ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪೇತ್ರಿಯ ದಿ. ವೆಂಕಟೇಶ್ ಮರಕಾಲ ಹಾಗೂ ಗಿರಿಜಾ ದಂಪತಿಗಳ ಮಗನಾಗಿ 14.03.1991ರಂದು ರಾಘವೇಂದ್ರ ಪೇತ್ರಿ ಅವರ ಜನನ. 10ನೇ ತರಗತಿವರೆಗೆ ಇವರ ವಿದ್ಯಾಭ್ಯಾಸ.
ಯಕ್ಷಗಾನದ ಪ್ರಾಥಮಿಕ ಶಿಕ್ಷಣವನ್ನು ಮಂಜುನಾಥ ಪ್ರಭು, ರಾಧಾಕೃಷ್ಣ ನಾಯ್ಕ್ ಬಳಿ ಕಲಿತು ನಂತರ ಮಂದಾರ್ತಿ ಕೇಂದ್ರದಲ್ಲಿ ಗುರುಗಳಾದ ಹಾರಾಡಿ ರಮೇಶ್ ಗಾಣಿಗ ಇವರಲ್ಲಿ ಹೆಚ್ಚಿನ ವಿದ್ಯೆ ಹೆಜ್ಜೆ ಕಲಿತರು.
ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಅಂತ ಯಾರಿಲ್ಲ. ಶಾಲಾ ದಿನಗಳಲ್ಲಿ ಒಂದೆರಡು ವೇಷ ಮಾಡಿದ ಇವರು, ಮೇಳಗಳ ಆಟ ನೋಡಿ ನಾನು ಕಲಾವಿದ ಆಗಬೇಕೆಂದು 10ನೇ ತರಗತಿ ನಂತರ ಮಂದಾರ್ತಿ ಕೇಂದ್ರ ಸೇರಿ ಯಕ್ಷಗಾನವನ್ನು ಕಲಿತರು.
ನೆಚ್ಚಿನ ಪ್ರಸಂಗಗಳು:-
ದೇವಿ ಮಹಾತ್ಮೆ, ಹಿರಣ್ಯಾಕ್ಷ ಕಾಳಗ, ರಾವಣ ವಧೆ, ವಾಲಿ ಸುಗ್ರೀವ, ಭೀಷ್ಮ ವಿಜಯ, ಕಾರ್ತವೀರ್ಯ, ಗದಾಯುದ್ಧ, ಕನಕಾಂಗಿ ಕಲ್ಯಾಣ, ರತಿ ಕಲ್ಯಾಣ, ಸೀತಾ ಪರಿತ್ಯಾಗ ಇತ್ಯಾದಿ.
ದೇವಿ ಮಹಾತ್ಮೆ, ಹಿರಣ್ಯಾಕ್ಷ ಕಾಳಗ, ರಾವಣ ವಧೆ, ವಾಲಿ ಸುಗ್ರೀವ, ಭೀಷ್ಮ ವಿಜಯ, ಕಾರ್ತವೀರ್ಯ, ಗದಾಯುದ್ಧ, ಕನಕಾಂಗಿ ಕಲ್ಯಾಣ, ರತಿ ಕಲ್ಯಾಣ, ಸೀತಾ ಪರಿತ್ಯಾಗ ಇತ್ಯಾದಿ.
ನೆಚ್ಚಿನ ವೇಷಗಳು:-
ಮಹಿಷ, ವೀರಭದ್ರ, ಹಿರಣ್ಯಾಕ್ಷ, ದುಶ್ಯಾಸನ, ವಾಲಿ, ಸುಗ್ರೀವ, ಸಾಲ್ವ, ಕೌಂಡ್ಲಿಕ, ರಕ್ತಚಂಗ, ಶುಂಭ, ರಕ್ತಬೀಜಾಸುರ, ವಿದ್ಯುನ್ಮಾಲಿ, ದ್ರೋಣ, ಜಮದಗ್ನಿ, ಘಟೋತ್ಕಚ, ಚಂದಗೋಪ, ರಾಮ, ಶತ್ರುಘ್ನ ಇತ್ಯಾದಿ.
ಮಹಿಷ, ವೀರಭದ್ರ, ಹಿರಣ್ಯಾಕ್ಷ, ದುಶ್ಯಾಸನ, ವಾಲಿ, ಸುಗ್ರೀವ, ಸಾಲ್ವ, ಕೌಂಡ್ಲಿಕ, ರಕ್ತಚಂಗ, ಶುಂಭ, ರಕ್ತಬೀಜಾಸುರ, ವಿದ್ಯುನ್ಮಾಲಿ, ದ್ರೋಣ, ಜಮದಗ್ನಿ, ಘಟೋತ್ಕಚ, ಚಂದಗೋಪ, ರಾಮ, ಶತ್ರುಘ್ನ ಇತ್ಯಾದಿ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಮೇಳದ ಹಿರಿಯ ಕಲಾವಿದರಲ್ಲಿ , ಭಾಗವತರ ಬಳಿ ಪ್ರಸಂಗ ಅವಲೋಕನ ಮಾಡಿ ಪ್ರಸಂಗದ ನಡೆಯ ಬಗ್ಗೆ ತಿಳಿದು ತಯಾರಿ ಮಾಡುತ್ತೇನೆ ಎಂದು ಹೇಳುತ್ತಾರೆ ರಾಘವೇಂದ್ರ ಪೇತ್ರಿ.
ಮೇಳದ ಹಿರಿಯ ಕಲಾವಿದರಲ್ಲಿ , ಭಾಗವತರ ಬಳಿ ಪ್ರಸಂಗ ಅವಲೋಕನ ಮಾಡಿ ಪ್ರಸಂಗದ ನಡೆಯ ಬಗ್ಗೆ ತಿಳಿದು ತಯಾರಿ ಮಾಡುತ್ತೇನೆ ಎಂದು ಹೇಳುತ್ತಾರೆ ರಾಘವೇಂದ್ರ ಪೇತ್ರಿ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಮೊದಲಿಗಿಂತಲೂ ಈಗ ಯಕ್ಷಗಾನಕ್ಕೆ ಬರುವ ಯುವ ಪೀಳಿಗೆ ವೃತ್ತಿಗಾಗಿ ಬರುವ ಸಂಖ್ಯೆ ಕಡಿಮೆ ಆಗಿದೆ. ಮೊದಲಿಗಿಂತಲೂ ಈಗಿನ ಕಲಾವಿದರ ಸಂಭಾವನೆ ಹೆಚ್ಚಾಗಿದೆ.
ಮೊದಲಿಗಿಂತಲೂ ಈಗ ಯಕ್ಷಗಾನಕ್ಕೆ ಬರುವ ಯುವ ಪೀಳಿಗೆ ವೃತ್ತಿಗಾಗಿ ಬರುವ ಸಂಖ್ಯೆ ಕಡಿಮೆ ಆಗಿದೆ. ಮೊದಲಿಗಿಂತಲೂ ಈಗಿನ ಕಲಾವಿದರ ಸಂಭಾವನೆ ಹೆಚ್ಚಾಗಿದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪ್ರಸ್ತುತ ವಿದ್ಯಮಾನದಲ್ಲಿ ಪ್ರೇಕ್ಷಕರ ಕೆಲಸದ ಒತ್ತಡದಿಂದ ಬೆಳಿಗ್ಗೆ ತನಕ ಆಟ ನೋಡುವವರ ಸಂಖ್ಯೆ ಕಡಿಮೆ ಆಗಿದೆ. ಕಾಲಮಿತಿಗೆ ಒಗ್ಗಿಕೊಂಡಿದ್ದಾರೆ. ಪೌರಾಣಿಕ ಪ್ರಸಂಗವನ್ನು ಆಸ್ವಾದಿಸುವವರೂ ಇದ್ದಾರೆ. ಆದರೆ ಈಗಿನ ಯುವ ಪೀಳಿಗೆ ಸಾಮಾಜಿಕ ಪ್ರಸಂಗವನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಕಲಾಮಾತೆಯ ಅನುಗ್ರಹದಿಂದ ಜೀವನದುದ್ದಕ್ಕೂ ಗೆಜ್ಜೆ ಕಟ್ಟಬೇಕೆಂಬ ಆಸೆ ಇದೆ.
ಕಲಾಮಾತೆಯ ಅನುಗ್ರಹದಿಂದ ಜೀವನದುದ್ದಕ್ಕೂ ಗೆಜ್ಜೆ ಕಟ್ಟಬೇಕೆಂಬ ಆಸೆ ಇದೆ.
ಮಂದಾರ್ತಿ ಮೇಳದಲ್ಲಿ 9 ವರ್ಷ, ಕೋಟ ಅಮೃತೇಶ್ವರಿ ಮೇಳದಲ್ಲಿ 10 ವರ್ಷ.. ಹೀಗೆ ಯಕ್ಷಗಾನ ರಂಗದಲ್ಲಿ ಒಟ್ಟು 19 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
Max Life Insurance ವತಿಯಿಂದ ಕಲಾರತ್ನ ಪ್ರಶಸ್ತಿ, ಕಾರ್ಕಡ ಸಾಲಿಗ್ರಾಮ ಹಾಗೂ ಕೋಟದಲ್ಲಿ ಸನ್ಮಾನಗಳು ದೊರೆತಿರುತ್ತದೆ.
ರಾಘವೇಂದ್ರ ಪೇತ್ರಿ ಅವರು 22-05-2022ರಂದು ನಿರೀಕ್ಷಾ ಅವರನ್ನು ಮದುವೆಯಾಗಿ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ತಂದೆ, ತಾಯಿ, ಪತ್ನಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ರಾಘವೇಂದ್ರ ಪೇತ್ರಿ ಹೇಳುತ್ತಾರೆ.
- ಶ್ರವಣ್ ಕಾರಂತ್ ಕೆ, ಶಕ್ತಿನಗರ, ಮಂಗಳೂರು.