ಹೊಸ ದೆಹಲಿ : ಕೇಂದ್ರ ಸಾಹಿತ್ಯ ಅಕಾಡೆಮಿ ಕೊಡಮಾಡುವ 2024ನೇ ಸಾಲಿನ ಸಾಲಿನ ‘ಯುವ ಪುರಸ್ಕಾರ’ ಪ್ರಕತಗೊಂಡಿದ್ದು, ವೈಶಾಲಿಯ ಆತ್ಮಕಥೆ ‘ಹೋಮ್‌ಲೆಸ್ ಗೋವಿಂಗ್ ಅಪ್ ಲೆಸ್ಬಿಯನ್ ಅಂಡ್ ಡೈಸೆಕ್ಸಿಕ್ ಇನ್ ಇಂಡಿಯಾ’ ಕೃತಿಗೆ ಮತ್ತು ಗೌರವ್ ಪಾಂಡೆ ಅವರ ಕವನ ಸಂಗ್ರಹ ‘ಸ್ಮೃತಿಯೋಂ ಕೆ ಬೀಚ್ ಗಿರೀ ಹೈ ಪೃಥ್ವಿ’ ಕವನ ಸಂಕಲನ ಪ್ರಶಸ್ತಿಗೆ ಆಯ್ಕೆಯಾಗಿದೆ. ಸುಮಾರು 10 ಕಾವ್ಯಗಳು, ಕಿರುಕಥೆಗಳ ಏಳು ಸಂಗ್ರಹಗಳು, ಎರಡು ಲೇಖನ ಸಂಗ್ರಹ ಮತ್ತು ಒಂದು ಗಝಲ್ ಪುಸ್ತಕ ಸಹಿತ ಹಲವು ಕೃತಿಗಳು ಯುವ ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಕನ್ನಡ ಬರಹಗಾರ್ತಿ ಶೃತಿ ಬಿ. ಆರ್., ಅಸ್ಸಾಮ್‌ನ ನಾರಾಯಣಜ್ಯೋತಿ, ಬಂಗಾಳದ ಸುತಪ ಚಕ್ರವರ್ತಿ, ರಾಣಿ ಬರೋ(ಬೋಡೋ), ರಿಂಕು ರಾಥೋಡ್ (ಗುಜರಾತ್), ಶ್ಯಾಮಕೃಷ್ಣನ್ ಆರ್.(ಮಲಯಾಳಂ), ಲೋಕೇಶ್ ರಘುರಾಮನ್ (ತಮಿಳ್), ರಮೇಶ್ ಕಾರ್ತಿಕ್ ನಾಯಕ್ (ತೆಲುಗು), ದೇವಿದಾಸ್ ಸೌದಾಗರ್ (ಮರಾಠಿ), ಸಂಜಯಕುಮಾರ್ ಪಾಂಡಾ(ಒಡಿಯಾ), ರಣಧೀರ್ (ಪಂಜಾಬಿ), ಸೋನಾಲಿ ಸುತರ್ (ರಾಜಸ್ಥಾನಿ), ಜಾವೇದ್ ಅಂಬರ್ ಮಿಸ್ಬಹಿ(ಉರ್ದು) ವೈಖಂ ಚಿಂಗ್ ಖೈಗನ್ಬಾ (ಮಣಿಪುರಿ) ಸೋನಾಲಿ ಸುತಾರಂ (ರಾಜಸ್ಥಾನಿ), ಸೂರಜ್ ಛಾಪಗೈನ್ (ನೇಪಾಳಿ), ರಾಣಿ ಬರೋ(ಬೋಡೋ), ಸಂಜಯ್ ಕುಮಾರ್ ಪಾಂಡಾ(ಒಡಿಯಾ), ಗೀತಾ ಪ್ರದೀಪ್ ರೂಪಾನಿ (ಸಿಂಧಿ), ಅಂಜನ್ ಕರ್ಮಾಕರ್(ಸಂತಾಲಿ) ಯುವ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾದ ಇತರರು. ಪುರಸ್ಕಾರವು ತಾಮ್ರ ಫಲಕ ಜತೆ 50ಸಾವಿರ ಮೊತ್ತದ ನಗದನ್ನು ಒಳಗೊಂಡಿರುತ್ತದೆ. ಪುರಸ್ಕಾರ ಪ್ರದಾನ ದಿನದಂದು ಇವನ್ನು ವಿಜೇತರಿಗೆ ಹಸ್ತಾಂತರಿಸಲಾಗುವುದು.
ಬಾಲ ಸಾಹಿತ್ಯ ಪುರಸ್ಕಾರಕ್ಕೆ ನಂದಿನಿ ಸೇನ್ ಗುಪ್ತಾರ ಐತಿಹಾಸಿಕ ಕಾಲ್ಪನಿಕ ಕಥೆ ‘ದ ಬ್ಲ್ಯೂ ಹಾರ್ಸ್ ಅಂಡ್ ಅದರ್ ಅಮೇಜಿಂಗ್ ಅನಿಮಲ್ ಸ್ಟೋರೀಸ್ ಫ್ರಂ ಇಂಡಿಯನ್ ಹಿಸ್ಟರಿ’ ಆತ್ಮ ಕಥೆ ಮತ್ತು ದೇವೇಂದ್ರ ಕುಮಾರ್ ಅವರ ’51 ಬಾಲ ಕಹಾನಿಯಾ’ ಜೊತೆಗೆ ಏಳು ಕಾದಂಬರಿಗಳು, ಆರು ಕಾವ್ಯಗಳು, ನಾಲ್ಕು ಕಥೆಗಳು, ಐದು ಕಿರುಕಥೆಗಳು, ಒಂದು ನಾಟಕ ಮತ್ತು ಐತಿಹಾಸಿಕ ಕಾಲ್ಪನಿಕ ಕಥೆಗಳು ಆಯ್ಕೆಯಾಗಿವೆ.
ಹರ್ಷ ಸದ್ಗುರು ಶೆತ್ಯೆ (ಕೊಂಕಣಿ), ಕೃಷ್ಣಮೂರ್ತಿ ಬಿಳಿಗೆರೆ (ಕನ್ನಡ), ಉಣ್ಣಿ ಅಮ್ಮಯಂಬಲಂ (ಮಲಯಾಳಂ), ಹರ್ಷದೇವ ಮಾಧವ್ (ಸಂಸ್ಕೃತ), ಯುವ ವಾಸುಕಿ (ತಮಿಳು), ಪಿ.ಚಂದ್ರಶೇಖರ ಆಜಾದ್ (ತೆಲುಗು), ರಂಜು ಹಜಾರಿಕ (ಅಸ್ಸಾಮಿ), ದೀಪನ್ ವಿಟಾ ರಾಯ್( ಬಂಗಾಳಿ), ಬರ್ಗಿನ್ ಜೆಕೊವಾ ಮಚಹರಿ (ಬೋಡೋ), ಬಿಷನ್ ಸಿಂಗ್ ದರ್ದಿ (ಡೋಗ್ರಿ), ಗಿರಾ ಪಿನಾಕಿನ್ ಭಟ್ (ಗುಜರಾತಿ), ಶಂಸುಲ್ ಇಸ್ಲಾಮ್ ಫಾರುಕಿ (ಉರ್ದು), ಮುಝಫರ್ ಹುಸೇನ್ ದಿಲ್ ಬರ್( ಕಾಶ್ಮೀರಿ), ನಾರಾಯಣಜಿ (ಮೈಥಿಲಿ), ಕ್ಷೇತ್ರಿ ಮಯೂನ್ ಸುಬದಾನಿ(ಮಣಿಪುರಿ), ಭರತ್ ಸಾಸನೆ (ಮರಾಠಿ), ಬಸಂತ ತಾಪಾ (ನೇಪಾಳಿ), ಮನಸ್ ರಂಜನ್‌ಸಮಾಲ್ (ಒಡಿಯಾ), ಕುಲದೀಪ್ ಸಿಂಗ್ ದೀಪ್ (ಪಂಜಾಬಿ), ಪ್ರಹ್ಲಾದ್ ಸಿಂಗ್‌ಜೋರ್ಡಾ (ರಾಜಸ್ಥಾನಿ), ದುಗಲ್ ಟುಡು (ಸಂತಾಲಿ), ಲಾಲ್ ಹೋಟ್‌ಚಾಂದಿನಿ ಲಾರ್ಛಾ (ಸಿಂಧಿ). ಬಾಲ ಸಾಹಿತ್ಯ ಪುರಸ್ಕಾರವು ತಾಮ್ರ ಫಲಕದ ಜತೆಗೆ 50ಸಾವಿರ ರೂಪಾಯಿ ಮೊತ್ತದ ಚೆಕ್ ಒಳಗೊಂಡಿದೆ.
Subscribe to Updates
Get the latest creative news from FooBar about art, design and business.
Previous Articleನೃತ್ಯ ಹಾಗೂ ಕಥೆ ಆನ್‌ಲೈನ್ ಸ್ಪರ್ಧೆ
Next Article ಜನಪದ ವಿದ್ವಾಂಸೆ ಡಾ. ಜಯಲಕ್ಷ್ಮೀ ಸೀತಾಪುರ ನಿಧನ