ಕೊಪ್ಪಳ : ಮೇ ಸಾಹಿತ್ಯ ಮೇಳದ ಬಳಗದವರಾಗಿರುವ ದಾವಣಗೆರೆಯ ಉಪಪ್ರಾಚಾರ್ಯರಾದ ಕಲ್ಪಿತರಾಣಿ ಇವರು ತಮ್ಮ ತಂದೆಯ ಹೆಸರಿನಲ್ಲಿ ಪ್ರಯೋಜಿಸಿರುವ ಪಂಚಪ್ಪ ಸಮುದಾಯ ಮಾರ್ಗಿ ಪ್ರಶಸ್ತಿಗೆ ಮೈಸೂರಿನ ಜನಾರ್ದನ ಜನ್ನಿ ಆಯ್ಕೆಯಾಗಿದ್ದಾರೆ. ಮೇ 25 ಹಾಗೂ 26ರಂದು ಕೂಪ್ಪಳದಲ್ಲಿ ನಡೆಯಲಿರುವ ಮೇ ಸಾಹಿತ್ಯ ಮೇಳದ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಪ್ರಶಸ್ತಿಯು ಹತ್ತು ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಈ ಪ್ರಶಸ್ತಿ ಕಳೆದ ವರ್ಷ ರಂಗಕರ್ಮಿ ಬಸವಲಿಂಗಯ್ಯ ಅವರಿಗೆ ಸಂದಾಯವಾಗಿತ್ತು.
ಸಮುದಾಯದ ಗೌರವಾಧ್ಯಕ್ಷರಾಗಿ ಹಾಗೂ ಮೈಸೂರು ರಂಗಾಯಣದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಮೈಸೂರಿನ ಜನಾರ್ದನ ಜನ್ನಿ ತಮ್ಮ ಕಂಚಿನ ಕಂಠದ ಕ್ರಾಂತಿಗೀತೆಗಳಿಂದ ಕರ್ನಾಟಕದ ಜನಚಳುವಳಿಗೆ ದೊಡ್ಡ ಶಕ್ತಿ ತುಂಬಿದವರು ಹಾಗೂ ಸಾಹಿತ್ಯದಷ್ಟೇ ಹಾಡುಗಾರಿಕೆಗೂ ಘನತೆಯನ್ನು ತಂದುಕೊಟ್ಟವರು ಮತ್ತು ಹೃದಯ ತುಂಬಿ ಹಾಡುತ್ತ ರಾಜ್ಯದ ಜನಗಳಲ್ಲಿ ಅರಿವಿನ ಎಚ್ಚರ ಮೂಡಿಸಿದವರು. ಎಂಬತ್ತು ತೊಂಬತ್ತರ ದಶಕಗಳಲ್ಲಿ ಎಲ್ಲಿಯೇ ಚಳವಳಿಗಳು ನಡೆದರೂ ಅಲ್ಲಿ ಜನ್ನಿ ಇರಲೇಬೇಕು ಎಂಬಂಥ ವಾತಾವರಣ ಇತ್ತು. ಈ ಮೂಲಕ ನೂರಾರು ಕ್ರಾಂತಿಗೀತೆಗಳ ಹಾಡುಗಾರರು ಸೃಷ್ಟಿಯಾದರು. ಚಳುವಳಿಗಳು ಗರಿಗಟ್ಟಿದವು. ಹಲವು ಎದೆಗಳಲ್ಲಿ ಈ ಹಾಡುಗಳು ನಾನಾತರದ ಅಲೆಗಳನ್ನು ಎಬ್ಬಿಸಿದ್ದಂತೂ ನಿಜವೇ.
Subscribe to Updates
Get the latest creative news from FooBar about art, design and business.
Previous Articleಬಂಡಾಯ ಕವಿ ಹಾಗೂ ವಿಮರ್ಶಕ ಆನಂದ ಲಕ್ಕೂರು ನಿಧನ
Next Article ಪುಸ್ತಕ ವಿಮರ್ಶೆ | ಅನುಪಮಾ ರಾಘವೇಂದ್ರ ಅವರ ‘ಹತ್ತಗುಳು’