ ಚಿತ್ರಕಲಾ ಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ 2-00 ಗಂಟೆಗೆ ಗೋಷ್ಠಿ 1ರಲ್ಲಿ ‘ಸಂವಿಧಾನ ಭಾರತ’, ಗೋಷ್ಠಿ 2ರಲ್ಲಿ ‘ವರ್ತಮಾನದಲ್ಲಿ ಧರ್ಮ ರಾಜಕರಣ’ ಹಾಗೂ ಗೋಷ್ಠಿ 3ರಲ್ಲಿ ‘’ಬದುಕು – ಹಾಡು’ ಎಂಬ ವಿಷಯಗಳ ಬಗ್ಗೆ ಸಂವಾದ ನಡೆಯಲಿದೆ. ಸಂಜೆ ಗಂಟೆ 7-00ರಿಂದ ಕವಿಗೋಷ್ಠಿ 1 ನಡೆಯಲಿದೆ.
ದಿನಾಂಕ 26-05-2024ರಂದು ಬೆಳಗ್ಗೆ ಗಂಟೆ 9-00ಕ್ಕೆ ಕವಿಗೋಷ್ಠಿ 2 ಪ್ರಸ್ತುತಗೊಳ್ಳಲಿದೆ. ಗಂಟೆ 11-00ರಿಂದ ಗೋಷ್ಠಿ 4ರಲ್ಲಿ ‘ಚಳವಳಿ ಮತ್ತು ಧರ್ಮ ರಾಜಕಾರಣ’, ಗೋಷ್ಠಿ 5ರಲ್ಲಿ ‘ನಾವು ಮತ್ತು ನಾಳೆ’, ಗೋಷ್ಠಿ 6ರಲ್ಲಿ ‘ಅನುಭವ ಕಥನ’ ಎಂಬ ವಿಷಯಗಳ ಬಗ್ಗೆ ಸಂವಾದ ನಡೆಯಲಿದೆ. ಸಂಜೆ ಗಂಟೆ 4-00ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ತೀರ್ಥಹಳ್ಳಿಯ ಸವಿರಾಜ್ ಆನಂದ್ ಇವರಿಗೆ ‘ವಿಭಾ ಸಾಹಿತ್ಯ ಪ್ರಶಸ್ತಿ’, ಧಾರವಾಡದ ಎಸ್.ಆರ್. ಹಿರೇಮಠ ಇವರಿಗೆ ‘ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ’, ಕೆರೆಕೋಣದ ಮಾಧವಿ ಭಂಡಾರಿ ಇವರಿಗೆ ‘ನವಲಕಲ್ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಕಥಾ ಪ್ರಶಸ್ತಿ’, ಬೆಳಗಾವಿಯ ಶಿವಾಜಿ ಕಾಗಣೇಕರ್ ಇವರಿಗೆ ‘ನಿಂಗಪ್ಪ ಸಂಶಿ ರೈತಚೇತನ ಪ್ರಶಸ್ತಿ’, ಮೈಸೂರಿನ ಜನಾರ್ಧನ ಜನ್ನಿ ಇವರಿಗೆ ‘ಪಂಚಪ್ಪ ಸಮುದಾಯ ಮಾರ್ಗಿ ಪ್ರಶಸ್ತಿ’, ಬೆಂಗಳೂರಿನ ಇಂದೂಧರ ಹೊನ್ನಾಪುರ ಇವರಿಗೆ ಚಂದ್ರಶೇಖರ ಹೊಸಮನಿ ಅಂಬೇಡ್ಕರ್ ಪತ್ರಿಕಾ ಮಾರ್ಗಿ ಪ್ರಶಸ್ತಿ’ ಮತ್ತು ಕೊಪ್ಪಳದ ಹುಚ್ಚಮ್ಮ ಚೌಧರಿಯವರಿಗೆ ‘ಲಕ್ಷ್ಮೀಬಾಯಿ ಕಟ್ಟಿಮನಿ ಸಮಾಜಮುಖಿ ಮಹಿಳೆ ಪ್ರಶಸ್ತಿ’ಗಳನ್ನು ಪ್ರದಾನ ಮಾಡಲಾಗುವುದು.