ಬೈಲಹೊಂಗಲ : ಬೈಲಹೊಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ‘ಕರ್ನಾಟಕ ಸಂಭ್ರಮ 50’ ಹಾಗೂ ‘ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ’ ಘೋಷಣೆ ನಿಮಿತ್ತವಾಗಿ ಜುಲೈ ತಿಂಗಳಿನಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಏರ್ಪಡಿಸಲು ನಿರ್ಧರಿಸಲಾಗಿದೆ.
ಈ ನಿಮಿತ್ತ ಉದಯೋನ್ಮುಖ ಹಾಗೂ ಪ್ರತಿಭಾವಂತ ಕವಿಗಳಿಂದ ಕನ್ನಡ ನಾಡು, ನುಡಿ, ಇತಿಹಾಸ, ಸಂಸ್ಕೃತಿ, ಪರಂಪರೆ, ಬಸವಣ್ಣನವರು, ಶರಣ ಸಂಸ್ಕೃತಿ, ವಚನ ಸಾಹಿತ್ಯ, ಶರಣರ ಬದುಕು – ಬರಹ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಕವನಗಳನ್ನು ಆಹ್ವಾನಿಸಲಾಗಿದೆ. ಕವನ 30 ಸಾಲುಗಳಿಗೆ ಮಿಕ್ಕದಂತೆ ಡಿಟಿಪಿ ಮಾಡಿಸಿ ಸ್ವವಿಳಾಸ, ಕಿರುಪರಿಚಯ, ಭಾವಚಿತ್ರ, ವಾಟ್ಸಪ್ ಮೊಬೈಲ್ ಸಂಖ್ಯೆಯೊಂದಿಗೆ ದಿನಾಂಕ 30-06-2024ರ ಒಳಗಾಗಿ ಬೈಲಹೊಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಆರ್. ಠಕ್ಕಾಯಿ ಇವರ ಇಮೇಲ್ [email protected] ವಿಳಾಸಕ್ಕೆ ಕಳಿಸುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9844491490/9945326808/8861325272/9535653166 ಸಂಪರ್ಕಿಸಬೇಕೆಂದು ಬೈಲಹೊಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ. ಪ್ರಕಾಶ ಮೆಳವಂಕಿ, ಶ್ರೀಮತಿ ಮಂಜುಳಾ ಶೆಟ್ಟರ, ಗೌರವ ಕೋಶಾಧ್ಯಕ್ಷರಾದ ಮಹೇಶ ಕೋಟಗಿ ತಿಳಿಸಿದ್ದಾರೆ.