ಮಡಿಕೇರಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಕೊಡಗು ಇದರ ವತಿಯಿಂದ ಪರಿಸರ ಸಂರಕ್ಷಣೆ ಕುರಿತು ಕೊಡಗು ಜಿಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಯು ದಿನಾಂಕ 01-06-2024ರಂದು ಮಡಿಕೇರಿಯ ಎ. ಎಲ್. ಜಿ. ಕ್ರೆಸೆಂಟ್ ಶಾಲೆಯಲ್ಲಿ ಬೆಳಗ್ಗೆ ಘಂಟೆ 9.30ರಿಂದ ನಡೆಯಲಿದೆ.
ಸ್ಪರ್ಧೆಗೆ ಡ್ರಾಯಿಂಗ್ ಶೀಟ್ ಮಾತ್ರ ನೀಡಲಾಗುವುದು. ಚಿತ್ರ ಕಲೆಗೆ ಬೇಕಾಗುವ ಬಣ್ಣ ಇನ್ನಿತರೆ ವಸ್ತುಗಳನ್ನು ವಿದ್ಯಾರ್ಥಿಗಳೇ ತರಬೇಕು.ಈ ವರ್ಷದ ಘೋಷ ವಾಕ್ಯವು ‘ಭೂ ಮರುಸ್ಥಾಪನೆ’, ‘ಮರುಭೂಮೀಕರಣ’ ಹಾಗು ‘ಬರ ತಡೆಯುವಿಕೆ’ ಆಗಿರುತ್ತದೆ. ಆಸಕ್ತಿಯುಳ್ಳವರು ಸ್ಥಳದಲ್ಲಿಯೇ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಎಂ. ಜಿ. ರಘುರಾಮ್ ಪರಿಸರ ಅಧಿಕಾರಿಗಳು – 9845026348, ಆಸ್ಟಿನ್ ಕೆ. ಎ. ಯೋಜನಾ ಸಹಾಯಕರು – 7760738447 ( 08272- 221855) ಹಾಗೂ ಸ್ಥಳೀಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿ.ಇ.ಓ) ಇವರನ್ನು ಸಂಪರ್ಕಿಸಬಹುದು ಎಂದು ಕೊಡಗು ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಅವರು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Previous Article‘ಸರಯೂ ಸಪ್ತಾಹ’ದಲ್ಲಿ ‘ಶೂರ್ಪನಖಾ ವಧೆ’ ಯಕ್ಷಗಾನ ಬಯಲಾಟ