ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಹಾಗೂ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ಜಂಟಿ ವಾರ್ಷಿಕೋತ್ಸವವು ಮುಂದಿನ ಡಿಸೆಂಬರ್ ತಿಂಗಳಲ್ಲಿ ‘ಆಂಜನೇಯ 56’ ಮತ್ತು ಮಹಿಳಾ ಯಕ್ಷಗಾನ ಸಂಘದ ‘ವಿಂಶತಿ’ ಕಾರ್ಯಕ್ರಮ ನಡೆಸುವ ಬಗ್ಗೆ ಪೂರ್ವಭಾವಿ ಸಭೆಯು ಸಂಘದ ಅಧ್ಯಕ್ಷ ಶ್ರೀ ಭಾಸ್ಕರ ಬಾರ್ಯ ಇವರ ಪರ್ಲಡ್ಕ ಮನೆಯ ‘ಅಗಸ್ತ್ಯ’ ಸಭಾಭವನದಲ್ಲಿ ದಿನಾಂಕ 28-06-2024ರಂದು ನಡೆಯಿತು.
ಸಭೆಯಲ್ಲಿ ಮಹಿಳಾ ಯಕ್ಷಗಾನ ಸಂಘದ ವಿಂಶತಿ ಕಾರ್ಯಕ್ರಮದ ಅಂಗವಾಗಿ ಇಪ್ಪತ್ತು ಮನೆ ಮನೆ ತಾಳಮದ್ದಳೆಗಳು ಹಾಗೂ ಪಾಂಚಜನ್ಯ ಆಕಾಶವಾಣಿಯಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಶ್ರೀ ಶ್ರೀಧರ ರಾವ್ ಕುಂಬ್ಳೆ ಇವರು ನಿರ್ವಹಿಸಿದ ಪ್ರಮುಖ ಸ್ತ್ರೀ ಪಾತ್ರ ಹಾಗೂ ಪುರುಷ ಪಾತ್ರಗಳ ‘ಯುಗಳ ಸ೦ವಾದ’ ಕಾರ್ಯಕ್ರಮಗಳನ್ನು ನೀಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ವಿಶೇಷವಾಗಿ ಖ್ಯಾತ ಮಹಿಳಾ ಕಲಾವಿದೆಯೊಬ್ಬರನ್ನು ಸನ್ಮಾನಿಸುವುದೆಂದು ನಿರ್ಧರಿಸಲಾಯಿತು. ಭಾಸ್ಕರ ಬಾರ್ಯ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಕಾರ್ಯದರ್ಶಿ ಆನಂದ್ ಸವಣೂರು, ಕೋಶಾಧಿಕಾರಿ ದುಗ್ಗಪ್ಪ ನಡುಗಲ್ಲು ಹಾಗೂ ಮಹಿಳಾ ಸಂಘದ ಅಧ್ಯಕ್ಷೆ ಪ್ರೇಮಲತಾ ರಾವ್, ಕಾರ್ಯದರ್ಶಿ ಹರಿಣಾಕ್ಷಿ ಜೆ. ಶೆಟ್ಟಿ ಮತ್ತು ಉಭಯ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಭಾಗವತ ಶ್ರೀ ಸತೀಶ್ ಇರ್ದೆ ಪ್ರಾರ್ಥಿಸಿ, ದುಗ್ಗಪ್ಪ ನಡುಗಲ್ಲು ಸ್ವಾಗತಿಸಿ, ಸಂಘದ ಗೌರವ ಕಾರ್ಯದರ್ಶಿ ರಂಗನಾಥ್ ರಾವ್ ವಂದಿಸಿದರು. ಕೆ. ಎನ್. ಸ್ವರ್ಣಲತಾ ಭಾಸ್ಕರ್ ಸಹಕರಿಸಿದರು.