ಮಂಗಳೂರು. ಸಾಹಿತಿ, ವಿದ್ವಾನ್ ರಮಾನಾಥ ಕೋಟೆಕಾರು ಅಲ್ಪ ಕಾಲದ ಅಸೌಖ್ಯದಿಂದಾಗಿ ದಿನಾಂಕ 11-06-2024ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಇವರಿಗೆ 67ವರ್ಷ ವಯಸ್ಸಾಗಿತ್ತು.
ಸೋಮೇಶ್ವರ ಕೊಲ್ಯದ ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮಶಿಕ್ಷಣ ಕೇಂದ್ರದ ಮಾರ್ಗದರ್ಶಕರಾಗಿದ್ದರು. ಶ್ರೀ ಗೋಕರ್ಣನಾಥೇಶ್ವರ ಬ್ಯಾಂಕ್ ಇದರ ನಿರ್ದೇಶಕರಾಗಿ ಹಾಗೂ ಮಂಗಳೂರಿನ ಮಣ್ಣಗುಡ್ಡೆಯಲ್ಲಿರುವ ಶ್ರೀ ಸತ್ಯಸಾಯಿ ಸೇವಾ ಕೇಂದ್ರದಲ್ಲಿಯೂ ಸೇವೆ ಸಲ್ಲಿಸಿದ್ದರು.
ಬಿಲ್ಲವ ಸಮಾಜ ಟ್ರಸ್ಟ್ ಇದರ ಟ್ರಸ್ಟಿಯಾಗಿ, ಜಾನಪದ ಸಂಶೋಧಕರಾಗಿ, ಪರಿಣಿತ ಹಾರ್ಮೋನಿಯಂ ವಾದಕರಾಗಿ, ಖಚಿತ ಜ್ಞಾನದ ಭಜನಾಪಟುವಾಗಿ, ಸಾಹಿತಿಯಾಗಿ, ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ಪದವಿ ಪಡೆದಿದ್ದರು. ಹಲವಾರು ಪುಸ್ತಕ ಗಳನ್ನು ರಚಿಸಿದ್ದ ಇವರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಟೆಕಾರ್ ಬೀರಿ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮಂಗಳೂರಿನ ಹಂಪನ್ ಕಟ್ಟೆಯಲ್ಲಿ ದಶಕಗಳ ಕಾಲದ ಹಿಂದೆ ಸುದರ್ಶನ್ ಫ್ರೇಮ್ ವರ್ಕ್ಸ್ ಹಾಗೂ ಕೆಲವು ವರ್ಷಗಳ ಹಿಂದೆ ಕೊಡಿಯಲ್ ಬೈಲ್ ನಲ್ಲಿ ಸಾಯಿ ಫೋಟೋ ಫ್ರೇಮ್ ನಡೆಸುತ್ತಿದ್ದ ಇವರು ಪತ್ನಿ, ಓರ್ವ ಪುತ್ರಿ (ದೆಹಲಿಯಲ್ಲಿ ಮಕ್ಕಳ ವೈದ್ಯರಾಗಿದ್ದಾರೆ) ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Subscribe to Updates
Get the latest creative news from FooBar about art, design and business.
Previous Articleನಾಡೋಜ ಕವಿ ಕಯ್ಯಾರ ಕಿಞ್ಞಣ್ಣ ರೈಯವರ ಜನ್ಮ ದಿನಾಚರಣೆ