Subscribe to Updates

    Get the latest creative news from FooBar about art, design and business.

    What's Hot

    ಮಕ್ಕಳ ಕಲಾ ಲೋಕದ ಅಧ್ಯಕ್ಷರಾಗಿ ರಮೇಶ ಎಂ. ಬಾಯಾರು

    February 23, 2026

    ರಂಗ ವಿಮರ್ಶೆ | ಎಳೆ ಪ್ರತಿಭೆಗಳಿಗೆ ಸಾಕ್ಷಿಯಾದ ರಂಗ ಪ್ರಯೋಗಗಳು

    February 23, 2026

    ಮಂಗಳೂರು ವಿ.ವಿ. ಕಾಲೇಜಿನಲ್ಲಿ ಹಿರಿಯ ಲೇಖಕಿ ರೋಹಿಣಿಗೆ ಅಭಿನಂದನೆ

    February 23, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೈಕಂಪಾಡಿಯ ಮೀನಕಳಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಯಕ್ಷನಾಟ್ಯ ತರಬೇತಿ
    Yakshagana

    ಬೈಕಂಪಾಡಿಯ ಮೀನಕಳಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಯಕ್ಷನಾಟ್ಯ ತರಬೇತಿ

    June 24, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email



    ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಯಕ್ಷ ಶಿಕ್ಷಣ ಯೋಜನೆಯ ಅಡಿಯಲ್ಲಿ ಸರಕಾರಿ ಪ್ರೌಢ ಶಾಲೆ ಮೀನಕಳಿಯ – ಬೈಕಂಪಾಡಿ ಇಲ್ಲಿ 2024-25ನೇ ಸಾಲಿನ ಯಕ್ಷನಾಟ್ಯ ತರಬೇತಿಯು ದಿನಾಂಕ 19-06-2024ರಂದು ಉದ್ಘಾಟನೆಗೊಂಡಿತು. ಶ್ಯಾಮ ಕನ್ ಸ್ಟ್ರಕ್ಷನ್ಸ್ ನ ಇಂಜಿನಿಯರ್ ಶ್ರೀ ಪ್ರಸಿದ್ಧ ಪಿ. ಇವರು ಕಾರ್ಯಕ್ರಮ ಉದ್ಘಾಟಿಸಿ “ಯಕ್ಷಗಾನ ಎಲ್ಲಾ ಪ್ರಕಾರಗಳಲ್ಲಿಯೂ ಜ್ಞಾನ ವೃದ್ಧಿಗೆ ಪ್ರಯೋಜನವಾಗುತ್ತದೆ. ಯಕ್ಷಗಾನ ಬರೇ ಕಲೆಗೋಸ್ಕರ ಕಲಿಯುವುದಲ್ಲ, ನಮ್ಮ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗಲು ಸದಾವಕಾಶ” ಎಂದು ಹೇಳಿ ಶುಭ ಕೋರಿದರು.

    ಯಕ್ಷ ಶಿಕ್ಷಣ ಸಂಚಾಲಕರಾದ ಪಣಂಬೂರು ವಾಸುದೇವ ಐತಾಳ್ (ಯು.ಎಸ್.ಎ) ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿ ಶ್ರೀ ಶಿವರಾಮ ಪಣಂಬೂರು ಇವರು ಮಾತನಾಡುತ್ತ “ಶುದ್ಧ ಕನ್ನಡ ಇಂದಿಗೂ ಉಳಿದಿದೆ ಎಂದಾದರೆ ಅದು ಯಕ್ಷಗಾನದಿಂದ ಮಾತ್ರ. ಅಲ್ಲದೆ ಗುರು ಹಿರಿಯರನ್ನು ಗೌರವದಿಂದ ಕಾಣಲು ಇಂತಹ ಯಕ್ಷ ಶಿಕ್ಷಣದಿಂದ ಮಾತ್ರ ಸಾಧ್ಯ” ಎಂದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ಲಕ್ಷ್ಮೀನಾರಾಯಣ ಇವರು ಮಾತನಾಡುತ್ತಾ “ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುವಲ್ಲಿ ಯಕ್ಷಗಾನ ಕಲೆ ಮಹತ್ತರ ಪಾತ್ರವನ್ನು ವಹಿಸುತ್ತದೆ, ದೇಶ ವಿದೇಶಗಳಲ್ಲಿಯೂ ಕಲಾಗಾರರನ್ನು ಪ್ರೇರೇಪಿಸುವ ಜೊತೆಗೆ ನೂರಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಪಟ್ಲ ಫೌಂಡೇಶನ್ ಸಂಸ್ಥೆಯ ಕಾರ್ಯ ಶ್ಲಾಘನೀಯ” ಎಂದು ಹೇಳಿದರು. ಸಭಾಧ್ಯಕ್ಷರಾದ ಸುಧಾಕರ ಎಸ್. ಪೂಂಜ ಇವರು “ಯಕ್ಷಗಾನ ಕಲೆ ಮುಂದಿನ ಪೀಳಿಗೆಯ ಮುಖಾಂತರ ಶಾಶ್ವತವಾಗಿ ಬೆಳೆಯಬೇಕೆಂಬ ಉದ್ದೇಶ ನಮ್ಮದು. ಮುಂದಿನ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಯಕ್ಷಗಾನವನ್ನು ವೇದಿಕೆಯಲ್ಲಿ ಪ್ರದರ್ಶಿಸುವಂತಾಗಲಿ” ಎಂದು ಶುಭ ಹಾರೈಸಿದರು.

    ಘಟಕದ ಸಂಚಾಲಕರಾದ ವಿನಯ ಆಚಾರ್ ಹೊಸಬೆಟ್ಟು, ಪ್ರಧಾನ ಕಾರ್ಯದರ್ಶಿ ಬಾಳ ಗಂಗಾಧರ ಪೂಜಾರಿ, ಕೋಶಾಧಿಕಾರಿ ಟಿ.ಎನ್. ರಮೇಶ್, ಉಪಾಧ್ಯಕ್ಷರಾದ ಲೀಲಾಧರ ಶೆಟ್ಟಿ ಕಟ್ಲ, ಪಟ್ಲ ಫೌಂಡೇಶನ್ ಟ್ರಸ್ಟಿಗಳು ಪುಷ್ಷರಾಜ್ ಶೆಟ್ಟಿ ಕುಡುಂಬೂರು, ಶ್ರೀಮತಿ ಸಹನಾ ರಾಜೇಶ್ ರೈ, ಶ್ರೀಮತಿ ಶೈಲಾ ಶಂಕರ್ ಶೆಟ್ಟಿ, ಶ್ರೀಮತಿ ಸವಿತಾ ಭವಾನಿಶಂಕರ್ ಶೆಟ್ಟಿ, ಜೊತೆ ಕಾರ್ಯದರ್ಶಿ ಸತೀಶ್ ಶೆಟ್ಟಿ ಬಾಳಿಕೆ ಮತ್ತು ಘಟಕದ ಇತರ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಯಕ್ಷಗುರುಗಳಾದ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಇವರು ಯಕ್ಷಗಾನ ಕಲೆಯ ಬಗ್ಗೆ ಉತ್ತಮ ಮಾಹಿತಿಗಳನ್ನು ನೀಡುವುದರ ಜೊತೆಗೆ ಪ್ರಾರಂಭಿಕ ನಾಟ್ಯ ತರಬೇತಿಯನ್ನು ಆರಂಬಿಸಿದರು. ಉಸ್ತುವಾರಿ ಶಿಕ್ಷಕರಾದ ಶ್ರೀ ನಿರಂಜನ ನಾಯಕ ಇವರು ಸ್ವಾಗತಿಸಿ, ಸಹ ಶಿಕ್ಷಕರಾದ ಶ್ರೀಮತಿ ಗಾಯತ್ರಿ ವಂದಿಸಿ, ಸಹ ಶಿಕ್ಷಕರಾದ ಶ್ರೀ ಪ್ರೇಮನಾಥ ಇವರು ಕಾರ್ಯಕ್ರಮ ನಿರ್ವಹಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಕವಯತ್ರಿ ಜಲಜಾ ಶೇಖರ್ ಇವರ ‘ಪ್ರತೀಕ್ಷ’ ಮತ್ತು ‘ವಿಲೋಕನ’ ಕೃತಿಗಳ ಬಿಡುಗಡೆ ಸಮಾರಂಭ
    Next Article ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಸಂಗೀತೋತ್ಸವ ಹಾಗೂ ಗೌರವ ಸನ್ಮಾನ’ | ಜೂನ್ 29
    roovari

    Add Comment Cancel Reply


    Related Posts

    ಕದ್ರಿ ಯಕ್ಷ ಮಂಜುಳಾ ಮಹಿಳಾ ಬಳಗದವರಿಂದ ‘ಯಕ್ಷಗಾನ ತಾಳಮದ್ದಳೆ’ | ಫೆಬ್ರವರಿ 24

    February 21, 2026

    ಕೋಟ ‘ಅಹರ್ನಿಶ’ದಲ್ಲಿ ‘ಯಕ್ಷ ಗಾನ ವೈಭವ’

    February 21, 2026

    ಕೊಂಚಾಡಿಯಲ್ಲಿ ‘ಯಕ್ಷಮಂಜರಿ’ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹದ ಆಮಂತ್ರಣ ಪತ್ರಿಕೆ ಬಿಡುಗಡೆ

    February 20, 2026

    ‘ಸೇವಾ ಭೂಷಣ ಪ್ರಶಸ್ತಿ’ಗೆ ಹಿರಿಯ ಲೇಖಕ ಯು. ಶ್ರೀಧರ್ ಆಯ್ಕೆ

    February 19, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.