ಬೆಂಗಳೂರು : ಬೆಂಗಳೂರಿನ ಯಕ್ಷದೇಗುಲ ಮಕ್ಕಳ ತಂಡ ಆಯೋಜಿಸುವ ‘ಕನ್ನಡ ಪರ್ವ’ ಕಾರ್ಯಕ್ರಮದಲ್ಲಿ ಪ್ರಿಯಾಂಕ ಕೆ. ಮೋಹನ್ ನಿರ್ದೇಶನದಲ್ಲಿ ‘ಅಭಿಮನ್ಯು ಕಾಳಗ’ ಯಕ್ಷಗಾನ ಪ್ರದರ್ಶನವು ದಿನಾಂಕ 25-05-2024ರಂದು ಬೆಂಗಳೂರು ಮೆಡಿಕಲ್ ಕಾಲೇಜಿನ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ಲಂಬೋದರ ಹೆಗಡೆ, ಮದ್ದಲೆ ವಾದನದಲ್ಲಿ ಸಂಪತ್ ಕುಮಾರ್ ಹಾಗೂ ಚಂಡೆವಾದನದಲ್ಲಿ ಪನ್ನಗ ಮಯ್ಯ, ಮುಮ್ಮೇಳದಲ್ಲಿ ಧರ್ಮರಾಯನಾಗಿ ಸರಸ್ವತಿ, ಅಭಿಮನ್ಯುವಾಗಿ ತೇಜಸ್, ಸುಭದ್ರೆಯಾಗಿ ಅನೀಶ, ಸೈಂಧವನಾಗಿ ಮಹೇಶ್ವರ, ಕೌರವನಾಗಿ ಧನ್ಯ, ದ್ರೋಣನಾಗಿ ಶಾಶ್ವತ್, ಕರ್ಣನಾಗಿ ಸುಹಾಸ್, ಶಲ್ಯನಾಗಿ ಕ್ರಿಶ, ದುಶ್ಯಾಸನನಾಗಿ ಅಹನ ಹಾಗೂ ಎರಡನೇ ಅಭಿಮನ್ಯುವಿನ ಪಾತ್ರದಲ್ಲಿ ಅನಿಕ ಭಾಗವಹಿಸಿದರು. ವರ್ಣಾಲಂಕಾರದಲ್ಲಿ ಬಾಲಕೃಷ್ಣ ಭಟ್, ಸುದರ್ಶನ ಉರಾಳ, ಉದಯ ಬೋವಿ ಮತ್ತು ವಿಶ್ವನಾಥ ಉರಾಳ ಸಹಕಾರ ನೀಡಿದರು.
ಇದೇ ಸಂಧರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರು ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹೆರಂಜಾಲು ಸುಬ್ಬಣ್ಣ ಗಾಣಿಗರಿಗೆ ಕನ್ನಡ ಪರ್ವ ಕಾರ್ಯಕ್ರಮದ ನೆನಪಿನ ಕಾಣಿಕೆ ನೀಡಲಾಯಿತು.


