ಮುಡಿಪು : ಬೆಂಗಳೂರಿನ ಕಥಾಬಿಂದು ಪ್ರಕಾಶನದ ‘ಸಾಹಿತ್ಯ ಸಂಭ್ರಮ 2024’ ಕಾರ್ಯಕ್ರಮವು ಮಂಗಳೂರಿನ ಶ್ರೀ ಭಾರತೀ ಶಾಲೆ ಮುಡಿಪು ಇದರ ಸಭಾಂಗಣದಲ್ಲಿ ದಿನಾಂಕ 26-05-2024ರಂದು ನಡೆಯಿತು.
ಪಿ.ವಿ. ಪ್ರದೀಪ್ ಕುಮಾರ್ ಅವರ ಸಾರಥ್ಯದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮದರ್ಶಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಶ್ರೀ ಹರಿಕೃಷ್ಣ ಪುನರೂರು ಅವರು ವಹಿಸಿದ್ದರು. ಯುಗಪುರುಷ ಮಾಸ ಪತ್ರಿಕೆಯ ಸಂಪಾದಕರಾದ ಶ್ರೀ ಭುವನಾಭಿರಾಮ ಉಡುಪ ಉದ್ಘಾಟಿಸಿದರು. ಹಿರಿಯ ಸಾಹಿತಿ ಶ್ರೀಮತಿ ಬಿ. ಸತ್ಯವತಿ ಎಸ್. ಭಟ್ ಐದು ಪುಸ್ತಕಗಳ ಲೋಕಾರ್ಪಣೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಗೋವಿಂದದಾಸ ಕಾಲೇಜು ಸುರತ್ಕಲ್ ಇಲ್ಲಿನ ಪ್ರಾಂಶುಪಾಲರಾದ ಪ್ರೊಫೆಸರ್ ಪಿ. ಕೃಷ್ಣಮೂರ್ತಿ, ಲೆಕ್ಕಪತ್ರ ಪರಿಶೋಧಕ ಎನ್. ಸುಬ್ರಾಯ ಭಟ್ ಮಂಗಳೂರು, ಪತ್ರಕರ್ತ ಶ್ರೀ ಜಯಾನಂದ ಪೆರಾಜೆ, ಶ್ರೀ ಭಾರತಿ ಶಾಲೆಯ ಸಂಚಾಲಕ ಕೊಡಕ್ಕಲ್ಲು ಸುಬ್ರಮಣ್ಯ ಭಟ್, ಸಿಂಡಿಕೇಟ್ ಬ್ಯಾಂಕಿನ ಮಾಜಿ ವ್ಯವಸ್ಥಾಪಕರಾದ ಮೈಸೂರಿನ ಅನಂತ ಎಂ. ತಮ್ಮಣ್ಕರ್, ಸಾಹಿತ್ಯ ಪ್ರವರ್ತಕ ಡಾ. ಕೊಳ್ಚಪ್ಪೆ ಗೋವಿಂದ ಭಟ್, ನಾಟಕ ಭಾರ್ಗವ ಮತ್ತು ನಿವೃತ್ತ ಪ್ರಾಧ್ಯಾಪಕರಾದ ಕೆಂಪರಾಜು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀಮತಿ ವಿದ್ಯಾ ರಕ್ಷಿತ್, ಅಧ್ಯಾಪಕಿ ಶಾಂತ ಪುತ್ತೂರು, ಕೋರ್ಟ್ ಉದ್ಯೋಗಿ ಪುಷ್ಪ ಪ್ರಸಾದ್ ಮತ್ತು ಕಲಾವಿದೆ ಮತ್ತು ಶಿಕ್ಷಕಿಯಾದ ಪ್ರಮೀಳಾ ರಾಜ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಖ್ಯಾತ ಸಾಹಿತಿ ಮತ್ತು ವಿದ್ವಾಂಸರಾದ ವಿ.ಬಿ. ಕುಳಮರ್ವ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿಯು ನಡೆಯಿತು. ಗೋಷ್ಠಿಯಲ್ಲಿ ಕವಿಗಳಾದ ಗುಣಾಜೆ ರಾಮಚಂದ್ರ ಭಟ್, ಪಂಕಜ ರಾಮ ಭಟ್, ಸತ್ಯವತಿ ಭಟ್ ಕೊಳಚಪ್ಪು, ಪುಷ್ಪ ಪ್ರಸಾದ್, ಎನ್. ಸುಬ್ರಾಯ ಭಟ್, ಗೋಪಾಲಕೃಷ್ಣ ಶಾಸ್ತ್ರಿ, ಸೌಮ್ಯ ಗೋಪಾಲ್, ಪರಿಮಳಾ ಮಹೇಶ್ ರಾವ್, ಶೈಲಜಾ ಕೇಕುಣಾಜೆ, ವಿನುತಾ ರಜತ್ ಗೌಡ, ಭಾರತಿ ಸುರತ್ಕಲ್, ಭಾರತಿ ರಘು, ವಿಜಯ ಕಾನ, ಕಾನ ಸುಂದರ ಭಟ್, ಸೌಮ್ಯ ಶೆಟ್ಟಿ, ಅಪೂರ್ವ ಕಾರಂತ , ವಿದ್ಯಾ ಅಡೂರ್ ,ವಿದ್ಯಾ ಬೇಕಲ್, ಸುನೀತಾ ಪ್ರದೀಪ್ ಕುಮಾರ್ ಮತ್ತು ಶಾಂತ ಪುತ್ತೂರು ಕವನವಾಚನ ಮಾಡಿದರು. ವಿದ್ಯಾಶ್ರೀ ಅಡೂರ್ ಮತ್ತು ಅಪೂರ್ವ ಕಾರಂತ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.