17 ಫೆಬ್ರವರಿ 2023, ಬೈಂದೂರು: 4 ದಶಕಗಳಿಗಿಂತಲೂ ಮಿಗಿಲಾಗಿ ಕಲಾ ಸೇವೇಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಲಾವಣ್ಯ ರಿ. ಬೈಂದೂರು ಊರಿನ ಪ್ರಾತಿನಿಧಿಕ ಕಲಾ ಸಂಸ್ಥೆಯಾಗಿ ರೂಪುಗೊಂಡಿದೆ. ಸದಾ ಲವಲವಿಕೆಯಿಂದಲೇ ತನ್ನನ್ನು ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆ ಈ ವರ್ಷವೂ ಕೂಡಾ ಯಕ್ಷಗಾನ ಹಾಗೂ ನಾಟಕೋತ್ಸವದ ರಂಗ ಪಂಚಮಿ 2023 ಆಯೋಜಿಸಿದೆ. ಫೆಬ್ರವರಿ 20ರಿಂದ 24ರವರೆಗೆ ನಡೆಯಲಿರುವ ಈ ಕಲಾ ಹಬ್ಬದಲ್ಲಿ ಎಲ್ಲಾ ಕಲಾವಿದರು ಭಾಗವಹಿಸಿಹಬೇಕಾಗಿ ಆಯೋಜಕರು ವಿನಂತಿಸಿದ್ದಾರೆ.
ಫೆಬ್ರವರಿ 20, ಸೋಮವಾರ
ನಾಟಕ: ನಾಯಿ ಕಳೆದಿದೆ
ತಂಡ: ಲಾವಣ್ಯ (ರಿ.) ಬೈಂದೂರು
ರಚನೆ/ನಿರ್ದೇಶನ: ಶ್ರೀ ರಾಜೇಂದ್ರ ಕಾರಂತ, ಬೆಂಗಳೂರು
ಪ್ರಾಯೋಜಕರು: ಶ್ರೀ ಯು. ಬಿ. ಎಸ್. ಚಾರಿಟೇಬಲ್ ಟ್ರಸ್ಟ್ (ರಿ.) ಧಾರವಾಡ
ಬೆಂಗಳೂರಿನಲ್ಲಿದ್ದುಕೊಂಡೇ ಕಾರ್ಯದೊತ್ತಡದ ನೆಪ ನೀಡಿ ಪ್ರತ್ಯೇಕವಾಗಿ ವಾಸಿಸುವ, ತಂದೆ-ತಾಯಿಯರ ಭಾವನೆಗಳನ್ನು ಅರ್ಥಮಾಡಿಕೊಳ್ಳಲಾಗದ, ವಾರಕ್ಕೊಮ್ಮೆ ಮನೆಗೆ ಬಂದಾಗಲೂ ಲ್ಯಾಪ್‌ಟಾಪ್, ಮೊಬೈಲ್‌ನಲ್ಲಿ ಮುಳುಗುವ ಮಕ್ಕಳು, ಬಾಳಿನ ಇಳಿ ಹೊತ್ತಿನಲ್ಲಿರುವ ವೃದ್ಧ ತಂದೆ-ತಾಯಿಯರಲ್ಲಿ ಉಂಟು ಮಾಡುವ ತಲ್ಲಣಗಳು ವೀಕ್ಷಕರ ಮನ ಕರಗುವಂತೆ ಮಾಡುತ್ತವೆ. ಅಮೇರಿಕಾದ ಭವ್ಯ ಬದುಕಿನ ಆಸೆ ಹೊತ್ತು ಅಲ್ಲಿಗೆ ತೆರಳಿದ ಮಗ ಸೊಸೆ ವೃದ್ಯಾಪ್ಯದಲ್ಲಿ ಆಸರೆಯಾಗಲಿಲ್ಲವಲ್ಲ ಎಂಬ ವೇದನೆ ಒಂದೆಡೆಯಾದರೆ, ಇನ್ನೊಂದೆಡೆ ಅವರು ಬಿಟ್ಟು ಹೋದ ನೆಮ್ಮದಿಯ ಬದುಕಿಗೆ ಮುಳ್ಳಾಗಿ ಕಾಡುವ ನಾಯಿ, ನಾಯಿಯ ಬೊಗಳುವಿಕೆ ವೃದ್ಧರ ಬದುಕನ್ನು ನರಕ ಸದೃಶವಾಗಿಸುತ್ತದೆ. ಫೋನಿನಲ್ಲೂ ತಮಗಿಂತ ನಾಯಿ ಕುರಿತಾಗಿ ತೋರುವ ಕಾಳಜಿ, ಕೇಳುವ ಪ್ರಶ್ನೆಗಳು ಅವರ ಕನಸುಗಳನ್ನು ನುಚ್ಚುನೂರಾಗಿಸುತ್ತವೆ.
ಫೆಬ್ರವರಿ 21, ಮಂಗಳವಾರ
ನಾಟಕ: ಬೀಚಿ ರಸಾಯನ
ತಂಡ: ಡ್ರಾಮಾಟಿಕ್ಸ್ ಬೆಂಗಳೂರು
ರಚನೆ/ನಿರ್ದೇಶನ: ಎನ್.ಸಿ.ಮಹೇಶ್
ಪ್ರಾಯೋಜಕರು: ಶ್ರೀ ಎಚ್. ಜಯಶೀಲ ಎನ್. ಶೆಟ್ಟಿ, ಪ್ರಥಮ ದರ್ಜೆ ಗುತ್ತಿಗೆದಾರರು, ಜೆ.ಎನ್.ಎಸ್. ಕನ್ಸ್ಟ್ರಕ್ಷನ್, ಘಟಪ್ರಭಾ
ಬದುಕಿನ ನಿತ್ಯ ಬಳಕೆಯಲ್ಲಿ ಜಡ್ಡುಗಟ್ಟಿಸಿಕೊಂಡ ಎಷ್ಟೊ ಪದಗಳಿಗೆ ಬೀಚಿಯವರು ಹೊಸ ಅರ್ಥ ದಕ್ಕಿಸಿಕೊಟ್ಟು ಒಂದು ಪದಕೋಶ ಸಿದ್ಧಮಾಡಿದರು. ಅದೇ ‘ತಿಮ್ಮ ರಸಾಯನ’ ಕೃತಿ. ಇಲ್ಲಿಂದ ಪದಗಳು ಮತ್ತು ಅವುಗಳಿರುವ ಹೊಸ ಅರ್ಥಗಳನ್ನ ಹೆಕ್ಕಿ ಪ್ರಸ್ತುತ ನಾಟಕವನ್ನ ಹೆಣೆಯಲಾಗಿದೆ. ಕಥಾವಸ್ತು ಸ್ವತಂತ್ರ, ಆದರೆ ಅದರ ಒಳಗಿನ ಪದ ಮತ್ತು ಅರ್ಥಗಳ ಜೀವಧಾತು ಬೀಚಿ ಅವರದು. ಭಕ್ತಿ ನಿಜವಾದದ್ದಾರೆ ಸಾಲದು, ಅದು ಜಾತಿ ಸೋಂಕಿನಿಂದಲೂ ಮುಕ್ತವಾಗಿರಬೇಕು ಎಂಬುದನ್ನು ನಾಟಕೀಯವಾಗಿ ಹೇಳುವ ನಾಟಕ ಇದು. ಇಲ್ಲಿ ಭಕ್ತಿಯ ಪ್ರತೀಕವಾಗಿ ‘ಜಾನಕಮ್ಮ’ ಇದ್ದಾರೆ. ಹಾಗೇ ಎಲ್ಲಿ ಭಕ್ತಿಯ ಪರಾಕಾಷ್ಠತೆ ಇರುತ್ತದೆಯೋ ಅಲ್ಲಿ ವಸ್ತುನಿಷ್ಠ ಗ್ರಹಿಕೆಯೂ ಇರುತ್ತದೆ. ಗುರುಮೂರ್ತಿ ಈ ಪಾತ್ರದ ಸಂಕೇತ. ಈ ಭಕ್ತಿ ಮತ್ತು ವಸ್ತುನಿಷ್ಠತೆಗೆ ತನ್ನದೇ ಆದ ಗುಂಗು ಇರುತ್ತದೆ. ಅದೇ ಇಲ್ಲಿ ‘ ಶ್ರೀಧರ’ನ ಪಾತ್ರವಾಗಿ ಮೈದಾಳಿದೆ. ಈ ಗುಂಗು ತನ್ನ ಅಪ್ಪ ಅಮ್ಮನೆಂಬ ಭಕ್ತಿ ಮತ್ತು ವಸ್ತುನಿಷ್ಠತೆಯನ್ನ ಹೇಗೆ ತಣಿಸುತ್ತದೆ ಎಂಬುದನ್ನು ಈ ನಾಟಕ ಕಟ್ಟಿಕೊಡುತ್ತದೆ. ಸಂಕೇತವಾಗಿಯೂ ನೋಡಬಹುದು ಹಾಗೂ ಕೇವಲ ಪಾತ್ರವಾಗಿಯೂ ಗ್ರಹಿಸಬಹುದು. ಎರಡೂ ಬಗೆ ಬೆರೆತಿರುವುದರಿಂದ ಇದು ‘ ರಸಾಯನ’. ಮತ್ತು ಬೀಚಿಯವರಿಂದ ಪದಾರ್ಥಗಳನ್ನ ಎರವಲು ಪಡೆದಿರುವುದರಿಂದ ಇದು ‘ಬೀಚಿ ರಸಾಯನ’
ಫೆಬ್ರವರಿ 22, ಬುಧವಾರ
ನಾಟಕ : ಬರ್ಬರಿಕಾ
ತಂಡ : ಶಿಕ್ಷಕರ ಬಳಗ ಉಡುಪಿ ಇವರಿಂದ
ರಚನೆ: ಶಶಿರಾಜ್ ರಾವ್ ಕಾವೂರು
ನಿರ್ದೇಶನ: ರಾಮ್ ಶೆಟ್ಟಿ ಹಾರಾಡಿ
ಪ್ರಾಯೋಜಕರು: ಶ್ರೀ ಟಿ. ವೈ. ರಾಘವೇಂದ್ರ, ಸಂಸದರು, ಶಿವಮೊಗ್ಗ ಲೋಕಸಭಾ ಕ್ಷೇತ್ರ
ಘಟೋತ್ಕಚನ ಮಗ,ಭೀಮಸೇನನ ಮೊಮ್ಮಗ ಬರ್ಬರೀಕ (ಊರ್ಧ್ವಕೇಶರ) ಅಮ್ಮನ ಮಾತಿನಂತೆ ಸದಾ ದುರ್ಬಲರ ಪಕ್ಷಪಾತಿ,11 ಅಕ್ಷೋಹಿಣಿ ಸೈನ್ಯ ಹೊಂದಿದ ಕೌರವರು ಸಬಲರು 7 ಅಕ್ಷೋಹಿಣಿ ಸೈನ್ಯಹೊಂದಿದ ಪಾಂಡವರು ದುರ್ಬಲರು, ಒಂದು ಬಾಣಕ್ಕೆ ಇಡೀ ಕೌರವಸೈನ್ಯ ನಾಶ ಈಗ ಕೌರವರು ದುರ್ಬಲರಾಗುತ್ತಾರೆ,ಆಗ ಕೌರವರ ಕಡೆ ಬರ್ಬರೀಕ,ಹೀಗೆ ಮಾಡುತ್ತಾ ಇಡೀ ರಣರಂಗವೇ ನಾಶವಾಗುತ್ತದೆ ಇದನ್ನು ಮನಗಂಡು ಶ್ರೀಕೃಷ್ಣ ಯುದ್ಧ ಶುರುವಾಗುವ ಮೊದಲೇ ಅವನಿಗೆ ಮುಕ್ತಿಯನ್ನು ದಯಪಾಲಿಸಲು ಅವನ ಶಿರವನ್ನು ಸುದರ್ಶನ ಚಕ್ರದಿಂದ ಬೇರ್ಪಡಿಸುತ್ತಾನೆ,ಆದರೆ ಬರ್ಬರೀಕನ ಶಿರವು ಇಡೀ ಕುರುಕ್ಷೇತ್ರ ಯುದ್ಧವನ್ನು ವೀಕ್ಷಿಸಲು ಅನುಮತಿ ಕೊಡುತ್ತಾನೆ
ಫೆಬ್ರವರಿ 23, ಗುರುವಾರ
ಯಕ್ಷಗಾನ: ವರಾನ್ವೇಶಣೆ
ತಂಡ: ಲಾವಣ್ಯದ ಮಹಿಳಾ ಯಕ್ಷಗಾನ ಬಳಗ
ಸಂಯೋಜನೆ/ನಿರ್ದೇಶನ: ಗಣೇಶ್ ದೇವಾಡಿಗ, ಉಪ್ಪುಂದ
ಪ್ರಾಯೋಜಕರು: ಶ್ರೀ ಜಗದೀಶ್ ಮಯ್ಯ, ಉಪಾಧ್ಯಕ್ಷರು, ನ್ಯೂ ಫೋಲ್ಡ್ ಡಿಜಿಟಲ್ ಬೆಂಗಳೂರು, ಅಧ್ಯಕ್ಷರು, ಯುಥ್ ಫಾರ್ ಸೇವಾ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಸಂಸ್ಥೆ
ಪಾಂಡ್ಯ ದೇಶದ ದೊರೆಯಾದ ಮಲೆಯಧ್ವಜನ ಮಗಳು ಮೀನಾಕ್ಷಿ ಮದುವೆಯಾಗುವ ಆಸೆಯಿಂದ ವರಾನ್ವೇಷಣೆಯ ಉದ್ದೇಶದಿಂದ ದಿಗ್ವಿಜಯವನ್ನು ಕೈಗೊಂಡು ಸಾಗುತ್ತಾಳೆ. ತನ್ನ ಸಂಬಂಧಿಯಾದ ಅಜ್ಜ ಸೂರಸೇನನನ್ನು ಕಾಣುತ್ತಾಳೆ. ಪರಿಚಯವಾಗುತ್ತದೆ ಹಾಗೆ ಮುಂದೆ ಹೆಣ್ಣಿಗೆ ಹೆಣ್ಣೇ ಶತ್ರು ಎನಿಸಿಕೊಂಡು ಸ್ತ್ರೀ ಮಲೆಯಾಳದ ಅಧಿಕಾರಿಣಿ ಪದ್ಮಗಂಧಿಣಿ ಯುದ್ಧಕ್ಕೆ ಬರುತ್ತಾಳೆ ಆವಾಗ ಪದ್ಮಗಂಧಿಣಿ ಕೈಸೋತು ಮಿತ್ರಳಾಗುತ್ತಾಳೆ ನಂತರ ಮೀನಾಕ್ಷಿ ದೇವಲೋಕದಲ್ಲಿ ತನ್ನ ಪರಾಕ್ರಮ ತೋರಿಸಿ ಶಹಭಾಸ್ ಗಿರಿಯನ್ನು ಪಡೆಯುತ್ತಾಳೆ ನಂತರ ಕೈಲಾಸವನ್ನು ಸೇರಿ ಈಶ್ವರದಲ್ಲಿ ಯುದ್ಧ ಮಾಡುವಾಗ ಇವನೇ ನನ್ನ ಪತಿ ಎಂದು ತಿಳಿದು ಶರಣು ಹೋಗುತ್ತಾಳೆ ಇಲ್ಲಿ ತನ್ನ ವರಾನ್ವೇಷಣೆ ಫಲಗೊಂಡ ಆಕೆ ಈಶ್ವರನಿಗೆ ಸತಿಯಾಗಿ ಬಾಳುತ್ತಾಳೆ.
ಫೆಬ್ರವರಿ 24, ಶುಕ್ರವಾರ
ನಾಟಕ: ರೈಲು ಭೂತ
ತಂಡ: ಅಮೋಘ (ರಿ.) ಹಿರಿಯಡಕ
ಮೂಲ: ಆರ್ನೋಲ್ಡ್ ರಿಡ್ಲೆ
ರೂಪಾಂತರ: ಡಾ. ಪಾರ್ವತಿ ಜಿ. ಐತಾಳ್
ರಚನೆ/ನಿರ್ದೇಶನ: ಪ್ರದೀಪ್ ಚಂದ್ರ ಕುತ್ಪಾಡಿ
ಪ್ರಾಯೋಜಕರು: ಶ್ರೀ ಜಿ.ಎಂ. ಸುಕುಮಾರ್ ಶೆಟ್ಟಿ, ಶಾಸಕರು, ಬೈಂದೂರು ವಿಧಾನಸಭಾ ಕ್ಷೇತ್ರ
ರೈಲು ಭೂತ ನಮ್ಮ ದೇಶದಲ್ಲಿ ಜ್ವಲಂತವಾಗಿರುವ ನಕ್ಸಲಿಯರ ಸಮಸ್ಯೆ ಮೇಲೆ ಬೆಳಕು ಚೆಲ್ಲುವ ಮಹತ್ವದ ನಾಟಕ. ಹಳ್ಳಿಯ ರೈಲ್ವೆ ಸ್ಟೇಷನ್ ಬಳಿ ರೈಲು ಭೂತದ ಕಥೆಯೊಂದು ಹಬ್ಬಿ ಅದರ ಸುತ್ತ ನಡೆಯುವ ಘಟನೆಗಳೇ ನಾಟಕದ ವಸ್ತು.
ಮೂಲದಲ್ಲಿ ಗೋಸ್ಟ್ ಟ್ರೈನ್ ಎಂಬ ಶೀರ್ಷಿಕೆಯ ಈ ನಾಟಕವನ್ನು ಅರ್ನಾಲ್ಡ್ ರಿಡ್ಲೆ ರಂಗಕ್ಕಾಗಿ ಬರೆದು ಅದು ರಂಗದ ಮೇಲೆ ಪ್ರಸ್ತುತಪಡಿಸಲ್ಪಟ್ಟಿತು. ಲವಲವಿಕೆಯ ಹ್ರಸ್ವ ಸಂಭಾಷಣೆಗಳು ನವಿರಾದ ಹಾಸ್ಯ, ಸಂಬಂಧಗಳ ಸೂಕ್ಷ್ಮತೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಾ ಹೋಗುವ ಕುತೂಹಲಕಾರಿ ಸನ್ನಿವೇಶಗಳಿಂದ ಕೂಡಿದ ಈ ನಾಟಕವನ್ನು ಪಾರ್ವತಿ ಜೀ ಐತಾಲ್ ಇಂಗ್ಲೀಷ್ ನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿಕೊಂಡ ಅಮೋಘ ಎನ್ನುವಂತಹ ಸಂಸ್ಥೆಯು ಈ ನಾಟಕವನ್ನು ಪ್ರಸ್ತುತಪಡಿಸುತ್ತಾ ಇದೆ ಈ ನಾಟಕವನ್ನು ಚಂದ್ರಾಕು ಉತ್ಪಾದಿ ನಿರ್ದೇಶಿಸಿದ್ದಾರೆ ಶೋಧರ್ ಏರ್ಮಲ್ ಈ ನಾಟಕಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ