ಸುಳ್ಯ : ಸಂಧ್ಯಾ ರಶ್ಮಿ ಸಾಹಿತ್ಯ ಸಂಘ ಸುಳ್ಯ ಮತ್ತು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕ ಇವರ ಜಂಟಿ ಆಶ್ರಯದಲ್ಲಿ ಸಾಹಿತಿ ಶ್ರೀ ಸುಬ್ರಾಯ ಚೊಕ್ಕಾಡಿಯವರ ಬಗ್ಗೆ ‘ಸಾಹಿತ್ಯ ಸಂವಾದ ಮಾಲಿಕೆ’ ಕಾರ್ಯಕ್ರಮವು ದಿನಾಂಕ 17-06-2024ರಂದು ಪೂರ್ವಾಹ್ನ 10-30 ಗಂಟೆಗೆ ಕುರಂಜಿಬಾಗ್ ಸಂಧ್ಯಾ ರಶ್ಮಿ ಸಭಾಂಗಣದಲ್ಲಿ ನಡೆಯಲಿದೆ.
ಸಂಧ್ಯಾ ರಶ್ಮಿ ಸಾಹಿತ್ಯ ಸಂಘ ಇದರ ಅಧ್ಯಕ್ಷರಾದ ಶ್ರೀಮತಿ ಲೀಲಾ ದಾಮೋದರ ಅಧ್ಯಕ್ಷತೆ ವಹಿಸಲಿದ್ದು, ಸುಳ್ಯದ ಎನ್.ಎಂ.ಪಿ.ಯ ನಿವೃತ್ತ ಪ್ರಾಚಾರ್ಯರಾದ ಡಾ. ಪ್ರಭಾಕರ ಶಿಶಿಲ ವ್ಯಕ್ತಿತ್ವ ಪರಿಚಯ, ಸುಳ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಪದವೀಧರ ಸಹ ಶಿಕ್ಷಕಿ ಶ್ರೀಮತಿ ಚಂದ್ರಮತಿ ಕೆ. ಸಾಹಿತ್ಯ ಪರಿಚಯ ಮತ್ತು ಶ್ರೀ ಕೆ.ಆರ್. ಗೋಪಾಲಕೃಷ್ಣ, ಶ್ರೀಮತಿ ಗಿರಿಜಾ ಎಂ.ವಿ. ಶ್ರೀಮತಿ ಸತ್ಯವತಿ ಎಸ್. ಇವರು ಗೀತ ಗಾಯನ ನಡೆಸಿಕೊಡಲಿದ್ದಾರೆ.