ಬೆಂಗಳೂರು : ಸ್ವರ ಫೌಂಡೇಷನ್ ಸಂಸ್ಥೆಯ ವತಿಯಿಂದ ‘ಸಂಗೀತೋತ್ಸವ ಹಾಗೂ ಗೌರವ ಸನ್ಮಾನ’ ಕಾರ್ಯಕ್ರಮವನ್ನು ದಿನಾಂಕ 29-06-2024ರಂದು ಸಂಜೆ 4-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದೆ.
ಸಭಾ ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಘನತೆವೆತ್ತ ರಾಜ್ಯಪಾಲರು ಸನ್ಮಾನ್ಯ ಶ್ರೀ ಥಾವರ್ ಚಂದ್ ಗೆಹ್ಲೋಟ್ ಇವರು ಉದ್ಘಾಟನೆ ಮಾಡಲಿರುವರು. ಶ್ರೀಮತಿ ಭಾರತಿದೇವಿ ರಾಜಗುರು, ಖ್ಯಾತ ಹಿಂದೂಸ್ತಾನಿ ಗಾಯಕರಾದ ಪಂಡಿತ್ ವಿನಾಯಕ ತೊರವಿ ಮತ್ತು ಪದ್ಮಶ್ರೀ ಪಂಡಿತ್ ವೆಂಕಟೇಶ ಕುಮಾರ ಇವರಿಗೆ ಸನ್ಮಾನಿಸಲಾಗುವುದು.
ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಶಿಷ್ಯರಾದ ಪಂಡಿತ್ ಶೈಲೇಶ ಭಾಗವತ್ ಮತ್ತು ಖ್ಯಾತ ಅಂತರಾಷ್ಟ್ರೀಯ ಸಿತಾರ್ ವಾದಕರಾದ ಉಸ್ತಾದ್ ರಫೀಕ್ ಖಾನ್ ಇವರಿಂದ ಶಹನಾಯಿ ಸಿತಾರ್ ‘ಜುಗಲ್ ಬಂದಿ’, ಖ್ಯಾತ ನೃತ್ಯಾಂಗನೆ ವಿದುಷಿ ವಾಣಿಗಣಪತಿಯವರ ಶಿಷ್ಯೆ ವಿದುಷಿ ಮಾಳವಿಕಾ ನಾಯರ್ ಇವರಿಂದ ‘ಭರತನಾಟ್ಯ’, ಖ್ಯಾತ ಹಿಂದೂಸ್ತಾನಿ ಗಾಯಕರಾದ ಡಾ. ಮುದ್ದು ಮೋಹನ್ ಇವರಿಂದ ಹಿಂದೂಸ್ತಾನಿ ಗಾಯನ, ಖ್ಯಾತ ಹಿಂದೂಸ್ತಾನಿ ಗಾಯಕರಾದ ಪದ್ಮಶ್ರೀ ಪಂಡಿತ್ ವೆಂಕಟೇಶ ಕುಮಾರ ಇವರಿಂದ ‘ಸಂಗೀತ ಕಾರ್ಯಕ್ರಮ’ ನಡೆಯಲಿದೆ. ತಬಲಾದಲ್ಲಿ ಪಂಡಿತ್ ವಿಶ್ವನಾಥ ನಾಕೋಡ, ಪಂಡಿತ್ ರಾಜೇಂದ್ರ ನಾಕೋಡ ಮತ್ತು ಪಂಡಿತ್ ಕೇಶವ ಜೋಶಿ ಹಾಗೂ ಹಾರ್ಮೋನಿಯಂನಲ್ಲಿ ಪಂಡಿತ್ ವ್ಯಾಸಮೂರ್ತಿ ಕಟ್ಟಿ ಮತ್ತು ಪಂಡಿತ್ ಡಾ. ರವೀಂದ್ರ ಕಾಟೋಟಿ ಇವರುಗಳು ಸಹಕರಿಸಲಿದ್ದಾರೆ.