ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠ ಮತ್ತು ಶ್ರೀಕೃಷ್ಣ ಮಠ ಉಡುಪಿಯಲ್ಲಿ, ರಾಗ ಧನ ಸಂಸ್ಥೆ (ರಿ) ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪ್ರಸ್ತುತ ಪಡಿಸುವ ‘ರಾಗರತ್ನಮಾಲಿಕೆ -25’ ಸಂಗೀತ ಕಾರ್ಯಕ್ರಮವು ದಿನಾಂಕ 02-06-2024ರಂದು ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು.
ವಿದ್ವಾನ್ ಪ್ರಣವಶ್ರೀ ಯಶಸ್ವಿ ಸುಬ್ಬರಾವ್ ಮತ್ತು ಅವರ ಶಿಷ್ಯ ಚಿರಂಜೀವಿ ಮೋಕ್ಷಿತ್ ಯಸ್. ಬೆಂಗಳೂರು ಇವರ ದ್ವಂದ್ವ ವಯೊಲಿನ್ ವಾದನ ಕಚೇರಿ ನಡೆಯಿತು. ಮೃದಂಗದಲ್ಲಿ ಡಾ. ಅಕ್ಷಯ ನಾರಾಯಣ ಕಾಂಚನ ಮತ್ತು ಘಟಂನಲ್ಲಿ ವಿದ್ವಾನ್ ಯಸ್. ಮಂಜುನಾಥ್ ಮೈಸೂರು ಸಹಕರಿಸಿದರು.