ಮೂಲ್ಕಿ : ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್ ಇದರ ಸಂಯೋಜನೆಯಲ್ಲಿ ‘ಒಡ್ಡೋಲಗ’ ಯಕ್ಷಗಾನ ವಿಶೇಷ ಸ್ಪರ್ಧಾ ಕಾರ್ಯಕ್ರಮವು ದಿನಾಂಕ 02-06-2024 ರಂದು ಮೂಲ್ಕಿ ಕೆರೆಕಾಡುವಿನ ತನು ಎಲೆಕ್ಟ್ರಿಕಲ್ಸ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉದ್ಯಮಿ ಅಜಿತ್ ಕೆರೆಕಾಡು ಮಾತನಾಡಿ “ಯಕ್ಷಗಾನದಂತಹ ಸಮಷ್ಟಿಯ ಕಲೆಯಿಂದ ಇಂದು ಸಾಂಸ್ಕೃತಿಕ ಪರಂಪರೆ ಉಳಿದಿದ್ದು, ಈ ಕಲೆಯಲ್ಲಿ ಇನ್ನೂ ಹೆಚ್ಚು ಮಕ್ಕಳನ್ನು ತೊಡಗಿಸಿಕೊಂಡು, ಕಲಾ ಪ್ರಕಾರಗಳಲ್ಲಿ ಯಕ್ಷಗಾನದ ಮಹತ್ವವನ್ನು ತಿಳಿಹೇಳಬೇಕು.” ಎಂದು ಹೇಳಿದರು. ಶ್ರೀ ಕ್ಷೇತ್ರ ದೇಂದಡ್ಕ ಇಲ್ಲಿನ ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕೆರೆಕಾಡು ಯಕ್ಷಕಲಾ ಫೌಂಡೇಶನ್ ಇದರ ಅಧ್ಯಕ್ಷರಾದ ಜಯಂತ್ ಅಮೀನ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕರ್ಯಕ್ರಮದಲ್ಲಿ ಕೆರೆಕಾಡು ಶ್ರೀಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಶಾಂತ್ ಕೆರೆಕಾಡು, ಯಕ್ಷಗಾನ ಕಲಾವಿದರಾದ ಜಿತೇಶ್ ಕುಲಾಲ್ ಸೂರಿಂಜೆ, ಶ್ರೀಪಾದ್ ಭಟ್, ಫೌಂಡೇಶನ್‌ನ ದುರ್ಗಾಪ್ರಸಾದ್, ರೇಷ್ಮಾ ಗಣೇಶ್, ಪ್ರೇಮಲತಾ, ಅಭಿಜಿತ್, ಅಜಿತ್, ಅನ್ವಿತಾ, ವಾಣಿ, ವಿಜೇತಾ ಶೆಟ್ಟಿ, ಉಷಾ ಪರಮೇಶ್ವರ, ಶ್ರೇಯಸ್, ನೀಲೇಶ್ ಆಚಾರ್ಯ, ಶಶಾಂಕ್, ದಿವ್ಯಶ್ರೀ, ಸಮೀಕ್ಷಾ, ನರೇಶ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮೂಕಾಂಬಿಕಾ ಸ್ವಾಗತಿಸಿ, ಧನಂಜಯ ಶೆಟ್ಟಿಗಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಉಷಾ ನರೇಂದ, ನಿರೂಪಿಸಿ, ಯಶೋದಾ ಅಜಿತ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪಾಂಚಜನ್ಯ, ಕೃಷ್ಣ ಲೀಲೆ ಹಾಗೂ ಕಂಸವಧೆ ಕಾಲಮಿತಿ ಯಕ್ಷಗಾನ ಪ್ರದರ್ಶನಗೊಂಡಿತು. ಸಮಾರೋಪದಲ್ಲಿ ಫೇಮಸ್ ಯೂತ್ ಕ್ಲಬ್ ಅಧ್ಯಕ್ಷ ಭಾಸ್ಕರ ಅಮೀನ್, ಇಂಜಿನಿಯರ್ ಕೃಷ್ಣ ಮೂರ್ತಿ ರೆಡ್ಡಿ ಬಹುಮಾನ ವಿತರಿಸಿದರು. ರಾಜವೇಷದಲ್ಲಿ ಭವಿಶ್, ಪುಂಡು ವೇಷದಲ್ಲಿ ಶಿವಾನಿ, ಹಾಸ್ಯದಲ್ಲಿ ಉತ್ತಮ್, ಬಣ್ಣದ ವೇಷದಲ್ಲಿ ದುರ್ಗಾಕಿರಣ್ ಬಹುಮಾನ ಪಡೆದರು.