ಮಂಗಳೂರು : ಮಂಗಳೂರಿನ ಕೋಡಿಕಲ್ಲಿನ ಸರಯೂ ಮಕ್ಕಳ ಮೇಳದ ‘ಸರಯೂ ಸಪ್ತಾಹ-2024’ ಸಾಧಕ ಸನ್ಮಾನ, ಬಯಲಾಟಗಳು ಮತ್ತು ಮಹಿಳಾ ತಾಳ ಮದ್ದಳೆ ಕಾರ್ಯಕ್ರಮದ ಆರನೇ ದಿನದ ಕಾರ್ಯಕ್ರಮವು ದಿನಾಂಕ 30-05-2024ರಂದು ಮಂಗಳೂರಿನ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು.
ಕಾರ್ಯಕ್ರಯಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಸಂಸ್ಕಾರ ಭಾರತಿಯ ರಾಜ್ಯಾಧ್ಯಕ್ಷ ಹಾಗೂ ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ ಮಾತನಾಡಿ “ನಮ್ಮ ದೇಶೀಯ ಕಲೆಗಳೆಲ್ಲವೂ ವಿಶ್ವಖ್ಯಾತಿಯನ್ನು ಪಡೆದಿವೆ. ಯಕ್ಷಗಾನ, ಭಾರತನಾಟ್ಯ ಯಾವುದೇ ಇರಲಿ ಜಗತ್ತೇ ತಿರುಗಿ ನೋಡುವಂತೆ ಮಾಡಿದೆ ಎಂಬುದರಲ್ಲಿ ನಮಗೆ ಹೆಮ್ಮೆ ಇದೆ. ಯಾರನ್ನೂ ಕಲೆ ಬಿಟ್ಟಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬನೂ ಪ್ರತಿಭಾನ್ವಿತನಾಗಿರುತ್ತಾನೆ. ಅವಕಾಶ ಹಾಗೂ ಸಂದರ್ಭ ಒದಗಿದಾಗ ಆತನಲ್ಲಿನ ಸುಪ್ತ ಪ್ರತಿಭೆ ಅನಾವರಣಗೊಳಿಸುತ್ತದೆ. ಇಂತಹಾ ಕಲಾರಾಧನೆಯನ್ನು ಯಾರು ಮಾಡುತ್ತಾರೋ ಅವರನ್ನು ಬೆಂಬಲಿಸಿ ಆಧರಿಸುವುದರ ಅಗತ್ಯ ಇದೆ.” ಎಂದು ಹೇಳಿದರು.ಇದೇ ಸಂದರ್ಭದಲ್ಲಿ ವೇಷಧಾರಿ ಹಾಗೂ ಪ್ರಸಾದನ ಕಲಾವಿದರಾದ ಕೋಳ್ಯೂರು ಪ್ರಶಾಂತ್ ಇವರನ್ನು ಗೌರವಿಸಲಾಯಿತು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ್ ಕಲ್ಕೂರ ಹಾಗೂ ಚಂದ್ರಶೇಖರ ಶೆಟ್ಟಿ ಸನ್ಮಾನ ನೆರವೇರಿಸಿದರು.ಶರತ್ ಶೆಟ್ಟಿ ಪಡುಪಳ್ಳಿ, ಸಿ.ಎಸ್.ಭಂಡಾರಿ, ಸಂಜಯ ಕುಮಾರ್ ಶೆಟ್ಟಿ, ಗೋಣಿಬೀಡು, ಬೆಟ್ಟಂಪಾಡಿ ಸುಂದರ ಶೆಟ್ಟಿ, ಗಣೇಶಪುರ ಗಿರೀಶ್ ನಾವಡ, ಅಕ್ಷಯ ಸುವರ್ಣ,ಪ್ರತೀಕ್ ರಾಪ್, ಕೃತಿ, ನಿತ್ಯಶ್ರೀ, ಮಾ. ದೃಶಾಲ್, ಹಾಗೂ ಸರಯೂ ಕಲಾವಿದರು ಉಪಸ್ಥಿತರಿದ್ದರು. ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು.ಸಭಾಕಾರ್ಯಕ್ರಮದ ಬಳಿಕ ಹರೀಶ್ ಶೆಟ್ಟಿ ವಿರಚಿತ ಪ್ರಸಿದ್ಧ ತುಳು ಪ್ರಸಂಗ ‘ತುಳುನಾಡ ಬಲಿಯೇಂದ್ರೆ’ ಪ್ರದರ್ಶನಗೊಂಡಿತು.