ಮಂಗಳೂರು : ಸಂಗೀತ ವಿದ್ಯಾರ್ಥಿಗಳಿಗಾಗಿ ಮತ್ತು ಸಂಗೀತಾಸಕ್ತರಿಗಾಗಿ ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟಿನ ವತಿಯಿಂದ ‘ದಾಸ ವಂದನ’ ಸಂಗೀತ ಕಾರ್ಯಾಗಾರವನ್ನು ದಿನಾಂಕ 25-05-2024ರಂದು ಸಂಜೆ 4 ಗಂಟೆಗೆ ಮಗಳೂರಿನ ವಿ. ಟಿ. ರಸ್ತೆಯಲ್ಲಿರುವ ಶ್ರೀ ಕೃಷ್ಣ ಮಂದಿರದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ದಾಸಪರಂಪರೆಯಲ್ಲಿ ಬಂದ ಅಪರೂಪದ ಹಾಡುಗಳ ಸ್ವರಸಂಯೋಜನೆ ಮಾಡುವ ಮತ್ತು ಕಲಿಯುವ ಅವಕಾಶವಿದ್ದು, ಈ ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರಾದ ಗುರುರಾಜ ಮಾರ್ಪಳ್ಳಿ ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ಮಾಡಲಿದ್ದಾರೆ. ಆಸಕ್ತರು ಉಚಿತವಾಗಿ ಹೆಸರು ನೋಂದಾಯಿಸಿಕೊಳ್ಳಲು 9886914748 ಸಂಪರ್ಕಿಸಬಹುದು.